ಶಿಸ್ತು ಮತ್ತು ಶ್ರದ್ದೆಯಿಂದ ಶಿಕ್ಷಣ ಪಡೆಯಿರಿ: ಬಿಇಓ ಅಂಬಿಗೇರ

ಶಿಸ್ತು ಮತ್ತು ಶ್ರದ್ದೆಯಿಂದ ಶಿಕ್ಷಣ ಪಡೆಯಿರಿ: ಬಿಇಓ ಅಂಬಿಗೇರ Get education with discipline and dedication: BEO Ambigera

ಶಿಗ್ಗಾವಿ 03 : ಬದಲಾದ ಶೈಕ್ಷಣಿಕ ವ್ಯವಸ್ಥೆ ಹಾಗೂ ಸನ್ನಿವೇಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ದೆಯಿಂದ ಶಿಕ್ಷಣ ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು. ತಾಲೂಕಿನ ಕೋಣನಕೇರಿ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಹಮ್ಮಿಕೊಂಡ 2026-27ನೇ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ ಇಂದಿನ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗಬಾರದು. ಅದರೊಂದಿಗೆ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಹಾಗೂ ಸಮಗ್ರ ವ್ಯಕ್ತಿತ್ವವಿಕಸನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಹೊಸ ಶೈಕ್ಷಣಿಕ ವರ್ಷದ ಮೊದಲದಿನದಂದು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಗುಲಾಬಿ ಹೂವು ಹಾಗೂ ಸಿಹಿ ತಿಂಡಿ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ಇದೇ ಬರಮಾಡಿಕೊಳ್ಳಲಾಯಿತು. ಸಂದರ್ಭದಲ್ಲಿ ನೆರೆದಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಶುಭ ಹಾರೈಸಿದರು. ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಬಸನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ತಾಪಂ ಇಓ ಮಂಜುನಾಥ ಸಾಳುಂಕೆ, ಅರುಣ ಹುಡೆದಗೌಡ್ರ, ಅಶೋಕ ಶಿಗ್ಗಾವ, ಮಂಜುನಾಥ ಹಿರೂರ, ಪರಮೇಶ ಎಂ.ಕೆ., ನದಾಫ್ ಅಲ್ಟಿ, ಫಕೀರಸ್ವಾಮಿ ಮಾಡುಜಿ, ಬಸವರಾಜ ಆಡಿನ, ನಾಗರಾಜ ದಾವಣಗೆರೆ, ಮಹೇಶ ಹುಲಸೂಗಿ, ಸುಭಾಸ ವಾಲ್ಮೀಕಿ, ಲಕ್ಷ್ಮಣ ಮಾಸನಕಟ್ಟಿ, ಅನಸೂಯಾ ಬಳ್ಳಾರಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು.