ಗ್ರಾಮಸ್ಥರು ನಮ್ಮೂರ ನಮ್ಮ ಶಾಲೆ ಅಭಿವೃದ್ಧಿಗೆ ಮುಂದಾಗಬೇಕು ಬಣಕಾರ
Villagers should take the initiative to develop our village and our school.
ರಾಣೇಬೆನ್ನೂರು 2: ತಾಲೂಕಿನ ಹುಲಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ 2026-2027 ನೇ ಸಾಲಿನ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಕಲಿಕೆ ಶಾಲಾ ಪ್ರಾರಂಭೋತ್ಸವವು ಅದ್ದೂರಿಯಾಗಿ ನಡೆಯಿತು. ಎಂದಿನಂತೆ ಶಾಲೆಗೆ ಧಾವಿಸಿದ ನೂರಾರು ಮಕ್ಕಳನ್ನು ಎಸ್. ಡಿ.ಎಂ.ಸಿ, ಅಧ್ಯಕ್ಷರು ಸದಸ್ಯರು ಮತ್ತು ಗ್ರಾಮದ ಮುಖಂಡರು ಮಕ್ಕಳಿಗೆ ಗುಲಾಬಿ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡು ಸಂಭ್ರಮಿಸಿದರು. ಅಲ್ಲದೆ ಆರಂಭದ ಅಂಗವಾಗಿ ಸಿಹಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗಾಗಿ ನಡೆದ ಮಹಾಸಭೆಯಲ್ಲಿ ಬಹು ಚರ್ಚೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಭಾಗವಹಿಸಿ ಸರ್ಕಾರಿ ಶಾಲೆಯ ಅಭಿವೃದ್ಧಿ ಕುರಿತು ಎಲ್ಲರೂ ಒಗ್ಗಟ್ಟಿನಿಂದ, ಮಕ್ಕಳ ದಾಖಲಾತಿಗಾಗಿ, ಶಾಲೆಯ ಪರಿಪೂರ್ಣ ಪ್ರಗತಿಗೆ ಮುಂದಾಗುವುದಾಗಿ ಗ್ರಾಮಸ್ಥರು ಪ್ರತಿಜ್ಞೆ ಮಾಡಿದರು.
ನಂತರ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸಲಾಯಿತು. ಅಧ್ಯಕ್ಷ ಮಲ್ಲಿಕಾರ್ಜುನಯ್ಯಹನಗೋಡಿಮಠ, ಅಧ್ಯಕ್ಷತೆ ವಹಿಸಿದ್ದರು. ಸ್ವಾಕರವೇ ತಾಲೂಕಾಧ್ಯಕ್ಷ ಚಂದ್ರ್ಪ ಬಣಕಾರ, ಸದಸ್ಯರಾದ ರೇವಣಸಿದ್ದಪ್ಪ ಮುದುಕನಗೌಡ್ರು, ಚಂದ್ರಶೇಖರ್ ಕುಡುಪಲಿ ಕುಮಾರ ಮುದಿಗೌಡ್ರು, ವೀರನಗೌಡ ಕೆಂಚನಗೌಡ್ರು, ನಿಂಗಮ್ಮ ದೊಡ್ಡಸಿದ್ದಪ್ಪನವರ, ರತ್ನಮ್ಮ ಹೊಸಳ್ಳಿ, ಫಕೀರಮ್ಮ ಅಣ್ಣೇರ, ಬೀರ್ಪ ಬಟ್ಟಂಗಿ, ದಿಳ್ಳೇಪ್ಪ ಕಟಗಿ,ನಿಂಗಪ್ಪ ಬಣಕಾರ, ಸೇರಿದಂತೆ ಮತ್ತಿತರರು ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು. ಮಾತನಾಡಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 