ರೈತರ ಮಕ್ಕಳು ಉದ್ಯಮಿಗಳಾಗಬೇಕು: ಸಚಿವ ನಿರಾಣಿ
ಮುಧೋಳ 18: ಗುರುವಿನ ಶೀಷ್ಯ ಮೀರಿಸಬೇಕು ಮಗ ತಂದೆಯನ್ನು ಮೀರಿಸಬೇಕು ನಾನು ಸಹ ಕೃಷಿ ಕುಟುಂಬದಲ್ಲಿ ಹುಟ್ಟಿ ಉದ್ಯಮಿಯಾಗಿದ್ದು ನಮ್ಮ ರೈತರ ಮಕ್ಕಳೂ ಸಹ ನಮಕ್ಕಿಂತ ಶ್ರೇಷ್ಠ ಉದ್ಯಮಿಗಳಾಗಬೇಕು ಎಂದು ಎಂದು ಬೃಹತ್ ಹಾಗೂ ಮದ್ಯಮ ಕೈಗಾರಿಕೆ ಸಚಿವ ಹಾಗೂ ನಿರಾಣಿ ಉದ್ಯಮ ಸಮೂಹದ ಅಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
ಶನಿವಾರ ನಗರದ ನಿರಾಣಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಡೆದ ವಿಜಯ ಸೌಹಾರ್ದ ಸಹಕಾರಿ ಬ್ಯಾಂಕಿನ 15 ನೆಯ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಭಾಗದಲ್ಲಿ ಅವಶ್ಯಕ ವಿರುವ ಯಾವೂದೇ ತರಹದ ಉದ್ಯಮಿ ಸ್ಥಾಪಿಸಲು ನಾನು ಸದಾ ನಿಮ್ಮ ಜೊತೆಗೆ ಇರುತ್ತೇನೆ.ಇದಕ್ಕಾಗಿ ಸರಕಾರದಲ್ಲಿ ಹೊಸ ಯೋಜನೆಗಳಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಯುವಕರು ಉದ್ಯಮಿಗಳಾಗಲು ಮುಂದೆ ಬಂದರೆ ಸಬ್ಸಡಿ ದರದಲ್ಲಿ ಜಮೀನು ಕೊಡುವ ಹಾಗೂ ಉದ್ಯಮಿ ಸ್ಥಾಪನೆ ಮಾಡಲು ಸಹಕಾರ ನೀಡಲಾಗುತ್ತದೆ ಇದರ ಉಪಯೋಗ ಪಡೆದುಕೊಳ್ಳಬೇಕು .
ರೈತರ ಹಿತ ಕಾಪಾಡುವುದು ಎಂ.ಆರ್.ಎನ್ ಸಂಸ್ಥೆಯ ಮುಖ್ಯ ದ್ಯೇಯವಾಗಿದೆ. ರೈತರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸಂಸ್ಥೆ ಸದಾ ಸಹಾಯ ಮಾಡುತ್ತದೆ ಕರ್ನಾಟಕದಲ್ಲಿ ಹೊಸ ಕೈಗಾರಿಕೆಗಳನ್ನು ಆರಂಭಿಸಲು ಸಾಕಷ್ಟು ಅವಕಾಶಗಳಿವೆ. ರೈತರು ತಮ್ಮ ಮಕ್ಕಳನ್ನು ಉದ್ದಿಮೆದಾರರನ್ನಾಗಿ ಬೆಳೆಸಲು ಮುಂದಾಗಬೇಕು. ಯುವಕರು ಉದ್ದಿಮೆದಾರರಾಗಿ ಬೆಳೆಯುವುದಕ್ಕೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧವಾಗಿದೆ. ಯುವಕರ ಕೌಶಲ್ಯ ಅಭಿವೃದ್ಧಿಗೆ ಸರಕಾರದ ಪರವಾಗಿ ಉಚಿತ ಊಟ ವಸತಿ ಒದಗಿಸಲಾಗುವುದು. ಬ್ಯಾಂಕ್ ಸಾಲ ಪಡೆಯುವುದಕ್ಕೆ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಹರ್ಷಾನಂದ ಸ್ವಾಮೀಜಿ, ಅಮೃತಾನಂದ ಸ್ವಾಮೀಜಿ ಮತ್ತು ಗುರುಪ್ರಸಾದ ಸ್ವಾಮೀಜಿ ಕಾರ್ಯಕ್ರಮ ಸಾನಿಧ್ಯ ವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ಬ್ಯಾಂಕಿನ ಅಧ್ಯಕ್ಷ ಹಣಮಂತ ನಿರಾಣಿ ಅವರು ಪ್ರಸಕ್ತ ವರ್ಷದಲ್ಲಿ ವಿಜಯ ಸೌಹಾರ್ದ ಬ್ಯಾಂಕ್ 219 ಲಕ್ಷ ರೂಪಾಯಿ ಲಾಭ ಗಳಿಸಿದೆ. ಪ್ರಶಕ್ತ ವರ್ಷದಲ್ಲಿ 15 ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡಿರುವುದು ರಾಜ್ಯಮಟ್ಟದಲ್ಲಿ ದಾಖಲೆಯಾಗಿದೆ. ಈ ವರ್ಷ 25ಅ ಡಿವ್ಹಿಡೆಂಡ್ ಘೋಷಿಸಲಾಗಿದೆ. ವಿಜಯ ಸೌಹಾರ್ದ ಬ್ಯಾಂಕ್ ರಾಜ್ಯದಲ್ಲಿ 61 ಶಾಖೆಗಳನ್ನು ಹೊಂದಿದೆ. 15 ಹೊಸ ಶಾಖೆಗಳನ್ನು ಆರಂಭಿಸಲು ಅನುಮತಿ ದೊರೆತಿದೆ. ನಮ್ಮ ಬ್ಯಾಂಕ್ ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಪಿ.ಎಚ್ ಪೂಜಾರ ಅವರನ್ನು ಸನ್ಮಾನಿಸಲಾಯಿತು.
ನಿರಾಣಿ ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರಾಣಿ ಸಮೂಹ ಉದ್ದಿಮೆಯಲ್ಲಿ ಗಳಿಸಿದ ಲಾಭವನ್ನು ಎಂ.ಆರ್.ಎನ್ ಫೌಂಡೇಶನ್ ಮೂಲಕ ಸಮಾಜಕ್ಕೆ ಅರ್ಿಸುತ್ತಿದೆ. ಸಮಾಜ ಸೇವೆಗಾಗಿ ಕಳೆದ ವರ್ಷ 4 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಸಾಹಿತಿ ಸಿದ್ಧರಾಜ ಪೂಜಾರ, ನಿವೃತ್ತ ಡಿ.ಡಿ.ಪಿ.ಆಯ್ ಎಂ.ಜಿ ದಾಸರ, ಡಿ.ಸಿ.ಸಿ. ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ, ಪಿ.ಆರ್ ಗೌಡರ ಮತ್ತು ಮಲ್ಲಪ್ಪ ಪೂಜಾರಿ ಮಾತನಾಡಿದರು.
ಬ್ಯಾಂಕಿನ ಉಪಾಧ್ಯಕ್ಷ ಕೆ.ವ್ಹಿ ಪಾಟೀಲ, ನಿರ್ದೇಶಕರಾದ ಆರ್.ವ್ಹಿ ಕರೆಹೊನ್ನ, ಸೋಮು ಗೋಸಾರ, ಇಬ್ರಾಹಿಂ ಸಾರವಾನ, ಸಿದ್ಧಪ್ಪ ಕಡಪಟ್ಟಿ, ಮುದುಕಪ್ಪ ಜಮಖಂಡಿ, ಮಲ್ಲಪ್ಪ ಕೊಪ್ಪದ, ಸಂಗಪ್ಪ ಹಲ್ಲಿ, ವೆಂಕಣ್ಣ ಗಿಡ್ಡಪ್ಪನ್ನವರ ಉಪಸ್ಥಿತರಿದ್ದರು.
ಬ್ಯಾಂಕಿನ ಜನರಲ್ ಮ್ಯಾನೇಜರ್ ಎಂ.ಎಚ್ ಪತ್ತೇನ್ನವರ ಸ್ವಾಗತಿಸಿದರು. ಆಯ್.ಜಿ ನ್ಯಾಮಗೌಡ ವಂದಿಸಿದರು. ವೆಂಕಟೇಶ ಜಂಬಗಿ ಕಾರ್ಯಕ್ರಮ ನಿರೂಪಿಸಿದರು.