ಮುಧೋಳ

ಎಸೆಸೆಲ್ಸಿ ಮಕ್ಕಳಿಗೆ ಪರೀಕ್ಷಾ ಮಾಹಿತಿ

ಎಸೆಸೆಲ್ಸಿ ಮಕ್ಕಳಿಗೆ ಪರೀಕ್ಷಾ ಮಾಹಿತಿ

ಮುಧೋಳ 02: ಸಮೀಪದ ಚಿಂಚಖಂಡಿಯ ರಾಮಣ್ಣ ಬಿ ಸೊನ್ನದ  ಸರಕಾರಿ ಪ್ರೌಢಶಾಲೆಯ  ಶಿಕ್ಷಕರು ಕೂಡಿ ಎಸೆಸೆಲ್ಸಿ ಮಕ್ಕಳಿಗಾಗಿ ಮನೆ ಬಾಗಿಲಿಗೆ ಪರೀಕ್ಷಾ ಪೂರ್ವಜ್ಞಾನ ಮಾಹಿತಿ ಎಂಬ ವಿನೂತನ ಯೋಜನೆ ಮಾಡಿ   ಚಿಂಚಖಂಡಿ  ಕೆಡಿ , ಬಿಕೆ , ಜಿರಗಾಳ, ಜಂಬಗಿ ಕೆಡಿ ಗ್ರಾಮದಲ್ಲಿ 2020 - 21 ನೇ ಸಾಲಿನ ಎಸ್ ಎಲ್ ಸಿ ಪರೀಕ್ಷೆ ಬರೆಯುವವರಿಗೆ ಸೊನ್ನದ  ಪ್ರೌಢ ಶಾಲೆಯ ಕನ್ನಡ ಶಿಕ್ಷಕರಾದ ಬಿ ಎಂ ಜಲಗೇರಿ  , ವಿಜ್ಞಾನ ಶಿಕ್ಷಕರಾದ ಎಲ್ ಎಸ್ ಕರೀಗೌಡರ, ಮತ್ತು ಸಮಾಜ ವಿಜ್ಞಾನ ಶಿಕ್ಷಕರಾದ ಎಸ್ ವೈ ರಾಠೋಡ ಈ ಮೂವರು ಕೂಡಿ 10ನೇ ತರಗತಿಯ 21 ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಪಾಲಕರ ಸಮ್ಮುಖದಲ್ಲಿ ಬದಲಾದ ಪರೀಕ್ಷಾ ಕ್ರಮ ಮತ್ತು ಓಒಖ  ಬಗ್ಗೆ ಮಾಹಿತಿ ನೀಡಿ.  ಕೋವಿಡ್ ಮತ್ತು ಖಓಕ ನಿಯಮಗಳನ್ನು ಸರಿಯಾಗಿ ಪಾಲಿಸಿ ಧೈರ್ಯವಾಗಿ ಯಾವುದೇ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆದು ಯಶಸ್ಸು ಆಗಿರಿ ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು. ಈ ಶಿಕ್ಷಕರು ಮಾಡಿದ ಕಾರ್ಯಕ್ಕೆ ಮುಧೋಳದ ಕ್ಷೇತ್ರಶಿಕ್ಷಣಾಧಿಕಾರಿ ವಿ ಎಂ ಪತ್ತಾರ್ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ