ಮುಂಡರಗಿ

ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸಿ: ಎಂ.ಜಿ.ಗಚ್ಚಣ್ಣವರ

ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸಿ: ಎಂ.ಜಿ.ಗಚ್ಚಣ್ಣವರ

ಮುಂಡರಗಿ 24: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಎಂ.ಜಿ.ಗಚ್ಚಣ್ಣವರ ಅಧ್ಯಕ್ಷತೆಯಲ್ಲಿ ಭಾನುವಾರ ಕಸಾಪ ಕಾರ್ಯಕಾರಿಣಿ ಮಂಡಳಿ ಸಭೆ ಸೇರಿತ್ತು. 

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ಮತ್ತು ಪಟ್ಟಣದ ಸಾಹಿತ್ಯಾಸಕ್ತರ ಆಶಯದಂತೆ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾರ್ಯಪೂರ್ಣಗೊಳಿಸಲು ಎಲ್ಲರೂ ಪ್ರಯತ್ನ ಮಾಡಬೇಕು ಎಂದರು. 

ಇದೇ ಸಂದರ್ಭದಲ್ಲಿ ವೀಣಾ ಪಾಟೀಲ ಅವರು ವಚನಗಳ ಸಂಗ್ರಹಕಾರ ಫ.ಗು.ಹಳಕಟ್ಟಿ ಅವರ ಸ್ಮರಣೆಗಾಗಿ ವಿದ್ಯಾರ್ಥಿಗಳಿಗೆ ವಚನ ಸ್ಪರ್ಧೆ ಏರಿ​‍್ಡಸಬೇಕು, ಹಾಗೆ ಅವರ ಕುರಿತು ಉಪನ್ಯಾಸ ಏರಿ​‍್ಡಸಬೇಕು ಎಂದು ಸಲಹೆ ನೀಡಿದರು. 

ನಿಕಟಪೂರ್ವ ಕಸಾಪ ಅಧ್ಯಕ್ಷ ಎಸ್‌.ಬಿ.ಹಿರೇಮಠ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ತನ್ನದೇಯಾದ ಘನತೆ ಹೊಂದಿದೆ. ಇದು ಕರ್ನಾಟಕದ ಜನತೆಯನ್ನು ಪ್ರತಿನಿಧಿಸುವ ಸಾಹಿತ್ಯ, ಸಾಂಸ್ಕೃತಿಕ ಬಿಂಬಿಸುವ ಸಂಸ್ಥೆಯಾಗಿದ್ದು, ಅದರ ಚೌಕಟ್ಟಿನಲ್ಲಿ ಅಧ್ಯಕ್ಷರು ಸೇರಿದಂತೆ ಕಾರ್ಯಕಾರಿಣಿ ಮಂಡಳಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಸಾಪ ದತ್ತಿ ಉಪನ್ಯಾಸ, ಗ್ರಾಮಕ್ಕೆ ಒಂದು ಸಾಹಿತ್ಯಗೋಷ್ಠಿ, ಕವಿಗೋಷ್ಠಿ, ತಾಲೂಕಿನ ಸ್ವಾತಂತ್ರ್ಯಯೋಧರ ಹೋರಾಟದ ಬಗ್ಗೆ ಪುಸ್ತಕ ಪ್ರಕಟನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಅಧ್ಯಕ್ಷರ ಮಾರ್ಗದರ್ಶನದಲ್ಲಿ ನಡೆಯುವಂತಾಗಲಿ ಎಂದರು. 

ಪ್ರಾ.ಡಿ.ಸಿ.ಮಠ, ಕವಿ ಶಂಕರ ಕುಕನೂರ, ಸಿ.ಕೆ.ಗಣಪ್ಪನವರ ಸೇರಿದಂತೆ ಇತರರು ಸಾಹಿತ್ಯ ಚಟುವಟಿಕೆಗಳ ಕುರಿತು ಹಲವು ವಿಷಯಗಳ ಬಗ್ಗೆ ಸಲಹೆ ನೀಡಿದರು. 

ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಕಸಾಪ ಸದಸ್ಯರ ಅಭಿಪ್ರಾಯ ಮತ್ತು ಸಾಹಿತ್ಯಾಸಕ್ತರ ವಿಶ್ವಾಸದೊಂದಿಗೆ ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವದು. ಈಗಾಗಲೇ ಹಲವಾರು ಕಾರ್ಯಕ್ರಮಗಳು ಜರುಗಿವೆ ಎಂದರು. 

 ಮಂಜುನಾಥ ಮುಧೋಳ, ಕೃಷ್ಣ ಸಾಹುಕಾರ, ಶಿವಪುತ್ರ​‍್ಪ ಇಟಗಿ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಮಂಜುಳಾ ಇಟಗಿ, ರಮೇಶ ಪಾಟೀಲ, ಆನಂದ ರಾಮೇನಹಳ್ಳಿ ಹಾಗೂ ಡಾ.ಆರ್‌.ಎಚ್‌.ಜಂಗಣವಾರಿ ಉಪಸ್ಥಿತರಿದ್ದರು. 


ಸುದ್ದಿ ಓದಿ