ಸ್ವಚ್ಛತೆಗೆ ಎಲ್ಲರ ಸಹಕಾರವು ಅಗತ್ಯ ಶಾಸಕ: ಡಾ ಚಂದ್ರು ಲಮಾಣಿ
Everyone's cooperation is necessary for cleanliness: MLA Dr Chandru Lamani
ಲಕ್ಷ್ಮೇಶ್ವರ 03: ಒಂದು ಗ್ರಾಮ ಪಟ್ಟಣ ನಗರವಾಗಲಿ ಸ್ವಚ್ಛತೆಯಾಗಿ ಇರುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯು ಅಗತ್ಯವಾಗಿದೆ ಪುರಸಭೆ ಯವರು ನಿಗದಿಪಡಿಸಿದ ಕಸ ಹಾಕುವ ಡಬ್ಬಿಯಲ್ಲಿ ಪುರಸಭೆ ಕಸ ಒಯ್ಯುವ ವಾಹನ ಬಂದ ಸಮಯದಲ್ಲಿ ಕಸ ಹಾಕಿ ಪುರಸಭೆಯೊಂದಿಗೆ ಸಹಕರಿಸುವುದು ಅಗತ್ಯವಾಗಿದೆ ಅದನ್ನು ಬಿಟ್ಟು ನಾವು ನಮ್ಮ ಸಮಯಕ್ಕೆ ಅನುಕೂಲ ಮಾಡಿಕೊಂಡು ಎಲ್ಲೆಂದರಲ್ಲಿ ಕಸ ಚೆಲ್ಲಿ ಪುರಸಭೆಯವರೇ ಸ್ವಚ್ಛತೆ ಮಾಡುತ್ತಿಲ್ಲ ಎಂದು ಅವರ ಮೇಲೆ ಆರೋಪ ಮಾಡುವುದ ಸರಿ ಅಲ್ಲಾ ಎಲ್ಲರೂ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಡಾ ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ವಾರ್ಡ್ ನಂಬರ್ 16 ರ ರಂಭಾಪುರಿ ನಗರದಲ್ಲಿ ಪುರಸಭೆಯಿಂದ ಪಟ್ಟಣದ ಸ್ವಚ್ಛತೆಗೆ ಆರಂಭಿಸಿರುವ ಹಸಿ ಕಸ ಒಣ ಕಸ ಸ್ಯಾನಿಟರಿ ತ್ಯಾಜ್ಯ ಸ್ವಚ್ಛತೆ ಒಟ್ಟು ನಾಲ್ಕು ತರನಾಗಿ ಕಸವನ್ನು ವಿಂಗಡಿಸಿ ಪುರಸಭೆಯ ವಾಹನ ಬಂದಾಗ ಹಾಕಬೇಕು ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರು ಮಾತನಾಡಿ ಪಟ್ಟದ ಸ್ವಚ್ಛತೆಗೆ ಪುರಸಭೆಯಿಂದ ಈಗಾಗಲೇ ಹೆಚ್ಚಿನ ಆದ್ಯತೆಗೆ ಕ್ರಮ ಕೈಗೊಳ್ಳಲಾಗಿದ್ದು ಅದರೊಂದಿಗೆ ಸಾರ್ವಜನಿಕರು ಸಹ ಎಲ್ಲಂದರೆ ಕಸ ಹಾಕದೆ ಪುರಸಭೆಯವರು ನಿಗದಿಪಡಿಸಿದ ಕಸದ ಡಬ್ಬಿಯಲ್ಲಿ ಮತ್ತು ಪುರಸಭೆ ವಾಹನ ಬಂದ ಸಮಯದಲ್ಲಿ ಕಸ ಹಾಕುವುದರೊಂದಿಗೆ ಎಲ್ಲರೂ ಸಹಕರಿಸಬೇಕು ಎಂದರು. ಈ ಸಮಯದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ ಮುದುಗಲ್, ವಿಜಯಕುಮಾರ್ ಕುಂಬಾರ, ಬಸವರಾಜ ಚಕ್ರಸಾಲಿ, ಗಂಗಾಧರ ಮೆಣಸಿನಕಾಯಿ ಸೇರಿದಂತೆ ಇನ್ನೂ ಅನೇಕ ಪುರಸಭೆಯ ಸಿಬ್ಬಂದಿ ವರ್ಗದವರು 16ನೇ ವಾರ್ಡಿನ ನಿವಾಸಿಗಳು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 