ಮುಂಡರಗಿ

ನಾಡಿನ ಪ್ರತಿಯೊಬ್ಬರ ಶಿಕ್ಷಕರಲ್ಲಿ ನಡೆ, ನುಡಿ, ಮನಸ್ಸು ಸುಚಿಯಾಗಿರಬೇಕು

ನಾಡಿನ ಪ್ರತಿಯೊಬ್ಬರ ಶಿಕ್ಷಕರಲ್ಲಿ ನಡೆ, ನುಡಿ, ಮನಸ್ಸು ಸುಚಿಯಾಗಿರಬೇಕು

ಮುಂಡರಗಿ 05:  ಈ ನಾಡಿನ ಪ್ರತಿಯೊಬ್ಬರ ಶಿಕ್ಷಕರಲ್ಲಿ ನಡೆ, ನುಡಿ, ಮನಸ್ಸು ಸುಚಿಯಾಗಿರಬೇಕು. ಇದರಿಂದ ಶಿಕ್ಷಕರು ಉತ್ತಮ ಸದ್ಗುಣಗಳನ್ನು ಕಂಡುಕೊಳ್ಳುತ್ತಾರೆ. ಆ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಎಸ್‌.ಎಸ್‌.ಪಾಟೀಲ್ ಹೇಳಿದರು. 

ಪಟ್ಟಣದ ಅಂಭಾಭವಾನಿ ಕಲ್ಯಾಣ ಮಂಟಪದಲ್ಲಿ ಕಲಾ ಶಿಕ್ಷಣ-ಸಂಸ್ಕೃತಿ ಪ್ರತಿಷ್ಠಾನದಿಂದ ಆದರ್ಶ ಶಿಕ್ಷಕಿಯಾಗಿದ್ದ ಶ್ರೀಮತಿ ಕಲಾವತಿ ಸೊಲಗಿಯವರ ಸಂಸ್ಮರಣೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ರವಿವಾರ ಏರಿ​‍್ಡಸಿದ “2022ರ ಮಕ್ಕಳ ಸ್ನೇಹಿ ಶಿಕ್ಷಕ” ಎಂಬ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಇಂದಿನ ಶಿಕ್ಷಕರು ಹಾಗೂ ಮಕ್ಕಳು ಹೆಚ್ಚು ಸುಸಂಸ್ಕೃತರಾಗಿರುತ್ತಾರೆ. ಆದರೆ ಕೆಲವು ಶಿಕ್ಷಕರು ಮಾತ್ರ ದುರಾಲೋಚನೆಯನ್ನು ಬಿಟ್ಟು ನೀತಿವಂತರಾಗಿ ಬಾಳುವುದನ್ನು ರೂಡಿಕೊಳ್ಳಬೇಕು. ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ಈ ಸೊಲಗಿ ಕುಟುಂಬವು ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಹೊಂದಿದೆ. ಆದರ್ಶ ಶಿಕ್ಷಕಿ ಕಲಾವತಿ ಸೊಲಗಿಯವರ ಅಗಲಿಕೆಯಿಂದ ಈಡಿ ಕುಟುಂಬವು ತುಂಬಾ ನೋವನ್ನು ಅನುಭವಿಸಿದೆ. ಅವರ ಸ್ಮರಣಾರ್ಥವಾಗಿ ಉತ್ತಮ ಚಟುವಟಿಕೆಯಿಂದ ಕೂಡಿದ ಮೂರು ಜನ ಶಿಕ್ಷಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸುವುದು ನಿಜಕ್ಕೂ ಶ್ಲಾಗನೀಯವಾಗಿದೆ ಎಂದು ಹೇಳಿದರು. 

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ನಾಡಿನಲ್ಲಿ ಹೆತ್ತ ತಾಯಿಯು ಮೊದಲ ತಾಯಿಯಾದರೆ, ಶಿಕ್ಷಕರು ಎರಡನೇ ತಾಯಿ ಇದ್ದಂತೆ. ಹೀಗಾಗಿ ಮಕ್ಕಳಿಗೆ ಶಿಕ್ಷಕರು ನೀಡುವ ಜ್ಞಾನವು ಉತ್ತಮವಾಗಿರಬೇಕು. ಏಕೆಂದರೆ ಇಂದಿನ ಎಲೆಕ್ಟ್ರಾನಿಕ್ ಕಾಲಮಾನದಲ್ಲಿ ಮಕ್ಕಳ ಮನಸ್ಸನ್ನು ನಿಯಂತ್ರಣದಲ್ಲಿ ಇಡಲಾಗದೇ ಮಕ್ಕಳಿಗೆ ಶಿಕ್ಷಣ ನೀಡುವುದು ಒಂದು ಸವಾಲಾಗಿದೆ. 

ಅಲ್ಲದೇ ಸರ್ಕಾರಿ ಶಾಲೆ ಎಂದರೆ ಬೇಸರದಿಂದ ಕಾಣುವ ಕೆಲವು ವ್ಯಕ್ತಿಗಳಿಗೆ, ಈ ಸೊಲಗಿ ಕುಟುಂಬದ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಉತ್ತಮವಾದ ಶಿಕ್ಷಣವನ್ನು ಪಡೆದು ಸಾಧನೆ ಮಾಡಿದ್ದಾರೆ. ಹಾಗೂ ಈ ಸೊಲಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ನಡೆ, ನುಡಿ ಉತ್ತಮವಾಗಿದೆ. ಈ ಕಲಾ ಶಿಕ್ಷಣ-ಸಂಸ್ಕೃತಿ ಪ್ರತಿಷ್ಠಾನ ಈಡೀ ರಾಜ್ಯದ ಪ್ರತಿಷ್ಠೆಯ ಪ್ರತಿಷ್ಠಾನವಾಗಿ ಬೆಳೆಯಲಿ ಎಂದು ಹಾರೈಸಿದರು. 

ಈ ವೇಳೆ ಕಸಪಾ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಮಾತನಾಡಿ, ಶಿಕ್ಷಣ ಎನ್ನುವದು ಸುಲಬದ ಮಾತಲ್ಲ. ಇದು ಪ್ರತಿಯೊಬ್ಬರಲ್ಲೂ ಬೆಳಕಾಗಬೇಕಾದರೆ ಎಲ್ಲರೂ ಉತ್ತಮ ಶಿಕ್ಷಕರ ಸಂಘ ಮಾಡಬೇಕು. ಒಳ್ಳೆಯ ನಡೆ, ನುಡಿಗಳನ್ನು ಕಂಡುಕೊಂಡು ಅಕ್ಷರ ಜ್ಞಾನವನ್ನು ಪಡೆಯಬೇಕಾಗುತ್ತದೆ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಈ ಖಾಸಗಿ ಸಂಸ್ಥೆಯಿಂದ ನೀಡುವ ಪ್ರಶಸ್ತಿಯು ಬೆಳೆಬಾಳುವಂತಹದ್ದು. ಈ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಕರಲ್ಲಿ ರಾಜಕೀಯ ಜ್ಞಾನಕ್ಕೆ ಸೀಮಿತವಾಗಬೇಕೆ ಹೊರತು ಅವರಿಂದ ಅಲೆದಾಡಬಾಡರದು ಎಂದು ಹೇಳಿದರು. 

ಈ ವೇಳೆ ಎಸ್‌.ಆರ್‌.ರಿತ್ತಿ, ಎಂ.ಎಚ್‌.ಸವದತ್ತಿ ಹಾಗೂ ಅಕ್ಕಮಹಾದೇವಿ ಕೋಟ್ಟೂರಶೆಟ್ಟರ್ ಇವರಿಗೆ “2022ರ ಮಕ್ಕಳ ಸ್ನೇಹಿ ಶಿಕ್ಷಕ” ಪ್ರಶಸ್ತಿ ಹಾಗೂ ತಲಾ ಐದು ಸಾವಿರ ನಗದು ಹಣವನ್ನು ನೀಡಿ ಗೌರವಿಸಲಾಯಿತು. ನಂತರ ಪ್ರಶಸ್ತಿ ಸ್ವೀಕರಿಸಿದ ಮೂರು ವ್ಯಕ್ತಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 

ಈ ವೇಳೆ ಲೇಖಕ ಪ್ರಭು ಸೊಪ್ಪನ್ ಮಾತನಾಡಿದರು. ಹಾಗೂ ಸೊಲಗಿ ವಿಶ್ವಾಸ್ ಸೊಲಗಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸೊಲಗಿ ಇವರು ಎಲ್ಲರನ್ನು ಸ್ವಾಗತಿಸಿದರು. ಇದೇ ವೇಳೆ ಕಲಾ ಶಿಕ್ಷಣ-ಸಂಸ್ಕೃತಿ ಪ್ರತಿಷ್ಠಾನದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಹಿರಿಯರಾದ ಕೆ.ವಿ.ಹಂಚಿನಾಳ, ಜಿ.ಎಸ್‌.ಅಣ್ಣಿಗೇರಿ, ಡಾ.ನಿಂಗೂ ಸೊಲಗಿ, ರಜನಿಕಾಂತ ದೇಸಾಯಿ, ಎಂ.ಜಿ.ಗಚ್ಚಣ್ಣವರ, ನಾಗರಾಜ ಹಳ್ಳಿಕೇರಿ, ಶಿವಕುಮಾರ ಕುಷ್ಟಗಿ, ಶರಣು ಸೊಲಗಿ, ಪಿ.ಜಿ.ಹಿರೇಮಠ, ಎಸ್‌.ಎಸ್‌.ಡೊಣ್ಣಿ, ಎ.ಕೆ.ಮುಲ್ಲಾನವರ, ವಿವಿಧ ಶಿಕ್ಷಕರು ಹಾಗೂ ಸೊಲಗಿ ಪರಿವಾರದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ