ಪರಿಸರ ಕಾಳಜಿಯ ಕುಲಕರ್ಣಿ ದಂಪತಿ
ಜಮಖಂಡಿ14 : ಜಮಖಂಡಿ ನಗರದ ಸರ್ಕಾರಿ ಶಾಲೆಯ ಶಿಕ್ಷಕ ನಾರಾಯಣ ಕುಲಕರ್ಣಿ ಎಂಬ ಅಪರೂಪದ ಸಮಾಜ ಸೇವಕ, ತನ್ನ ತಾಯಿಯವರ ಹೆಸರಿನಲ್ಲಿ ಒಂದು ಸೇವಾ ಸಮಿತಿ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೊಡಗಿರುವುದು ಒಂದು ವಿಶೇಷ, ಆ ಸೇವಾ ಸಮಿತಿಯಲ್ಲಿ ಕೇವಲ ಇಬ್ಬರು ಮಾತ್ರ ಸದಸ್ಯರಿದ್ದಾರೆ, ಶಿಕ್ಷಕ ನಾರಾಯಣ ಹಾಗೂ ತನ್ನ ಹೆಂಡತಿ ಶಿಕ್ಷಕಿ ವನಜಾ, ಸೇವಾ ಸಮಿತಿಯ ಹೆಸರಿನಲ್ಲಿ ಕಳೆದ ಹತ್ತು ವರುಷಗಳಿಂದ ಸಮಾಜ ಸೇವೆಯಲ್ಲಿ ಸದ್ದಿಲ್ಲದೆ ತೊಡಗಿದ್ದಾರೆ, ಈ ಶಿಕ್ಷಕ ದಂಪತಿಗಳು ತಮಗೆ ಬರುವಂತಹ ತಿಂಗಳ ಸಂಬಳದಲ್ಲಿ ಬಡವರಿಗೆ, ಅನಾಥರಿಗೆ, ವೃದ್ಧರಿಗೆ, ಭಿಕ್ಷುಕರಿಗೆ ಸಹಾಯ ಮಾಡುತ್ತಾ ಬರುತ್ತಿರುವುದು ಒಂದು ಹೆಮ್ಮೆಯ ವಿಷಯವಾಗಿದೆ,
ರಾಜ್ಯದಲ್ಲಿ ಕರೋನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಲಾಕಡೌನ್ ಮಾಡಬೇಕಾದ ಪರಿಸ್ಥಿತಿ ಬಂತು, ಈ ಸಂದರ್ಭದಲ್ಲಿ ಬಡವರಿಗೆ, ಕೂಲಿಕಾರರಿಗೆ, ವೃದ್ಧರಿಗೆ, ಅನಾಥರ ಸ್ಥಿತಿಯು ಹೇಳತಿರದಾಯಿತು ಇಂತಹ ಪರಿಸ್ಥಿತಿಯಲ್ಲಿ ಇವರಿಗೆ ಒಂದು ತುತ್ತು ಅನ್ನವು ಸಿಗಲಾರದಂತಹ ಪರಿಸ್ಥಿತಿ ಎದುರಾಯಿತು, ಇಂತಹ ಸಮಯದಲ್ಲಿ ಈ ಶಿಕ್ಷಕ ದಂಪತಿಗಳು ಪ್ರತಿನಿತ್ಯ ತಾವೇ ಸ್ವತಃ ಮನೆಯಲ್ಲಿ ಅಡುಗೆಯನ್ನು ಮಾಡಿ ಅದನ್ನು ತಮ್ಮ ಮಕ್ಕಳ ಸಮೇತ ಪ್ಯಾಕ್ ಮಾಡಿ, ಈ ಶಿಕ್ಷಕ ನಾರಾಯಣ ಬೈಕ್ ಮೇಲೆ ಜಮಖಂಡಿಯ ಇಡೀ ಊರಿನಲ್ಲಿ ಸುತ್ತಾಡಿ ಬಡವರಿಗೆ, ಅನಾಥರಿಗೆ, ಭಿಕ್ಷುಕರಿಗೆ ಅನ್ನವನ್ನು ತಲುಪಿಸುವ ಒಂದು ಪುಣ್ಯದ ಕೆಲಸವನ್ನು ಈ ಶಿಕ್ಷಕ ದಂಪತಿಗಳು ಮಾಡುತ್ತಿರುವುದು ಶ್ಲಾಘನೀಯ,
ಈ ಶಿಕ್ಷಕ ದಂಪತಿಗಳು ಇದರ ಜೊತೆಗೆ ಇನ್ನೊಂದು ಮಹತ್ವದ ಕೆಲಸ ಮಾಡುತ್ತಿದ್ದಾರೆ, ಅದೆನೆಂದರೆ ಪರಿಸರ ಸಂರಕ್ಷಣೆ ಮಾಡುವುದರಲ್ಲಿ ನಿರತರಾಗಿದ್ದಾರೆ, ಕೇಳಿದವರಿಗೆ ಸಸಿಗಳನ್ನು ಕೊಡುವ ಕಾಯಕದಲ್ಲಿ ತೊಡಗಿದ್ದಾರೆ, ಕೇವಲ ಸಸಿಗಳನ್ನು ಕೊಟ್ಟು ಸುಮ್ಮನಿದ್ದು ಕುರುವುದಿಲ್ಲ ಸಸಿಗಳನ್ನು ಜನರಿಗೆ ಕೊಡುವಾಗ ಈ ಸಸಿಗಳನ್ನು ನಿಮ್ಮ ಮಕ್ಕಳಂತೆ ಸಂರಕ್ಷಣೆ ಮಾಡಿ ಬೆಳೆಸಿಯೆಂದು ಪ್ರತಿಯೊಬ್ಬರಿಗೆ ತಿಳುವಳಿಕೆ ನೀಡುತ್ತಿರುವುದು ಇವರ ಪರಿಸರ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ,
ಸಮಾಜ ಸೇವೆಯೊಂದಿಗೆ ಪರಿಸರ ಪೋಷಕ ಅಪರೂಪದ ಶಿಕ್ಷಕ ದಂಪತಿಗಳಿಗೆ ಜಮಖಂಡಿ ನಗರ ಹಾಗೂ ಗ್ರಾಮೀಣ ಭಾಗದ ಜನರು, ಶಿಕ್ಷಕ ಸಮೂಹ ಅಭಿನಂದನೆಗಳ ಮಹಾಪೂರವೇ ಹರಿಸುತ್ತಿವೆ.