ಮಕ್ಕಳು ಜೀವನದಲ್ಲಿ ಗುರಿ ಸಾಧನೆ ಒತ್ತು ನೀಡಿ: ವೆಂಕಟೇಶ
ಕುಕನೂರು 13: ಪ್ರತಿಯೊಂದು ಮಕ್ಕಳು ತಮ್ಮ ಜೀವನ ಗುರಿ ಸಾಧನೆಗೆ ಒತ್ತು ನೀಡಬೇಕು ಎಂದು ಕುಕನೂರು ತಾ.ಪಂ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲಿ ಹೇಳಿದರು.
ತಾಲೂಕಿನ ರಾಜೂರು-ಆಡೂರು ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಕರ್ನಾಟಕ ಸರಕಾರ ರಾಜ್ಯ ಮಾನವ ಹಕ್ಕುಗಳ ಆಯೋಗ, ತಾ.ಪಂ, ಗ್ರಾ.ಪಂ ಹಾಗೂ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ ಹೊಸಪೇಟೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಕಾಯ್ದೆಗಳ ಕುರಿತು ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು,
ದೇಶದಲ್ಲಿ ಪ್ರತಿಯೊಂದು ಮಕ್ಕಳು ತಮ್ಮ ಹಕ್ಕುಗಳನ್ನು ಕೇಳಿ ಪಡೆಯುವದಕ್ಕೆ ಅವಕಾಶವಿದೆ. ಮಕ್ಕಳು ದೇಶದ ಆಸ್ತಿಯಾಗಿದ್ದಾರೆ ಹೆಚ್ಚಿನಮಟ್ಟದಲ್ಲಿ ಮಕ್ಕಳಿಗೆ ಸಮುಧಾಯ ಹಾಗೂ ಸರಕಾರಗಳು ಹಕ್ಕುಗಳನ್ನು ನೀಡಬೇಕಾಗಿದೆ. ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕೆಂದು ಹೇಳಿದರು.
ರಾಜೂರು ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಆಡೂರು ಅಧ್ಯಕ್ಷತೆವಹಿಸಿದ್ದರು. ಪಿಡಿಒ ಮನೋರಮ್ಮ, ಗ್ರಾ.ಪಂ ಸದಸ್ಯ ಭೀಮರಡ್ಡಿ ಮಾದಿನೂರು, ಸೈನಜಾಬೇಗಂ, ಎಸ್ಡಿಎಂಸಿ ಅಧ್ಯಕ್ಷ ಈರ್ಪ ಬಡಿಗೇರ್, ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಕೊರೆ, ಸಂಸ್ಥೇಯ ಜಿಲ್ಲಾ ಸಂಯೋಜಕ ಶರಣಪ್ಪ, ರವಿ, ರಾಜಾಹುಸೇನ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಅನೇಕರು ಇದ್ದರು.