ಕುಕನೂರ್

ದೇಶದ ಕಟ್ಟ ಕಡೆಯ ಪ್ರಜೆಗೂ ವಿದ್ಯುತ್, ಅಡುಗೆ ಅನಿಲ: ಸಚಿವ ಹಾಲಪ್ಪ ಆಚಾರ

ದೇಶದ ಕಟ್ಟ ಕಡೆಯ ಪ್ರಜೆಗೂ ವಿದ್ಯುತ್, ಅಡುಗೆ ಅನಿಲ: ಸಚಿವ ಹಾಲಪ್ಪ ಆಚಾರ

ಕುಕನೂರ: ದೇಶ ಕಂಡ ಅಪರೂಪದ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಅಗ್ರ ಗಣ್ಯರು ದೇಶದ ಕಟ್ಟ ಕಡೆಯ ವ್ಯಕ್ತಿಗೂ ಇಂದು ವಿದ್ಯುತ್ ಹಾಗೂ ಅಡುಗೆ ಅನಿಲ ದೊರೆಯಯತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಹೇಳಿದರು.  

ಪಟ್ಟಣದ ಕನಕ ಭವನದಲ್ಲಿ ಗುಲಬುರ್ಗಾ ವಿದ್ಯುತ್ ಸರಬರಾಜು ಕಂಪನಿ ಆಯೋಜಿಸಿದ್ದ ಉಜ್ವಲ ಭಾರತ-ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿದ್ಯುತ್ ಬಳಕೆದಾರರಿಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ, ದೀನ್ ದಯಾಳ ಉಪಾಧ್ಯಯ ಗ್ರಾಮ ಜ್ಯೋತಿ,ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ, ಸೌಭಾಗ್ಯ ಯೋಜನೆ, ಬೆಳಕು ಯೋಜನೆ ಸೇರಿದಂತೆ ಅನೇಕ ಯೀಜನೆಗಳನ್ನು ಪರಿಚಿಯಿಸಿದೆ, ಅವಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕಾದ ಕರ್ತವ್ಯ ಜೆಸ್ಕಾಂ ಅಧಿಕಾರಿಗಳ ಜವಾಬ್ದಾರಿ ಎಂದರು.  

ಈ ಸಂದರ್ಭದಲ್ಲಿ ತಹಸಿಲ್ದಾರ ಚಿದಾನಂದ ಗುರುಸ್ವಾಮೀ, ಬಳ್ಳಾರಿ ಜೆಸ್ಕಾಂ ಮುಖ್ಯ ಅಭಿಯಂತರ ಬಿ.ವೆಂಕಶೇಲು, ಕೊಪ್ಪಳ ಜೆಸ್ಕಾಂ ಅಧಿಕ್ಷಕ ಅಭಿಯಂತರ ಎಂ ರಾಜೇಶ ವರ್ಮಾ, ಗುಳದಳ್ಳಿ ಉಪ ಕೇಂದ್ರದ ವ್ಯವಸ್ಥಾಪಕ ವೈ.ಎಸ್‌.ಪಿ.ರಾವ್, ಮುಖಂಡರಾದ ಶಿವಕುಮಾರ ನಾಗಾಲೂಪುರ ಮಠ, ವಿಶ್ವನಾಥ ಮರಿಬಸಪ್ಪನವರ ಕೆ.ಇ.ಬಿ ಸಿಬ್ಬಂದಿ ವರ್ಗ ಇನ್ನಿತರರು ಇದ್ದರು. 


ಸುದ್ದಿ ಓದಿ