ಮುಧೋಳ

ಜಿಲ್ಲೆಯಲ್ಲಿ ಶಿವಾನಂದ ಶೆಲ್ಲಿಕೇರಿ ರಾಜ್ಯದಲ್ಲಿ ಮಾಲಿಪಾಟೀಲ ಗೆಲವು ನಿಶ್ಚಿತ: ಮಾಲಿಪಾಟೀಲ

ಜಿಲ್ಲೆಯಲ್ಲಿ ಶಿವಾನಂದ ಶೆಲ್ಲಿಕೇರಿ ರಾಜ್ಯದಲ್ಲಿ ಮಾಲಿಪಾಟೀಲ ಗೆಲವು ನಿಶ್ಚಿತ: ಮಾಲಿಪಾಟೀಲ

ಮುಧೋಳ 22; ನಾನು ಪೂರ್ಣ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದು ನನಗೆ ಈ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಅತಿ ಹೆಚ್ಚು ಮತದಾನವಾಗಲಿದ್ದು ನನ್ನ ಗೆಲವು ಇತಿಹಾಸವಾಗಲಿದೆ ಹಾಗೇಯೆ ಬಾಗಲಕೋಟದಲ್ಲಿ ಮನೆಯ ಮಗ ಶಿವಾನಂದ ಶೆಲ್ಲಿಕೇರಿ ಗೆಲುವು ನಿಶ್ಚಿತ  ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯ ಅಧ್ಯಕ್ಷ ಅಭ್ಯರ್ಥಿ ಶೇಕರಗೌಡ ಮಾಲಿಪಾಟೀಲ ಹೇಳಿದರು.

ಗುರುವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮತ ಕಸಾಪ ಮತದಾರರಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ನಾನು ಸ್ಪರ್ಧೆಗೆ ಕಲ್ಯಾಣ ಕರ್ನಾಟಕ ಪ್ರತಿನಿಧಿಸುತ್ತಿದ್ದರೂ, ಅಖಂಡ ಕರ್ನಾಟಕ ಕಲ್ಪನೆಯ ಹಿನ್ನೆಲೆಯಲ್ಲಿ ಸ್ಪರ್ಧಿಸಿದ್ದೇನೆ. ಪ್ರಾದೇಶಿಕ ಅಸಮಾನತೆ ಹೋಗಬೇಕು ಈ ಭಾಗಕ್ಕೆ ಮಾನ್ಯತೆ ಸಿಗಬೇಕಿದೆ. ರಾಜ್ಯ ಎಲ್ಲ ಜಿಲ್ಲೆಗಳಲ್ಲಿಯೂ ಒಂದು ಸುತ್ತಿನ ಪ್ರಚಾರ ಕೈಗೊಂಡಿದ್ದೇವೆ, ಎಲ್ಲೆಡೆ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ. ಜಯಶಾಲಿಯಾಗುವ ಸ್ಪಷ್ಟ ಸೂಚನೆಗಳು ಸಿಕ್ಕಿದೆ ಎಂದರು.

ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರಿ ನೌಕರಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಂತರ ನಿರಾಶ್ರಿತರ ಕೇಂದ್ರವಾಗುವಂತೆ ಸ್ಪರ್ಧೆ ಮಾಡಿ ಗೆಲವು ಸಾಧಿಸುವ ಪದ್ಧತಿ ಹೆಚ್ಚಾಗಿದ್ದು ಅಂತವರಿಗಿಂತ ಅತಿ ಹೆಚ್ಚು ಕಾರ್ಯ ನಾನು ಮಾಡುತ್ತೇನೆ. ನನ್ನನ್ನು ಚುನಾಯುತಗೊಳಿಸಿದರೆ ನಾನು ಮೊದಲಿಗೆ ಎಲೆ ಮರೆಯ ಹಾಗೂ ಗ್ರಾಮೀಣ ಪ್ರದೇಶದ ಯುವ ಬರಹಗಾರರಿಗೆ ಪ್ರೋತ್ಸಾಹ ಕೊಟ್ಟು ಮುಖ್ಯ ವೇದಿಕೆ ಕಲ್ಪಸುತ್ತೇನೆ, ರಾಜ್ಯದ ಮೂಲೆ ಮೂಲೆಯ ತಾಲ್ಲೂಕಿನಲ್ಲಿ ಸರ್ಕಾರದ ಸಹಕಾರದಿಂದ ಭವನ ನಿರ್ಮಾಣ ಮಾಡುತ್ತೇನೆ ಒಟ್ಟಾರೆಯಾಗಿ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಪಾವಿತ್ರೆಯನ್ನು ಕಾಪಾಡಿಕೊಂಡು ಬರುತ್ತೇನೆ ಎಂದು ಹೇಳಿದರು.

ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಭ್ಯರ್ಥಿ ಶಿವಾನಂದ ಶೆಲ್ಲಿಕೇರಿ ಮಾತನಾಡಿ ನಾನು ಕಳೆದ 20 ವರ್ಷಗಳಿಂದ ನಿರಂತರವಾಗಿ ಕನ್ನಡ ನಾಡು,ನುಡಿ, ನೆಲ,ಜಲ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಯಲ್ಲಿ ಎಲೆಯ ಮರೆಯಲ್ಲಿದ್ದ ಕಲಾವಿದರನ್ನು ಗುರ್ತಿಸುವ ಕಾರ್ಯವನ್ನು ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಮಾಡುತ್ತಾ ಬಂದಿದ್ದೇನೆ ಹೀಗಾಗಿ ನನ್ನನ್ನು ಮನೆಯ ಮಗನಂತೆ ಕಸಾಪ ಮತದಾರರು ಬರಮಾಡಿಕೊಂಡು ಗೆಲ್ಲಿಸುವ ಭರವಸೆ ನೀಡಿದ್ದಾರೆ ನನ್ನ ಗೆಲವು ನಿಮ್ಮೆಲ್ಲರ ಗೆಲವಾಗಲಿದೆ ಎಂದು ಹೇಳಿದರು.

ಡಾ.ಶಿವಾನಂದ ಕುಬಾಸದ, ಮಾಜಿ ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ, ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ರಮೇಶ ನಿಡೋಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ಬೆಳಗಲಿ, ಗೌರವ ಅಧ್ಯಕ್ಷ ಪ್ರಕಾಶ ಹೊಸಮನಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ವಿ.ದಾಸರಡ್ಡಿ, ಸಿ.ವಿ.ಚೌದರಿ,  ಸಂಗಮೇಶ ಹವಾಲ್ದಾರ, ರಮೇಶ ಅರಕೇರಿ, ಆನಂದ ಪೂಜಾರಿ, ಮಹೇಶ ದಿವಾಣ, ವಿಜಯ ಮಹಾಂತೇಶ ಉಪ್ಪಿನ,ವಿರೇಶ ಮಡಿವಾಳರ ಸೇರಿದಂತೆ ಇದ್ದರು.


ಸುದ್ದಿ ಓದಿ