ಉಚಿತ ಬಾಯಿ, ದಂತ ಪಂಕ್ತಿ ಉಚಿತ ಚಿಕಿತ್ಸೆ ಶಿಬಿರಕ್ಕೆ ಐಹೊಳೆ ಚಾಲನೆ
Drive to free mouth, dental row free treatment camp
ರಾಯಬಾಗ 23: ಬಾಯಿ ಮತ್ತು ಹಲ್ಲಿನ ಆರೋಗ್ಯ ಕಾಪಾಡಿಕೊಂಡರೆ, ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ ಎಂದು ಶಾಸಕ ಡಿ.ಎಮ್.ಐಹೊಳೆಯವರು ಹೇಳಿದರು.
ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ಅಭಿಯಾನ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿಯ ಕೆ.ಎಲ್.ಇ. ವಿಶ್ವನಾಥ ಕತ್ತಿ ಡೆಂಟಲ್ ಕಾಲೇಜಿ ಹಾಗೂ ಮರಾಠಾ ಮಂಡಳ ಕಾಲೇಜಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಬಾಯಿ ಮತ್ತು ದಂತ ತಪಾಸಣೆ ಹಾಗೂ ದಂತ ಪಂಕ್ತಿ ಉಚಿತ ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಜನರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಚಿಕ್ಕೋಡಿ ಅಪರ ಜಿ.ಆ.ಮತ್ತು ಕು. ಕಲ್ಯಾಣಾಧಿಕಾರಿ ಡಾ.ಶರಣಪ್ಪ ಗಡೆದ ಪ್ರಾಸ್ತಾವಿಕ ಮಾತನಾಡಿ, ತಂಬಾಕು ಪದಾರ್ಥ ಸೇವನೆಯಿಂದ ಹಲ್ಲು ಹುಳುಕು ಆಗಿ ಹಲ್ಲು ಕಿಳಬೇಕಾಗುತ್ತದೆ ಜೊತೆಗೆ ಕ್ಯಾನ್ಸರ್ ರೋಗ ಬರುವ ಸಂಭವ ಇರುವುದರಿಂದ ಸಾರ್ವಜನಿಕರು ಹಲ್ಲು ಮತ್ತು ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಉಚಿತ ದಂತ ಪಂಕ್ತಿ ಶಿಬಿರದಲ್ಲಿ 45 ವರ್ಷ ಮೇಲ್ಪಟ್ಟ 50 ಹಿರಿಯರಿಗೆ ದಂತ ಪಂಕ್ತಿ (ಹಲ್ಲಿನ ಸೆಟ್) ಹಾಕಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇನ್ನುಳಿದವರಿಗೆ ದಂತ ಪಂಕ್ತಿ ಕೂಡ್ರಿಸಲಾಗುವುದು ಎಂದು ತಿಳಿಸಿದರು.
ಜಿ.ಕು.ಕ.ಅಧಿಕಾರಿ ಡಾ.ವಿಶ್ವನಾಥ ಭೋವಿ, ಜಿಲ್ಲಾ ಎನ್.ಒ.ಪಿ.ಎಚ್ ಅಧಿಕಾರಿ ಡಾ.ಚಂದ್ರ ನಾಯಿಕ, ತಾ.ಆ.ಅಧಿಕಾರಿ ಡಾ.ಎಸ್.ಎಮ್.ಪಾಟೀಲ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ಚಿಕ್ಕೋಡಿ ಟಿ.ಎಚ್.ಒ ಡಾ.ಸುಕುಮಾರ ಬಾಗಾಯಿ, ದಂತ ವೈದ್ಯ ಡಾ.ಸಿದ್ದಾರ್ಥ ಮಗದುಮ್ಮ, ಡಾ.ಅಪ್ಪಾಸಾಹೇಬ ಹೆಗಡೆ, ಡಾ.ಶಾಂತಾರಾಮ ಬಾಗೇವಾಡಿ, ಡಾ.ಸದಾಶಿವ ಖನದಾಳೆ, ಡಾ.ಆರತಿ ಚಿನಕೋಟಿ, ಡಾ.ಎಸ್.ಎಮ್.ಕರಗಾಂವೆ, ಡಾ.ಸುರೇಶ ಬೆಳಗಾಂವಕರ, ಡಾ.ಆನಂದ ತೋರೊ, ಡಾ.ವಿಠಲ ಗೊಂಡೆ, ಡಾ.ಆನಂದ ಹೀರೆಮಠ, ಡಾ.ಪ್ರೀತಿ ಕುಸಗಲ, ಡಾ.ವಿವೇಕ ಹೊನ್ನಳ್ಳಿ, ಡಾ.ಡೇವಿಡ್, ಡಾ.ವಿಶ್ವಜೀತ, ಮುಖಂಡರಾದ ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ ಹಾಗೂ ಕೆ.ಎಲ್.ಇ. ವಿಶ್ವನಾಥ ಕತ್ತಿ ಡೆಂಟಲ್ ಕಾಲೇಜ ಹಾಗೂ ಮರಾಠಾ ಮಂಡಳ ಕಾಲೇಜಿನ ದಂತ ವೈದ್ಯರು, ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ ಸ್ವಾಗತಿಸಿ, ನಿರೂಪಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 