ಡಾ ವೀರೇಂದ್ರ ಹೆಗಡೆ ಕೊಡುಗೆ ಅಪಾರ: ಮಹಾದೇವ ದೇವರು
ಕುಕನೂರ ನ 26 : ಈ ನಾಡಿಗೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಧರ್ಮಸ್ಥಳದ ಪೂಜ್ಯ ಡಾ ವೀರೇಂದ್ರ ಹೆಗಡೆಯವರು ನೀಡಿದ ಕೊಡುಗೆ ಅಪಾರ, ಅವರ ಸಾಧನೆಗೆ ಅವರೇ ಸಾಟಿ ಎಂದು ಶ್ರೀಮಠದ ಪೂಜ್ಯ ಮಹಾದೇವ ದೇವರು ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಧರ್ಮಸ್ಥಳದ ಪೂಜ್ಯ ಡಾ ವೀರೇಂದ್ರ ಹೆಗಡೆಯವರ 75 ನೇ ಹುಟ್ಟುಹಬ್ಬ ಆಚರಣೆ ಮತ್ತು ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುತ್ತಾ ಪೂಜ್ಯರು ನೊಂದವರ ಬೆಂದವರ ಬಾಳಿನ ಬೆಳಕಾಗಿ, ಹಲವಾರು ಜನರ ಬದುಕಿಗೆ ದಾರೀದೀಪವಾಗಿ ಧರ್ಮಸ್ಥಳ ಕ್ಷೇತ್ರದ ಮೂಲಕ ಅನನ್ಯ ಸೇವೆ ಸೇವೆ ನೀಡಿದ್ದಾರೆ, ಸರ್ಕಾರ ಮಾಡಬಹುದಾದ ಜನ ಕಲ್ಯಾಣ ಕಾರ್ಯಕ್ರಮಗಳನ್ನ ಮಾಡುತ್ತಾ ಬರುತ್ತೀರುವುದು ನಮ್ಮಂಥ ಹಲವಾರು ಯುವ ಸ್ವಾಮೀಜಿಗಳಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದರು.
ನಂತರ ಮಾತನಾಡಿದ ಧರ್ಮಸ್ಥಳ ಎಂದರೆ ಪ್ರತಿಯೊಬ್ಬರಿಗೂ ನೆನಪಿಗೆ ಬರುವುದೆಂದರೆ ಅದ್ಭುತ ಅನ್ನಸಂತರೆ್ಣ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಶಾಲೆ ಕಾಲೇಜು, ವಿವಿಧ ಧರ್ಮ ಛತ್ರಗಳು, ಆಸ್ಪತ್ರೆಗಳು, ಹೀಗೆ ಲೆಕ್ಕವಿಲ್ಲದಷ್ಟು ಕಾರ್ಯಗಳು ವೀರೇಂದ್ರ ಹೆಗ್ಗಡೆ ನಡೆಸಿಕೊಂಡು ಬರುತ್ತಿದ್ದಾರೆ. ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿಯಾಗಿರುವ ಡಾ. ಡಿ ವೀರೇಂದ್ರ ಹೆಗ್ಗಡೆಯವರು ತಮ್ಮ ಭಕ್ತಿ, ಧರ್ಮಸೇವೆ ಮತ್ತು ಸಮಾಜ ಸೇವೆಗಳಿಂದ ಜನ ಜನಿತವಾಗಿದ್ದಾರೆ. ಶ್ರೀ ಕ್ಷೇತ್ರಕ್ಕೆ ಒಂದು ಭವ್ಯ ಕಳೆ ಮತ್ತು ಗೌರವ ತಂದುಕೊಟ್ಟ ಕೀರ್ತಿ ಅವರದ್ದು ಎಂದರು.
ಈ ಸಂದರ್ಭದಲ್ಲಿ ಕಾವ್ಯ ಗುರುಮಠ, ಶ್ರೀಮತಿ ಶಿವಲೀಲಾ, ಅನ್ನಪೂರ್ಣ ಚಟ್ನಿ, ಅಶ್ವಿನಿ ಕರಿಗಾರ, ಚಂದ್ರಕಾಂತ ವಜ್ರಂಗಿ, ಲಲಿತಾ ಶಿರೂರ, ಕಾವ್ಯ ಬಡಿಗೇರ, ಮಂಜುಳಾ ರಾಯ್ಕರ, ಮೋದಿನಾ ಮತ್ತು ಇತರರು ಇದ್ದರು.