ಮುಧೋಳ

ಡಾ.ಸಿದ್ದಲಿಂಗಯ್ಯ ಬದುಕು-ಬರಹ ಉಪನ್ಯಾಸ, ನುಡಿನಮನ

ಡಾ.ಸಿದ್ದಲಿಂಗಯ್ಯ ಬದುಕು-ಬರಹ ಉಪನ್ಯಾಸ, ನುಡಿನಮನ

ಮುಧೋಳ17: ಸಿದ್ದಲಿಂಗಯ್ಯ ಕನ್ನಡ ಸಾಹಿತ್ಯಕ್ಕೆ ಹೊಸ ಕಣ್ಣು ನೀಡಿದ್ದ ಕವಿ ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳಿಗೆ ಸಿದ್ದಲಿಂಗಯ್ಯನವರ ಕೊಡುಗೆ ಅಪಾರ. ಅವರ ಗೀತೆಗಳಲ್ಲಿ ಹೋರಾಟದ ಶಕ್ತಿ ಇತ್ತು. ಎಡಶಕ್ತಿಗಳ ಪ್ರತಿರೋಧ ಎದುರಿಸಿದ್ದ ಅವರು ಹಾಸ್ಯ ಪ್ರಜ್ಞೆ ಮೈಗೂಡಿಸಿಕೊಂಡಿದ್ದರು. ಅವರು ಸದಾ ಅಮರ ಎಂದು ಮಹಾಲಿಂಗಪೂರದ ಬಂಡಾಯ ಕವಿ ಡಾ.ಅಶೋಕ ನರೋಡೆ ತಿಳಿಸಿದರು.  ಜಿಲ್ಲಾ ಕನರ್ಾಟಕ ಜಾನಪದ ಸಾಹಿತ್ಯ ಪರಿಷತ್ತು ಬಾಗಲಕೋಟ ಹಾಗೂ ಮುಧೋಳ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಜರುಗಿದ ಆನ್ಲೈನ್ದಲ್ಲಿ ಜರುಗಿದ ಡಾ.ಸಿದ್ದಲಿಂಗಯ್ಯ ಬದುಕು-ಬರಹ ಉಪನ್ಯಾಸ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಬಾಗಿಯಾಗಿ ಮಾತನಾಡಿದರು. ಸಿದ್ದಲಿಂಗಯ್ಯ ಜೊತೆಗಿನ ಒಡನಾಟದ ನೆನಪುಗಳು ಎಂದಿಗೂ ಮಾಸುವುದಿಲ್ಲ. ಅವರ ಬೌದ್ಧಿಕ ಚಿಂತನೆಗಳಲ್ಲಿ ನವಿರಾದ ಹಾಸ್ಯ ಅಡಗಿರುತ್ತಿತ್ತು. ಸಿದ್ದಲಿಂಗಯ್ಯ ಅಂಬೇಡ್ಕರ್ ಹಾಗೂ ಮಾಕ್ಸರ್್ವಾದಿಯಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅವರು ಸಂಘಟನಾ ಶಕ್ತಿಯಾಗಿದ್ದರು.  ಸಿದ್ದಲಿಂಗಯ್ಯ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದ ಯುವ ಸಾಹಿತಿ ವೆಂಕಟೇಶ ಗುಡೆಪ್ಪನವರ ಮಾತನಾಡಿ ಸಿದ್ದಲಿಂಗಯ್ಯ ಜನಸಮುದಾಯವನ್ನು ಸೆಳೆದ ಮಾಂತ್ರಿಕ. ನಾಲ್ಕು ದಶಕಗಳಿಂದ ಬಂಡಾಯ ಸಂಘಟನೆಯೊಂದಿಗೆ ಒಡನಾಟ ಹೊಂದಿದ್ದ ಅವರು ಬಳಿಕ ದೂರ ಉಳಿದಿದ್ದರು.

ಬಂಡಾಯಕ್ಕೆ ಹೊಸ ಆಯಾಮ ನೀಡಿದ್ದರು. ಜೀವಿತಾವಧಿಯಲ್ಲಿ ಮರೆಯಲಾರದ ಹಾಡುಗಳನ್ನು ಅವರು ನೀಡಿದ್ದರು. ದ.ಸಂ.ಸ ಹಾಗೂ ಬಂಡಾಯ ಸಾಹಿತ್ಯದ ಸಂಗಾತಿಯಾಗಿ, ನಿಜವಾದ ಜನಕವಿಯಾಗಿದ್ದರು. ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿದ್ದರು. ಅವರು ಸಾಂಸ್ಕೃತಿಕ ಲೋಕವನ್ನು ವ್ಯಾಪಿಸಿಕೊಂಡ ಶಕ್ತಿ. ಅಲಕ್ಷಿತರ ಪ್ರತಿನಿಧಿಯಾಗಿ ಸಾಂಸ್ಕೃತಿಕ ಲೋಕದಲ್ಲಿ ಹೆಜ್ಜೆಗುರುತು ಮೂಡಿಸಿದ್ದರು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್ಪಿಓ ಮಹಾಂತೇಶ ನರಸನಗೌಡ ಮಾತನಾಡಿ ತಳಮಟ್ಟದ ಜನರ ಒಡನಾಡಿಯಾಗಿ ಕನ್ನಡಕ್ಕೆ ಹೊಸ ಪರಿಭಾಷೆಯ ಕಾವ್ಯಗಳನ್ನು ನೀಡಿದರು. ಅವರ ಕವಿತೆಗಳು ಜನರನ್ನು ಆಯಷ್ಕಾಂತದಂತೆ ಸೆಳೆದವು ಎಂದು ತಿಳಿಸಿದರು. ಕನರ್ಾಟಕ ಜಾನಪದ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ ಸಾಹಿತ್ಯವು ಸಮಾಜವನ್ನು ಬದಲಿಸುತ್ತದೆ ಎಂಬುದಕ್ಕೆ ಸಿದ್ದಲಿಂಗಯ್ಯ ಸಾಕ್ಷಿಯಂತಿದ್ದರು. ಅವರ ಹಾಡುಗಳಿಂದ ಪ್ರಭಾವಿತಗೊಂಡ ಅನೇಕರು ಅಂಬೇಡ್ಕರ್ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು ದುತ್ತರಗಿ ಪ್ರತಿಷ್ಠಾನದ ಸದಸ್ಯ ಚಂದ್ರಶೇಖರ ದೇಸಾಯಿ,ಕಸಾಪ ತಾಲ್ಲೂಕಾ ಅಧ್ಯಕ್ಷ ಸಂಗಮೇಶ ನೀಲಗುಂದ,ಕಜಾಪ ತಾಲ್ಲೂಕಾಧ್ಯಕ್ಷ ಆನಂದ ಪೂಜಾರಿ,ಮಲ್ಲಿಕಾಜರ್ುನ ಅರಬಿ,ಮಹೇಶ ದಿವಾಣ,ಶ್ರೀಕಾಂತ ಮೇಗಾಡಿ,ಕಸಾಪ ಕೋಶಾಧ್ಯಕ್ಷ ಚಂದ್ರಶೇಖರ ರೂಗಿ,ರಮೇಶ ಅರಕೇರಿ,ಅಡಿವೇಶ ಗೋಠೆ,ಸೋಮಶೇಖರ ಚವ್ಹಾನ ಇದ್ದರು,ಜಿಲ್ಲಾ ಕನರ್ಾಟಕ ಜಾನಪದ ಸಾಹಿತ್ಯ ಪರಿಷತ್ತು ಬಾಗಲಕೋಟ ಹಾಗೂ ಮುಧೋಳ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಜರುಗಿದ ಆನ್ಲೈನ್ದಲ್ಲಿ ಜರುಗಿದ ಡಾ.ಸಿದ್ದಲಿಂಗಯ್ಯ ಬದುಕು-ಬರಹ ಉಪನ್ಯಾಸ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಬಾಗಿಯಾಗಿ ಮಾತನಾಡಿದ ಡಾ.ಅಶೋಕ ನರೋಡೆ,


ಸುದ್ದಿ ಓದಿ