ಜಮಖಂಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಸಂಗಮೇಶ ಮಟೋಳಿ ಆಯ್ಕೆ
ಲೋಕದರ್ಶನ ವರದಿ
ಜಮಖಂಡಿ 24: ತಾಲ್ಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಸಂಗಮೇಶ ಮಟೋಳಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಿವಾನಂದ ಪಾಟೀಲ, ಕೋಶಾಧ್ಯಕ್ಷ ನಾಗಪ್ಪ ಸನದಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ, ಗೌರವಾಧ್ಯಕ್ಷ ಪ್ರಭು ಹಿದಕಲ್, ಪ್ರಕಾಶ ಅರಕೇರಿ, ರಾಜಾಂಚಿ ಬಾಹುಬಲಿ ಬಿರಾದಾರ ಪಾಟೀಲ ಸೇರಿದಂತೆ ಹಲವರು ಡಾ. ಸಂಗಮೇಶ ಮಟೋಳಿ ಅವರನ್ನು ಸನ್ಮಾನಿಸಿ, ಸಮ್ಮೇಳನಕ್ಕೆ ಶುಭ ಕೋರಿದರು.
ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕಸಾಪ ಅಧ್ಯಕ್ಷರ ನಿವಾಸದಲ್ಲಿ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದ ಬಳಿಕ ಡಾ. ಸಂಗಮೇಶ ಮಟೋಳಿ ಅವರ ಹೆಸರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂತಿಮಗೊಳಿಸಿದರು.
ಫೋಟೊ ಶೀರ್ಷಿಕೆ: ಜಮಖಂಡಿ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ. ಸಂಗಮೇಶ ಮಟೋಳಿ ಅವರನ್ನು ಶಾಸಕ ಜಗದೀಶ ಗುಡಗುಂಟಿ, ಶಿವಾನಂದ ಪಾಟೀಲ, ನಾಗಪ್ಪ ಸನದಿ ಸೇರಿದಂತೆ ಗಣ್ಯರು ಸನ್ಮಾನಿಸಿದರು.