ಡಾ.ರಾಜಕುಮಾರ ಅವರ 97 ನೇ ಜಯಂತಿ ಕಾರ್ಯಕ್ರಮ
Dr. Rajkumar's 97th birth anniversary program
ಲೋಕದರ್ಶನ ವರದಿ
ಡಾ.ರಾಜಕುಮಾರ ಅವರ ಸಿನಿಮಾಗಳು ಜನರಿಗೆ ತುಂಬ ಹತ್ತಿರ
ಧಾರವಾಡ 24: ಡಾ.ರಾಜಕುಮಾರ ಅವರ ಸಿನಿಮಾ ನೋಡಿ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದೇವೆ. ಸಾಕ್ಷಾತ್ಕಾರ, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಸೇರಿದಂತೆ ಹಲವಾರು ಸಿನಿಮಾಗಳು ಜನರಿಗೆ ಹತ್ತಿರವಾಗಿವೆ. ವರನಟ ಡಾ. ರಾಜಕುಮಾರ ಅವರು ಓರ್ವ ಭಾವನಾಜೀವಿ ಆಗಿದ್ದರು ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಹಿಂದೂಸ್ತಾನಿ ಗಾಯಕರಾದ ಪಂಡಿತ ಡಾ.ಎಂ.ವೆಂಕಟೇಶಕುಮಾರ ಅವರು ಹೇಳಿದರು. ಅವರು ಇಂದು (ಏ.24) ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಂಗಾಯಣ ಧಾರವಾಡ ಇವರ ಸಹಯೋಗದಲ್ಲಿ ಡಾ.ರಾಜಕುಮಾರ ಅವರ 97 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಸಿನಿಮಾ ಹಾಡು ಮತ್ತು ಶಾಸ್ತ್ರೀಯ ಸಂಗೀತ ಯಾವುದು ಮೇಲು ಕೀಳು ಎಂಬುದು ಇಲ್ಲ. ಡಾ.ರಾಜಕುಮಾರ ಅವರು ಬಹಳ ಕಷ್ಟದಿಂದ ಬಂದವರು. ಏಷ್ಟೋ ಜನರು ರಾಜಕುಮಾರ ಅವರಿಗೆ ನಟನೆ ಮಾಡಲು ಬರುವುದಿಲ್ಲ ಎಂದು ಅವಮಾನಿಸಿದ್ದಾರೆ. ಡಾ.ರಾಜಕುಮಾರ ಅವರು ಅಭಿನಯದ ಅರ್ಧ ಜೀವನದ ನಂತರ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಪಿ.ಬಿ.ಶ್ರೀನಿವಾಸ ಅವರ ಧ್ವನಿ ಡಾ.ರಾಜಕುಮಾರ ಅವರ ಧ್ವನಿಗೆ ಹೋಲುತ್ತಿತ್ತು. ಹೀಗಾಗಿ ರಾಜಕುಮಾರ ಅವರ ಸಾಕಷ್ಟು ಸಿನಿಮಾಗಳ ಹಾಡುಗಳನ್ನು ಪಿ.ಬಿ.ಶ್ರೀನಿವಾಸ ಅವರು ಹಾಡಿದ್ದಾರೆ. ಡಾ.ರಾಜಕುಮಾರ ಅವರ ಸಿನಿಮಾಗಳು ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದವು ಎಂದರು.
ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಬೇಕು. ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಬೇಕು. ಗುರುಗಳು, ಹಿರಿಯರು ಎಲ್ಲರಿಗೂ ಗೌರವ ಸಲ್ಲಿಸುವುದನ್ನು ರೂಢಿಸಿಕೊಳ್ಳಿ. ಜೀವನದಲ್ಲಿ ಏನಾದರೂ ಸಾಧಿಸುವ ಗುರಿಯನ್ನು ಇಟ್ಟುಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಯಾವತ್ತೂ ಹಿಂದೆ ಉಳಿಯಬಾರದು. ಸತತ ಪ್ರಯತ್ನ ಮಾಡಿದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯ. ಭಾವನೆಗಳು ಇಲ್ಲದ ಸಂಗೀತವಿಲ್ಲ. ಹಾಡುಗಳಿಗೆ ಭಾವನೆಗಳು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಇಂದು ಡಾ.ರಾಜಕುಮಾರ ಅವರ 97 ನೇ ಜನ್ಮದಿನವನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಲಾಗುತ್ತಿದೆ. ಕಳೆದ 5-6 ವರ್ಷಗಳಿಂದ ವಾರ್ತಾ ಇಲಾಖೆಯಿಂದ ಡಾ.ರಾಜಕುಮಾರ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಡಾ.ರಾಜಕುಮಾರ ಅವರ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಾ.ರಾಜಕುಮಾರ ಅವರು ಸಿನಿಮಾಗಳ ಮೂಲಕ ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.
ನಾವು ಸಿನಿಮಾಗಳಿಂದ ಬಹಳ ವಿಷಯಗಳ ಬಗ್ಗೆ ಕಲಿಯಬಹುದು. ಡಾ.ರಾಜಕುಮಾರ ಅವರು ನಟಿಸಿದ ಬಂಗಾರದ ಮನುಷ್ಯ ಸಿನಿಮಾದ ಮೂಲಕ ರೈತರ ಜೀವನ, ಗ್ರಾಮೀಣ ಜೀವನ, ಹಳ್ಳಿಗಳಲ್ಲಿ ಜೀವನ ಸಾಗಿಸುವುದರ ಕುರಿತು ತಿಳಿಸಲಾಗಿದೆ. ಕಸ್ತೂರಿ ನಿವಾಸ ಚಿತ್ರದಲ್ಲಿ ಶ್ರೀಮಂತಿಕೆ ಎಂದರೆ ದುಡ್ಡು ಮಾತ್ರವಲ್ಲ, ಮಾನವೀಯತೆ ಎಲ್ಲಕ್ಕಿಂತ ದೊಡ್ಡ ಆಸ್ತಿ. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಭಕ್ತಿ ಪ್ರಾಧ್ಯಾನ್ಯತೆ ಬಗ್ಗೆ ತಿಳಿ ಹೇಳಲಾಗಿದೆ ಎಂದು ಅವರು ತಿಳಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 