ಭಾರತೀಯ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ : ಟಿ.ಬಿ ಹರಿಕಾಂತ್

ಭಾರತೀಯ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ : ಟಿ.ಬಿ ಹರಿಕಾಂತ್ The great actor of Indian cinema Dr. Rajkumar : TB Harikanth

ಲೋಕದರ್ಶನ ವರದಿ 

ಕಾರವಾರ 24 :- ಡಾ. ರಾಜ್‌ಕುಮಾರ್ ಅವರು ಸೌಮ್ಯ ಸ್ವಭಾವ ಮತ್ತು ಮಾನವೀಯತೆ ಗುಣಗಳನ್ನು ಹೊಂದಿದ್ದ ಅಪರೂಪದ ಕಲಾ ಪ್ರತಿಭೆ, ಇಂತಹ ವ್ಯಕ್ತಿತ್ವ ಹೊಂದಿರುವ ಮತ್ತೊಬ್ಬ ನಟನನ್ನು ಕಾಣಲು ಸಾಧ್ಯವಿಲ್ಲ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಅವರು ಭಾರತೀಯ ಚಿತ್ರರಂಗದ ಮೇರು ನಟ ಎಂದು ವರನಟ ಡಾ. ರಾಜ್ ಕುಮಾರ್ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಟಿ.ಬಿ ಹರಿಕಾಂತ ಹೇಳಿದರು. ಅವರು ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವರನಟ ಡಾ. ರಾಜ್ ಕುಮಾರ್ ಕನ್ನಡ ಅಭಿಮಾನಿಗಳ ಸಂಘ ಕಾರವಾರದ ಸಹಯೋಗದಲ್ಲಿ, ಸಾಮಾಜಿಕ ಅರಣ್ಯ ವಿಭಾಗದ ಸಭಾಂಗಣದಲ್ಲಿ ಆಯೋಜಿಸಲಾದ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಕನ್ನಡ ಚಿತ್ರರಂಗಕ್ಕೆ 1954 ರಲ್ಲಿ ಪದಾರೆ​‍್ಣ ಮಾಡಿ 2006 ರವರೆಗೆ 200 ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದ ಪಸರನ್ನು ಭಾರತದ್ಯಾದಂತ ಪರಿಚಯಿಸಿದ ಡಾ. ರಾಜ್ ಕುಮಾರ್, ನಟನೆ ಮತ್ತು ಗಾಯನದಲ್ಲಿ ಪ್ರೌಢತೆಯನ್ನು ಸಾಧಿಸಿದ ಭಾರತೀಯ ಚಿತ್ರ ರಂಗದ ಏಕೈಕ ನಟ. ಅವರು ಚಿತ್ರರಂಗಕ್ಕೆ ಸಲ್ಲಿಸಿದ ಕಲಾ ಸೇವೆಯನ್ನು ಪರಿಗಣಿಸಿ ಭಾರತೀಯ ಚಿತ್ರರಂಗದಲ್ಲಿ ನೀಡುವ ಅತೀ ದೊಡ್ಡ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಪದ್ಮ ಭೂಷಣ, ಕರ್ನಾಟಕ ರತ್ನ ಹಾಗೂ ಭಾರತೀಯ ಚಿತ್ರರಂಗದಲ್ಲಿ ನೀಡುವ ಎಲ್ಲಾ ಪ್ರಶಸ್ತಿಗಳು ಲಭಿಸಿವೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಜರಾಮರವಾಗಿದ್ದು, ಅವರ ಚಲನಚಿತ್ರಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಿವೆ. ಸಾಮಾಜಿಕ ಕ್ಷೇತ್ರಕ್ಕೂ ಕೂಡ ಚಲನಚಿತ್ರದ ಮೂಲಕ ಅರ್ಥಪೂರ್ಣ ಕೊಡುಗೆ ನೀಡಿದ್ದು, ಅವರು ನಟಿಸಿದ ಚಿತ್ರಗಳು ಕುಟುಂಬ ಸಮೇತ ನೋಡುವ ಹಾಗೂ ಸಾಮಾಜಿಕ ಕಳಕಳಿಯ ಚಲನಚಿತ್ರಗಳಾಗಿವೆ  ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ ಮಾತನಾಡಿ, ಮೇರು ನಟ, ಎಂದೆಂದಿಗೂ ಅಚ್ಚಳಿಯದೇ ಮನದಲ್ಲಿ ಉಳಿದಿರುವ ನಟ, ಡಾ. ರಾಜ್ ಕುಮಾರ್ ತಮ್ಮ ಜೀವನದ್ದೂಕ್ಕೂ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜೀವನ ನಡೆಸಿದ ನಟ. ಸರಳ ಸ್ವಭಾವದ ನಗುಮುಖದ, ಮುಗ್ಧ ಮನಸ್ಸಿನ ನಟ, ಕನ್ನಡ ಚಿತ್ರರಂಗದಲ್ಲಿ ತನ್ನದೇಯಾದ ಛಾಪು ಮುಡಿಸಿ, ಕಲಿಕೆಯಲ್ಲಿ ಹಿಂದುಳಿದರೂ ಕೂಡ ತಮ್ಮ ವಿಶಿಷ್ಟ ಕಲೆಯ ಮೂಲಕ ಕರ್ನಾಟಕದಲ್ಲಿ ಅಜರಾಮರವಾಗಿದ್ದಾರೆ ಎಂದರು. 

ಹಿರಿಯ ಪರ್ತಕರ್ತ ಪ್ರಮೋದ ಹರಿಕಾಂತ ಡಾ. ರಾಜ್ ಕುಮಾರ್ ಕುರಿತು ವಿಶೇಷ ಉಪನ್ಯಾಸ ನೀಡಿ, ರಾಜಕುಮಾರ ಕರ್ನಾಟಕದ ಜನತೆಯ ಮೆಚ್ಚುಗೆ ಪಡೆದ ಮೇರು ನಟ. ಕಡು ಬಡತನದಲ್ಲಿ ಬೆಳೆದು ಬಂದ ಅವರು, ಅಜ್ಜ ಹಾಗೂ ತಂದೆಯ ಮಾರ್ಗದರ್ಶನದಲ್ಲಿ ರಂಗಭೂಮಿ ಪ್ರವೇಶಿದರು. ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರದ ಅವರು, ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು.

ಕುಟುಂಬದ ನಿರ್ವಹಣೆಗೆ ರಂಗಕಲಾವಿದರಾಗಿ ನಾಟಕದಲ್ಲಿ ಪಾತ್ರ ನಿರ್ವಹಿಸಿದ ಅವರು, ಸಿಕ್ಕ ಒಂದು ಅದೃಷ್ಟ-ವನ್ನು ಸರಿಯಾಗಿ ಬಳಸಿಕೊಂಡಾಗ ಜೀವನದ ಪಥವೇ ಬದಲಿಸಿತು. ಎಚ್‌.ಎಲ್‌.ಎನ್  ಸಿಂಹ ಅವರು ಬೇಡರ ಕಣ್ಣಪ್ಪ ಮೂಲಕ ಸಿನಿಮಾ ರಂಗಕ್ಕೆ ಪರಿಚಯಿಸಿದರು. 1954 ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಲನಚಿತ್ರ ಕನ್ನಡದಲ್ಲಿ ಅಭೂತಪೂರ್ವ ಯಶಸ್ವು ಕಂಡು ​‍್ರ​‍್ರಥಮ ರಾಷ್ಟ್ರ ಪ್ರಶಸ್ತಿ ಪಡೆಯಿತು.

ಅವರ ಸೌಮ್ಯ ಸ್ವಭಾವ, ಅಭಿನಯ ಗಾಂಭೀರ್ಯತೆ, ಕನ್ನಡ ಚಿತ್ರರಂಗದ ಅಭಿಮಾನಿಗಳ ಮನಸೋರೆಗೊಂಡಿತು. 208ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ ಅವರು ಕೊನೆಯ ಸಿನಿಮಾ ಶಬ್ದವೇಧಿ ಚಲನಚಿತ್ರವು ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಚಿಂತೆಗಳ ಹೋರಾಟದ ಸಿನಿಮಾವಾಗಿತ್ತು. ಎಲ್ಲಾ ರೀತಿಯ ಪಾತ್ರ ನಿರ್ವಹಿಸಿದ ಅವರು, ಒಂದು ಸಿನಮಾ ಹಿಂದೆ ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆ ಇರುವುದನ್ನು ಅರಿತ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ನಟನೆ ಮತ್ತು ಸಂಗೀತದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಹಾಗೂ ಅಮೇರಿಕದಲ್ಲಿ ಸಂಗೀತ ರಸಮಂಜರಿ ನೀಡಿದ ಏಕೈಕ ನಟ ಡಾ.ರಾಜ್‌ಮಾರ್, ಗೋಕಾಕ್ ಚಳುವಳಿಯ ಮೂಲಕ ಕನ್ನಡ ನಾಡಿನ ನೆಲ ಜಲಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಅವರು ಕನ್ನಡಕ್ಕಾಗಿ ಶ್ರಮಿಸಿದರು ಎಂದರು. 

ಕಾರ್ಯಕ್ರಮದಲ್ಲಿ ವೈಶಾಲಿ ಮಾಂಜ್ರೇಕರ್ ಮೆಲೋಡಿ ವಾಯ್ಸ್‌ ತಂಡದಿಂದ, ಡಾ. ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿನ,  ಕನ್ನಡ ನಾಡು ನುಡಿಯ ಮಹತ್ವ ಸಾರುವ ಮತ್ತು ಸಾಮಾಜಿಕ ಸಂದೇಶ ನೀಡುವ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯ ತಹಶೀಲ್ದಾರರು ಪ್ರಮೋದ ನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ, ಕನ್ನಡಪ್ರಭ ಪತ್ರಿಕೆಯ ಹಿರಿಯ ಪತ್ರಕರ್ತ ವಸಂತ ಭಟ್, ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿ ಸಿಬ್ಬಂದಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಕಾರ್ಯಕ್ರವನ್ನು ವನಿತಾ ಶೇಟ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.