ಸರ್ವಜ್ಞ ವಿದ್ಯಾಪೀಠ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಸಾಧನೆ

ಸರ್ವಜ್ಞ ವಿದ್ಯಾಪೀಠ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಸಾಧನೆ  Achievements of Sarvajna Vidyapeeth English Medium Students

ತಾಳಿಕೋಟೆ 24: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇಕಡಾ 100ಅ ಫಲಿತಾಂಶ ಪಡೆದಿದೆ. 

ಭವಾನಿ ಪ್ರಕಾಶ ಕುಲಕರ್ಣಿ 616(ಶೇ98.56) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ,ಕುಮಾರಿ ಉಷಾ, ಬಸಯ್ಯ ಹಿರೇಮಠ 614 (98.24) ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ,ಕುಮಾರಿ ಚಿನ್ಮಯಿ ಮಲ್ಲಿಕಾರ್ಜುನ. ಯಾಳವಾರ. 612 (ಶೇ 97.92) ತೃತೀಯ. ಕುಮಾರಿ ಪಲ್ಲವಿ ಹಡಪದ 610 (ಶೇ 97.06) ಆಯಿಷಾಬೇಗಂ ಅವರಾದಿ 609 (ಶೇ 97.04) ಪಲ್ಲವಿ ಕರ್ನಾಳ 607 (ಶೇ 97.12) ಅಶ್ವೀನಿ ಸಲಾದಳ್ಳಿ 602 (ಶೇ 96.03) ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ, ಪರೀಕ್ಷೆಗೆ ಕುಳಿತಿರುವ ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ಶೇ 90 ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡು ಪಾಸಾಗಿದ್ದಾರೆ.ಕನ್ನಡ ವಿಷಯದಲ್ಲಿ :05 ಇಂಗ್ಲೀಷ ವಿಷಯದಲ್ಲಿ :01 ಹಿಂದಿ :11 ಗಣಿತ :03, ಸಮಾಜ ವಿಜ್ಞಾನ :04 ರಷ್ಟು ವಿದ್ಯಾರ್ಥಿಗಳು 100ಕ್ಕೆ 100 ರಷ್ಟು ಅಂಕಗಳನ್ನು ಪಡೆದು ಸಾಧನೆಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.  

ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಹಾಗೂ ಮುಖ್ಯೋಪಾಧ್ಯಾಯರಾದ ಸಂತೋಷ ಪವಾರ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.