ಉತ್ತರ ಕನ್ನಡ ಜಿ.ಪಂ.ನಲ್ಲಿ ರಾಷ್ಟ್ರೀಯ ಪಂಚಾಯತ ರಾಜ್ ದಿನ ಆಚರಣೆ

ಉತ್ತರ ಕನ್ನಡ ಜಿ.ಪಂ.ನಲ್ಲಿ ರಾಷ್ಟ್ರೀಯ ಪಂಚಾಯತ ರಾಜ್ ದಿನ ಆಚರಣೆ National Panchayat Raj Day celebration in Uttara Kannada G.P

ಲೋಕದರ್ಶನ ವರದಿ 

ಕಾರವಾರ 24 :- ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಪಂಚಾಯತ ರಾಜ್ ದಿನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದೀಲೀಷ್ ಶಸಿ ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ , ತೆರಿಗೆ ವಸೂಲಾತಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದ ತಾಲೂಕ ಪಂಚಾಯತ, ಪ್ರಸ್ತುತ ಬೇಡಿಕೆ ತೆರಿಗೆ ವಸೂಲಾತಿಯಲ್ಲಿ ಅತೀ ಹೆಚ್ಚು ಪ್ರಗತಿ ಸಾಧಿಸಿದ ಜಿಲ್ಲೆಯ ಅತ್ಯುತ್ತಮ ಪಿಡಿಓ ಹಾಗೂ ಬಿಲ್ ಕಲೆಕ್ಟರ್ ಗೆ ಸನ್ಮಾನ, ಒಟ್ಟೂ ಬೇಡಿಕೆ ತೆರಿಗೆ ವಸೂಲಾತಿಯಲ್ಲಿ ಅತೀ ಹೆಚ್ಚು ಪ್ರಗತಿ ಸಾಧಿಸಿದ ಜಿಲ್ಲೆಯ ಅತ್ಯುತ್ತಮ ಕಾರ್ಯನಿರ್ವಾಹಕ ಅಧಿಕಾರಿ. ಪಿಡಿಓ ಹಾಗೂ ಬಿಲ್ ಕಲೆಕ್ಟರ್ ಗೆ ಸನ್ಮಾಗೆ,

ಮಹಿಳಾ ಸ್ನೇಹಿ ಉಪಕ್ರಮವನ್ನು ಅನುಷ್ಠಾನಗೊಳಿಸಿದ ಗ್ರಾಮ ಪಂಚಾಯತ ಎನ್‌.ಆರ್‌.ಎಲ್‌.ಎಂ ಸ್ವ ಸಹಾಯ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ, ಪಿಡಿಓಗೆ ಸನ್ಮಾನ, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೆರವು ನೀಡಿದ ಸರ್ಕಾರೇತರ ಸಂಸ್ಥೆಗಳು/ನಾಗರಿಕಾ ಸೇವಾ ಸಂಘಗಳಿಗೆ ಪುರಸ್ಕಾರ, ಉತ್ತಮ ದಾಖಲೆ ನಿರ್ವಹಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಎಲ್ಲಾ ಶಾಖಾ ಮುಖ್ಯಸ್ಥರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.