ರಾಜ್ಯೋತ್ಸವ ಧೀಮಂತ ಪ್ರಶಸ್ತಿಗೆ ಭಾಜನರಾದ ಡಾ.ಮಹಾಂತಸ್ವಾಮಿ
Dr. Mahantaswamy receives Rajyotsava Dheemanta Award
ಧಾರವಾಡ 04: ನಗರದ ಖ್ಯಾತ ಆಯುರ್ವೇದ ತಜ್ಞ ಹಾಗೂ ಸಿ.ಬಿ. ಗುತ್ತಲ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಮಹಾಂತಸ್ವಾಮಿ ಹಿರೇಮಠ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೊಡಮಾಡುವ ರಾಜ್ಯೋತ್ಸವದ ಧೀಮಂತ ಪ್ರಶಸ್ತಿಗೆ ಭಾಜನರಾಗಿದ್ದು, ರಾಜ್ಯೋತ್ಸವದ ದಿನ ಹುಬ್ಬಳ್ಳಿಯಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಧಾರವಾಡದ ಕೃ.ವಿ.ವಿ. ಸಂಘಟಿಸುವ ಕೃಷಿ ಮೇಳದಲ್ಲಿ ತಾವೂ ಸಹ ಒಂದು ಮಳಿಗೆಯನ್ನು ಪಡೆದುಕೊಂಡು ಅಲ್ಲಿ ಆಗಮಿಸುವ ರೈತ ಬಂಧುಗಳಿಗೆ ಆಯುರ್ವೇದ ವೈದ್ಯ ವಿಜ್ಞಾನ ಪದ್ಧತಿಯ ಮೂಲಕ ದೈಹಿಕ ಆರೋಗ್ಯ ಸಂವರ್ಧನೆ ಮಾಡಿಕೊಳ್ಳುವ ಬಗೆಯನ್ನು ಉಚಿತವಾಗಿ ತಿಳಿಸುತ್ತ ಬಂದಿದ್ದಾರೆ. ಜೊತೆಗೆ ಉಳವಿ ಚನ್ನಬಸವೇಶ್ವರರ ಮತ್ತು ಮುರುಘಾಮಠ ಜಾತ್ರೆಯಲ್ಲಿಯೂ ಡಾ.ಮಹಾಂತಸ್ವಾಮಿ ಹಿರೇಮಠ ಅವರು ಆಗಮಿಸಿದ ಭಕ್ತಗಣಕ್ಕೆ ಆಯುರ್ವೇದ ವೈದ್ಯ ವಿಜ್ಞಾನ ಪದ್ಧತಿಯ ಲಾಭಗಳ ಕುರಿತು ತಿಳಿವಳಿಕೆ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯೂ ಸೇರಿದಂತೆ ರಾಜ್ಯದ ವಿವಿಧ ಹಳ್ಳಿಗಳಲ್ಲಿ ಜರುಗಿದ ಆಯುರ್ವೇದ ವೈದ್ಯ ಪದ್ಧತಿಯ ಉಚಿತ ಶಿಬಿರಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ವಿನಿಮಯ ಮಾಡಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 