ಡಾ. ಬಿ.ಆರ್ ಅಂಬೇಡ್ಕರ್‌ರ ಭೀಮಯೋತ್ಸವ
Dr. B.R. Ambedkar's Bhimotsava
ಲೋಕದರ್ಶನ ವರದಿ
ಜಮಖಂಡಿ 13: ನಗರದ ಚಂದ್ರಗಿರಿ ಪೇಠ ಗಲ್ಲಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭೀಮಯೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ತೆರದ ವಾಹನದಲ್ಲಿ ಇದ್ದ ಡಾ,ಬಿ,ಆರ್,ಅಂಬೇಡ್ಕರ್ ಅವರ ಮೂರ್ತಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾಲಾರೆ್ಣ ಮಾಡುವ ಮೂಲಕ ಪೂಜೆಯನ್ನು ಸಲಿಸಿದರು.
ನಂತರ ಭವ್ಯವಾದ ಮೆರೆವಣಿಗೆ ಚಾಲನೆ ನೀಡುವ ಮೂಲಕ ಡಿಜೆ ಸೌಂಡ್‌ಗೆ ಯುವಕರೊಂದಿಗೆ ಸ್ಟೇಫ್ಸ್ ಹಾಕಿ ಕುಣಿದು ಕುಪ್ಪಳಿಸಿದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಜೊತೆಯಲ್ಲಿ ಮಾಜಿ ನಗರಸಭೆ ಸದಸ್ಯರು ಹಾಗೂ ದಲಿತ ಮುಖಂಡರು ಮತ್ತು ಯುವಕರು ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು. ನಗರದ ಪ್ರಮುಖ ರಸ್ತೆಯ ಮೂಲಕ ಭವ್ಯವಾದ ಮೆರೆವಣಿಗೆ ಜರುಗಿತು.
ಇದೇ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಸಿಪಿಐ ಮಲ್ಲಪ್ಪ ಮಡ್ಡಿ, ಶಹರ ಪಿಎಸ್‌ಐ ಅನೀಲ ಕುಂಬಾರ, ದಲಿತ ಮುಖಂಡರಾದ ಸುರೇಶ ನಡವಿನಮನಿ, ವಿಲಾಸ ನಡವಿನಮನಿ, ರಮೇಶ ನಡವಿನಮನಿ, ಅರುಣ ಹಾದಿಮನಿ, ಶರಣ ಮೂಲಂಗಿ, ಪರಶುರಾಮ ಹಾದಿಮನಿ, ದೀಪಕ ನಡವಿನಮನಿ, ಅನೀಲ ದಡ್ಡಿಮನಿ, ವಿಠಲ ಲೊಖಂಡೆ,ರಾಮು ನಡವಿನಮನಿ, ನಂದೀಶ ಹಾದಿಮನಿ, ವಿಠಲ ನಡುವಿನಮನಿ, ಕಿರಣ ಮಾಂಗ, ಪ್ರಜ್ವಲ್ ಕಡಕೋಳ, ನಂದೇಶ ನಡುವಿನಮನಿ, ಸಂತೋಷ ಮಾಂಗ, ಕಾಳು ಮಾಂಗ, ನವೀನ್ ನಡುವಿನಮನಿ, ಪ್ರಕಾಶ ನಡುವಿನಮನಿ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 