ವಿದ್ಯಾರ್ಥಿ ಸಾವು
ಲೋಕದರ್ಶನ ವರದಿ,
ಜಮಖಂಡಿ 08: ನಗರದ ಕೈಲಾಸ ಬಾರ ಹತ್ತಿರ ಬಸವೇಶ್ವರ ನಗರದಲ್ಲಿ ವಿದ್ಯಾರ್ಥಿಯೊಬ್ಬನು ರೂಮಿನಲ್ಲಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ
ರಾಯಬಾಗ ತಾಲೂಕ ಬಾವನಸೌದತ್ತಿ ಗ್ರಾಮದ ಪ್ರಣಯ ಮಲ್ಲನ್ನವರ 18 ವರ್ಷದ ವಿದ್ಯಾರ್ಥಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ತುಂಗಳ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬರುತ್ತದೆ.
ತುಂಗಳ ಶಾಲೆಯ ಪಕ್ಕದಲ್ಲಿ ಮೂರು ಅಂತಸ್ತಿನ ಕಟ್ಟಡದ ರೂಮಿನಲ್ಲಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುದರ್ೈವಿ, ವಿದ್ಯಾಥರ್ಿಯು ಎನ್.ಸಿ.ಸಿ.ಯಲ್ಲಿ ಸಹ ಭಾಗಿವಹಿಸುತ್ತಿದ್ದ ವಿದ್ಯಾರ್ಥಿ ಇತನ ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದುಬಂದಿರುವದಿಲ್ಲ.
ಆತ್ಮಹತ್ಯೆ ಮಾಡಿಕೊಂಡ ಪ್ರಣಯ ಮಲ್ಲನ್ನವರ ಸ್ನೇಹಿತರು ಹಾಗೂ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟುವಂತಾಗಿತು. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.