ಮುಧೋಳ

ಧರ್ಮಸ್ಥಳ ಸಂಸ್ಥೆಯಿಂದ ಉತ್ತೂರ ಬಸವೇಶ್ವರ ದೇವಸ್ಥಾನಕ್ಕೆ ಲಕ್ಷ ರೂ. ದೇಣಿಗೆ

ಧರ್ಮಸ್ಥಳ ಸಂಸ್ಥೆಯಿಂದ ಉತ್ತೂರ ಬಸವೇಶ್ವರ ದೇವಸ್ಥಾನಕ್ಕೆ ಲಕ್ಷ ರೂ. ದೇಣಿಗೆ

ಮುಧೋಳ 10: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತಾಲೂಕಿನ ಐತಿಹಾಸಿಕ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕಾಗಿ 1ಲಕ್ಷ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುತ್ತಿದ್ದು ಸೂಕ್ತ ಬಳಕೆ ಮಾಡಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ  ಧನಂಜಯ ಅವರು ಹೇಳಿದರು.

ಬುಧವಾರ ತಾಲ್ಲೂಕಿನ ಉತ್ತೂರ ಹೊರವಲಯದಲ್ಲಿರುವ ಐತಿಹಾಸಿಕ ದೇವಾಲಯ ಬಸವೇಶ್ವರ ದೇವಾಲಯದ ಜಿರ್ಣೋದ್ಧಾರಕ್ಕಾಗಿ ಒಂದು ಲಕ್ಷ ರೂ ಚಕ್‍ನ್ನು ದೇವಾಲಯದ ಕಮೀಟಿಗೆ ನೀಡಿ ಅವರು ಮಾತನಾಡಿದರು. ಐತಿಹಾಸಿಕ ಹಾಗೂ ಪಾರಂಪಾರಿಕವಾಗಿ ಬಂದಿರುವ ದೇವಾಲಯಗಳ ಜಿರ್ಣೋದ್ಧಾರ ಸಂಸ್ಥೆಯ ಮುಖ್ಯ ಗುರಿಯಾಗಿದ್ದು  ಕೇವಲ ಸ್ವಸಹಾಯ ಸಂಘಗಳಿಗೆ ಸಾಲಸೌಲಭ್ಯ ಮಾತ್ರವಲ್ಲ ಕೆರೆ ಹೂಳೆತ್ತುವ ಹಾಗೂ ಕೆರೆ ಅಭವೃದ್ದಿ,ಸರ್ಕಾರಿ ಶಾಲೆಗಳಿಗೆ ಕಲಿಕೋಪಕರಣಗಳ ಕೊಡಿಗೆ ಸೇರಿದಂತೆ ಹಲವಾರು ಸಮಾಜ ಸೇವಾ ಕಾರ್ಯಗಳಿಂದ ಜನಮನ ತಲುಲು ಜನರ ಸಹಕಾರ ಹಾಗೂ ಧರ್ಮಸ್ಥಳದ ಡಾ ವಿರೇಂದ್ರ ಹೆಗ್ಗಡೆಯವರ ಸಹಕಾರ ಮತ್ತು ಮಾರ್ಗದರ್ಶನದಿಂದ ವಿಶ್ವದ ಗಮನ ಸೆಳೆದಿರುವದೇ ಕಾರಣ ಎಂದು ಅವರು ಹೇಳಿದರು.

ಉತ್ತೂರು ಹಿರೇಮಠದ ನೂರಂದಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಉತ್ತೂರ ಗ್ರಾಮವನ್ನು ಚಿಕ್ಕ ಧರ್ಮಸ್ಥಳ ಎನ್ನಬಹುದು ಇಲ್ಲಿ ಕಾಯಕಯೋಗಿ ಉತ್ತೂರ ಬಸಯ್ಯಜ್ಜನವರು ನೆಲೆಸಿದ ಪುಣ್ಯಭೂಮಿ ಹಾಗೂ ಪವಾಡ ಪುರುಷ ಮಹಾಲಿಂಗಯ್ಯಜ್ಜನವರ ನೆಲೆಸಿದ ಭೂಮಿಯಾಗಿದ್ದು ಈ ಕಾರಣಕ್ಕಾಗಿ ನಾಡಿನೆಲ್ಲಡೆ ಲಕ್ಷಾಂತರ ಭಕ್ತರನ್ನು ಗ್ರಾಮ ಹೊಂದಿದೆ ಇಂತಹ ಬಸವೇಶ್ವರ ದೇವಾಲಯದ ಜಿರ್ಣೋದ್ಧಾರಕ್ಕಾಗಿ ಲಕ್ಷ ರೂ ನೀಡರುವ ಸಂಸ್ಥೆಗೆ ಗ್ರಾಮ ಜಿರಋಣಿಯಾಗಿದೆ ಎಂದು ಹೇಳಿದರು.

ಹಿರಿಯ ನಿವೃತ್ತ  ಶಿಕ್ಷಕ ಎಸ್.ಬಿ.ಮೊಕಾಶಿ, ರುದ್ರಯ್ಯ ಮಠಪತಿ, ಗುರುಸಾತಪ್ಪ ಚಿನಿವಾಲ, ಎಚ್.ಜಿ.ಕಂಕಣವಾಡಿ, ಬಾಬು ಘಾಟಗೆ, ಕಲ್ಲಪ್ಪ ಅಡವಿ ಸೇರಿದಂತೆ ಇತರರು ಇದ್ದರು. ಮೇಲ್ಚಿಚಾರಕಿ ಕವಿತಾ ಎಂ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ