ಮುಂಡರಗಿ

ವಿದ್ಯಾರ್ಥಿಗಳಿಗೆ ಆಯುಷ್ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಣೆ

ವಿದ್ಯಾರ್ಥಿಗಳಿಗೆ ಆಯುಷ್ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಣೆ

ಲೋಕದರ್ಶನ ವರದಿ 

ಮುಂಡರಗಿ 25:  ಸ್ಥಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌.ಎಸ್‌.ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ಶಿಬಿರದ ಮೂರನೇ ದಿನದ ಪ್ರಯುಕ್ತ ಮಕ್ತುಂಪುರ ಗ್ರಾಮದಲ್ಲಿ ಮುಂಡರಗಿ ಸರ್ಕಾರಿ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಡಾ.ಪಿ.ಬಿ.ಹಿರೇಗೌಡ್ರ ನೇತೃತ್ವದಲ್ಲಿ ರಕ್ತದಾನ ಶಿಬಿರದೊಂದಿದೆ ಎಲ್ಲರಿಗೂ ರಕ್ತದ ಗುಂಪು ಪರೀಕ್ಷೆ ಹಾಗೂ ಆಯುಷ್ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದಲ್ಲಿ ಆಯುಷ್ ಶಿಬಿರಕ್ಕೆ ಹಾಜರಾದ ವಿದ್ಯಾರ್ಥಿಗಳಿಗೆ ಆಯುಷ್ ವೈಧ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಿಸಲಾಯಿತು. 

ಈ ವೇಳೆ ಗ್ರಾಮದ ಮುಖಂಡ ಸಿದ್ದಪ್ಪ ಪೂಜಾರ, ಕಾಲೇಜು ಪ್ರಾಚಾರ್ಯರಾದ ಜಯಲಕ್ಷ್ಮೀ ಕುರಹಟ್ಟಿ ಶಿಬಿರಾಧಿಕಾರಿ ಮೆಗೇರಿ ಆನಂದರೆಡ್ಡಿ, ಉಪನ್ಯಾಸಕರಾದ ಉಮೇಶ ಮುಳಗುಂದ, ಸುಷ್ಮಾ ಅಂಗಡಿ, ನೀಲಾ ರಾಟಿ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ