ಜಮಖಂಡಿ

ಶಿಸ್ತು, ನೆಮ್ಮದಿ, ಸಂತೋಷಗಳು ಒಳ್ಳೆಯ ಶಿಕ್ಷಣದಿಂದ ಮಾತ್ರ ಸಾಧ್ಯ: ಎಸ್, ಡಿ, ಪೂಜಾರಿ

ಶಿಸ್ತು, ನೆಮ್ಮದಿ, ಸಂತೋಷಗಳು ಒಳ್ಳೆಯ ಶಿಕ್ಷಣದಿಂದ ಮಾತ್ರ ಸಾಧ್ಯ: ಎಸ್, ಡಿ, ಪೂಜಾರಿ

ಜಮಖಂಡಿ 14: ಶಿಸ್ತು, ನೆಮ್ಮದಿ, ಸಂತೋಷಗಳು ಶಿಕ್ಷಕರು ಒಳ್ಳೆಯ ಶಿಕ್ಷಣವನ್ನು ನೀಡಿದಾಗ ಮಾತ್ರ ದೊರೆಯಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಸ್, ಡಿ,ಪೂಜಾರಿ ಹೇಳಿದರು.

ತಾಲೂಕಿನ ಕುಲ್ಹಳಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಹುನ್ನೂರ ಗ್ರಾಮದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ 1989 ರಿಂದ 2010 ನೇ ಸಾಲಿನ ಹಳೇ ವಿದ್ಯಾಥರ್ಿ, `ವಿದ್ಯಾಥರ್ಿನಿಯರು ನಿವೃತ್ತ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಪಾದಪೂಜೆಯನ್ನು ಸಲಿಸಿದ ನಂತರ. ಗುರುವಂದನ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನ್ನ ಶಿಕ್ಷಕ ಹುದ್ದೆಯಲ್ಲಿ ಸೇವೆಯನ್ನು ಸಲಿಸಿದ್ದ ಹುನ್ನೂರ ಶಾಲೆಯ ಎಲ್ಲ ವಿದ್ಯಾಥರ್ಿಗಳು ಉನ್ನತ ಹುದ್ದೆಯಲ್ಲಿ ಸೇವೆಯನ್ನು ಸಲಿಸುತ್ತಿದ್ದಾರೆ. ಅವರಿಗೆ ನೀಡಿರುವ ಶಿಕ್ಷಣದಿಂದ ವಿದ್ಯಾಥರ್ಿಗಳು ಮುಂದೆ ಸಾಗಿರುವುದು ಹೆಮ್ಮಯಾಗುತ್ತಿದೆ ಎಂದರು.

ನಿವೃತ್ತ ಪ್ರಾಚಾರ್ಯ ಎಸ್,ಎಮ್, ಕೋಲೂರ ಮಾತನಾಡಿ, ಸಮಾಜಕ್ಕೆ ಕೊಡುಗೆಯನ್ನು ನೀಡಬೇಕಾದರೆ. ಹಣತೆಯ ದೀಪದಂತೆ ಕಾರ್ಯವನ್ನು ಮಾಡಿಬೇಕು. ಜೀವನದಲ್ಲಿ ಎರಡು ಗುಣಗಳು ಬರುತ್ತವೆ. ಅದರಲ್ಲಿ ಕೆಟ್ಟದು, ಒಳ್ಳೆಯದು ಗುಣಗಳು ಇರುತ್ತವೆ. ಅವುಗಳಲ್ಲಿ ಒಳ್ಳೆಯದನ್ನು ಮಾತ್ರ ಸ್ವೀಕರಿಸಿಕೊಂಡು ಸಮಾಜಕ್ಕೆ ಮಾದರಿಯ ಯುವಕರಾಗಿ ಸೇವೆಯನ್ನು ಸಲಿಸಬೇಕು. ಹುನ್ನೂರ ಕಾಲೇಜಿನಲ್ಲಿ ನನ್ನ ಅವಧಿಯಲ್ಲಿ ಪಿಯುಸಿಯಲ್ಲಿ ಕೇವಲ ಹದಿನಾರು ವಿದ್ಯಾಥರ್ಿಗಳು ಮಾತ್ರ ಇದ್ದರು. ಇವಾಗ ಹೆಮ್ಮರವಾಗಿ ಬೆಳೆದಿದೆ. ಅಲ್ಲಿನ ಶಿಕ್ಷಕರು ಸೇವೆಯು ಅಪಾರವಾಗಿದೆ. ನಿವೃತ್ತ ದೇಹಕ್ಕೆ ಮಾತ್ರವಾಗಿದೆ. ಆದರೆ ಜೀವನಕ್ಕೆ ನಿವೃತ್ತಿ ಹೊಂದಿಲ್ಲ. ಎಲ್ಲ ವಿದ್ಯಾಥರ್ಿಗಳು ನಮ್ಮಗೆ ಪಾದಪೂಜೆಯನ್ನು ಮಾಡಿ ಗೌರವ ಸಲಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.

ವಾಯ್,ವಾಯ್,ಕೊಕ್ಕನವರ, ಎಲ್,ಕೆ,ಗವಿಮಠ, ಕೆ,ಎಮ್, ಪೂಜಾರಿ, ಎಮ್, ಬಿ,ಕುಲಕಣರ್ಿ, ಮಾತನಾಡಿದರು, ಬಿ,ಪಿ,ಶೆಟ್ಟಿ, ಕೆ,ಕೆ,ಗೊಂಗಡಿ, ಆರ್,ಟಿ,ಕೋಣಶೆಟ್ಟಿ, ಎಸ್,ಜಿ,ಹಿರೇಮಠ, ಬಸವರಾಜ ಬಾಗೇನ್ನವರ, ಎಸ್,ಬಿ, ಹೊಸುರ, ಎಮ್,ಡಿ,ಪೂಜಾರಿ, ಆರ್,ಪಿ,ರಾಠೋಡ, ಎಮ್,ಕೆ,ಮಾನೆ, ಎಸ್,ಎಸ್,ಪಲಶೆಟ್ಟಿ, ಎಸ್,ಡಿ,ಕಳ್ಳಿಮನಿ, ಬಿ,ಎಲ್,ಮನಗೂಳಿ, ಎಮ್,ಎಮ್,ಜವಳಗಿ, ಬಿ,ಎಲ್,ಮನಗೂಳಿ, ಹಂಚಿನಾಳ, ಚಮಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದರು.

ನಿವೃತ್ತ ಶಿಕ್ಷಕ, ಶಿಕ್ಷಕಿಯರಿಗೆ ಹಾಗೂ ಶಿಕ್ಷಕ, ಶಿಕ್ಷಕಿಯರಿಗೆ ಪುಷ್ಪಗಳಿಂದ ಸ್ವಾಗತವನ್ನು ಮಾಡಿಕೊಂಡರು. ನಂತರ ಎಲ್ಲ ನಿವೃತ್ತ ಶಿಕ್ಷಕ, ಶಿಕ್ಷಕಿಯರಿಗೆ ಹೇಳೆಯ ವಿದ್ಯಾಥರ್ಿಗಳು ಸೇರಿಕೊಂಡು ಪಾದಪೂಜೆಯನ್ನು ಮಾಡಿದರು.


 

ಸುದ್ದಿ ಓದಿ