ಕತ್ರಿಗಾರ ಹಬ್ಬಕ್ಕೆ ಮ್ಯಾಗೇರಿ ಓಣಿಯಲ್ಲಿ ಭಕ್ತಿಭಾವದ ಸಿದ್ಧತೆ

ಕತ್ರಿಗಾರ ಹಬ್ಬಕ್ಕೆ ಮ್ಯಾಗೇರಿ ಓಣಿಯಲ್ಲಿ ಭಕ್ತಿಭಾವದ ಸಿದ್ಧತೆ Devotional preparations at Mageri Oni for the Kathrigara festival


ಲಕ್ಷ್ಮೇಶ್ವರ 11 : ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಬೀರೇಶ್ವರ ದೇವಸ್ಥಾನದಲ್ಲಿ ಹಾಲುಮತ ಕುರುಬರ ಸಮಾಜದ ವತಿಯಿಂದ ಪ್ರತಿ ವರ್ಷ ನಡೆದುಕೊಂಡು ಬರುತ್ತಿರುವ ಕತ್ರಿಗಾರ ಹಬ್ಬದ ಅಂಗವಾಗಿ ಸಾಮೂಹಿಕ ವಿವಾಹವು ಈ ವರ್ಷವೂ ಕೂಡ ನಡೆಯಲಿದ್ದು ಬಂದಂತ ಎಲ್ಲಾ ಭಕ್ತರಿಗೆ ಬುಂದೆ ಊಟದ ವ್ಯವಸ್ಥೆ ನಡೆಯದಿದ್ದು ಆ ಹಿನ್ನೆಲೆಯಲ್ಲಿ ಎಲ್ಲ ಓಣಿಯ ಯುವಕರು ಸೇರಿ ಬುಂದೆ ತಯಾರಿಯಲ್ಲಿ ತೊಡಗಿದ್ದಾರೆ. 

 ಕತ್ರಿಗಾರ ಹಬ್ಬದ ಸಾಮೂಹಿಕ ವಿವಾಹ ಕುರಿತು ಮಾತನಾಡಿದ ಬಸವರಾಜು ಗುಡಗುಂಟಿ ಅವರು ಪ್ರತಿ ವರ್ಷ ಮ್ಯಾಗೇರಿ ಓಣಿಯ ಬೀರೇಶ್ವರ ದೇವಸ್ಥಾನದಲ್ಲಿ ಕತ್ರಿಗಾರ ಹಬ್ಬವನ್ನು ಸಾಮಾಜಿಕ ಮಾಡುವ ಮೂಲಕ ಆಚರಿಸಿಕೊಂಡು ಬರುತ್ತಿದ್ದು ಅದರಂತೆ ಈ ವರ್ಷವೂ ಕೂಡ ಇದೆ ದಿನಾಂಕ 14-5-.2026 ರಂದು 7 ಜೋಡಿ ಸಾಮೂಹಿಕ ವಿವಾಹ ನಡೆಯಲಿದೆ. 

 ಸಾಮೂಹಿಕ ವಿವಾಹಕ್ಕೆ ಬಂದಂತ ಎಲ್ಲ ಭಕ್ತರಿಗೆ ಬುಂದೆ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಈ ಒಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗಳಿಗೆ ಆಶೀರ್ವದಿಸಿ ಬೀರೇಶ್ವರನ ಕೃಪಾ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ತಿಳಿಸಿದರು. ಈ ಸಮಯದಲ್ಲಿ ಮ್ಯಾಗೇರಿ ಓಣಿಯ ಎಲ್ಲಾ ಗುರು ಹಿರಿಯರು ಮುಖಂಡರು ಇದ್ದರು.