ಸ್ವಸ್ಥ ಮತ್ತು ಸುಖಿ ಕುಟುಂಬದ ನಿರ್ಮಾಣ ದಲ್ಲಿ ತಾಯಂದಿರ ಪಾತ್ರಮಹತ್ವದ್ದಾಗಿದೆ :ಯೋಗಿನಿ ಅಕ್ಕ*
Mothers play an important role in building a healthy and happy family: Yogini Akka
ಕೊಪ್ಪಳ 11: ಇಂದಿನ ಯುವ ಪೀಳಿಗೆಗೆ ಮಾತೃಸ್ಥಾನದ ಮಹತ್ವತೆಯನ್ನು ಅರಿವು ಮೂಡಿಸುವುದು ಅಗತ್ಯವಾಗಿದೆ ಸ್ವಸ್ಥ ಸುಖಿ ಕುಟುಂಬದ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದು ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು.ಅವರು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ದಲ್ಲಿ ಏರಿ್ಡಸಿದ ವಿಶ್ವ ತಾಯಂದಿರ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು ,ತಾಯಿ ಕರುಣೆಯ ಕಡಲು ಸಹನೆಯ ಮೂರ್ತಿ ವಾತ್ಸಲ್ಯದ ನಿಧಿ ಕ್ಷಮಾಧರಿತ್ರಿ ತ್ಯಾಗ ಪ್ರೀತಿಯ ಪ್ರತಿರೂಪ ಆಗಿದ್ದಾಳೆ ತಾಯಂದಿರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಾಗೂ ಮನೆಯ ವಾತಾವರಣ ನಿರ್ಮಾಣ ಮಾಡುವಲ್ಲಿ ಗುರುತರ ಜವಾಬ್ದಾರಿ ಹೊಂದಿದ್ದಾರೆ,
ತಾಯಂದಿರು ಸಂಸಾರ ಮಕ್ಕಳು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಆಂತರಿಕವಾಗಿ ಮಾನಸಿಕವಾಗಿ ಸಶಕ್ತರಾಗಬೇಕು ಅದಕ್ಕಾಗಿ ಆಧ್ಯಾತ್ಮ ಜ್ಞಾನ ಮತ್ತು ಮೆಡಿಟೇಶನ್ ನನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಕರೆ ನೀಡಿದರು. ದಿನಾಂಕ 12 ರಿಂದ 20 ರ ವರೆಗೆ ಮಾನಸಿಕ ಸಶಕ್ತಿಕರಣಕ್ಕಾಗಿ ರಾಜಯೋಗ ಶಿಬಿರ ದಿನಾಂಕ 12 ರಿಂದ ಸಂಜೆ 5:30 ರಿಂದ 6:30 ರ ವರೆಗೆ ಇರುತ್ತದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು. ವೇದಿಕೆಯಲ್ಲಿ ತಾಯಂದಿರ ಮಕ್ಕಳು ತಮ್ಮ ತಾಯಿಗೆ ಪ್ರೀತಿ ಗೌರವವನ್ನು ಸಲ್ಲಿಸಿ ಆಶೀರ್ವಾದ ಪಡೆದರು ಇದೊಂದು ಭಾವನಾ ಯುಕ್ತ ಕಾರ್ಯಕ್ರಮವಾಗಿ ಹೊರಹೊಮ್ಮಿತು. ಬ್ರಹ್ಮಕುಮಾರಿ ಸ್ನೇಹ ಅಕ್ಕ ಸೇರಿದಂತೆ ಅನೇಕ ಜನ ಮಹಿಳಾ ಸಂಘಟನೆಯ ಮುಖ್ಯಸ್ಥರು ಪದಾಧಿಕಾರಿಗಳು ಮಹಿಳಾ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ 