ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಬೆಳಗಾವಿ : ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಅಂತರಾಜ್ಯ ಖದೀಮರ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಶಾಹಪೂರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 44,86,390 ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಈ ಕಳ್ಳತನ ಪ್ರಕರಣದಲ್ಲಿ ಮಿಂಟು ವಿಶ್ವಾಸ @ ಚಿಂಟು ತಂದೆ ಕುಟ ವಿಶ್ವಾಸ (52) (ಸಾ: ಬಸ್ತಿ ಕ್ಯಾಲಾ, ತಿಲಕ ನಗರ ವೆಸ್ಟ್ ದೆಹಲಿ ಈತ ಬಂಧಿತನಾಗಿದ್ದಾನೆ.
ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಉಪ-ಪೊಲೀಸ್ ಆಯುಕ್ತರು(ಕಾ&ಸು) ಮತ್ತು ಉಪ-ಪೊಲೀಸ್ ಆಯುಕ್ತರು (ಅ&ಸಂ)ಹಾಗೂ ಸಹಾಯಕ ಪೊಲೀಸ ಆಯುಕ್ತರು ಮಾರ್ಕೇಟ ಉಪ-ವಿಭಾಗ ಇವರ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ ಠಾಣೆ ಅಪರಾಧ ಸಂಖ್ಯೆ 42/2026ಕಲಂ: 331(3), 331(4), 305 ಬಿ.ಎನ್.ಎಸ್-2023 ನೇದ್ದರಲ್ಲಿ ಬೆಳಗಾವಿ ನಗರದ ಶಹಾಪೂರ ಭಾರತನಗರದ ಮನೆಯೊಂದರ ಬೀಗ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ಮಿಂಟು ವಿಶ್ವಾಸ @ ಚಿಂಟು ತಂದೆ ಕುಟ ವಿಶ್ವಾಸ ಈತನಿಗೆ ದಸ್ತಗೀರ ಮಾಡಿ ಸದರಿಯವನಬಳಿಯಿದ್ದ 44,86,390 ರೂ ಮೌಲ್ಯದ 294.190 ಗ್ರಾಂ ಗಟ್ಟಿ ಬಂಗಾರರೂ ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಹೊಂಡಾ ಎಕ್ಟಿವಾ ಕಂಪನಿಯ ಮೋಟರ್ ಸೈಕಲ್ ಒಂದು 70,000 ರೂ ಹೀಗೆ ಒಟ್ಟು 45,56,390 ರೂ. ಮೌಲ್ಯದ ಬಂಗಾರವನ್ನು ಹಾಗೂ ಮೋಟರ್ ಸೈಕಲ್‌ನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
ಸದರಿ ಪ್ರಕರಣದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸಪೆಕ್ಟರ ಎಸ್.ಎಸ್.ಸಿಮಾನಿ, ಪಿ.ಎಸ್.ಐ ಮಣಿಕಂಠ ಪೂಜಾರಿ, ಪಿ.ಎಸ್.ಐ ಪ್ರವೀಣ ಬಿರಾದಾರ,.ಮಂಜುನಾಥ ಭಜಂತ್ರಿ ಪಿ.ಎಸ್.ಐ(ಸಿಸಿಬಿ ಘಟಕ) ಮತ್ತು ಸಿಬ್ಬಂದಿ ಜನರಾದ ಶಂಕರ ಗುಡದೈಗೊಳ, ಶ್ರೀಧರ ತಳವಾರ, ಅಜೀತ ಶಿಪೂರೆ, ಶ್ರೀಶೈಲ್ ಗೋಕಾವಿ, ಶಿವರಾಜ ಪಚ್ಚನ್ನವರ, ಶ್ರೀರಂಗ ಭಸ್ಯೆ, ಖಾದರಸಾಬ ಖಾನಮ್ಮನ್ನವರ, ಲಕ್ಷ್ಮಣ ಕಡೊಲಕರ, ಯಾಸಿರ್ಜ ಮಾದಾರ್ ಮತ್ತು ಬೆರಳುಮುದ್ರೆ ಘಟಕದ ಇನ್ಸಪೆಕ್ಟರ ರವರಾದ ಆನಂದ ಮೇತ್ರಿ ಹಾಗೂ ಸಿಬ್ಬಂದಿ ಮತ್ತು ತಾಂತ್ರಿಕ ವಿಭಾಗದ ರಮೇಶ ಅಕ್ಕಿ, ಮಹಾದೇವ ಕಾಸೀದ ಇವರು ಪ್ರಶಂಸನಿಯ ಕೆಲಸ ಮಾಡಿರುತ್ತಾರೆ. ಈ ತಂಡದ ಕಾರ್ಯಕ್ಕೆ ಪೊಲೀಸ್ ಆಯುಕ್ತ ಭೂಷಣ ಬೋರಸೆ ಇವರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.