ಜಮಖಂಡಿ

ಮೆದುಳು ಜ್ವರ ಲಸಿಕಾಕರಣ ಅಭಿಯಾನ

ಮೆದುಳು ಜ್ವರ ಲಸಿಕಾಕರಣ ಅಭಿಯಾನ

ಲೋಕದರ್ಶನ ವರದಿ,

ಜಮಖಂಡಿ 07 : ಮೆದುಳು ಜ್ವರದ ಕಾಯಿಲೆ ಚಿಕ್ಕಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಮಕ್ಕಳು ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ಜಿ,ಜಿ,ಹೈಸ್ಕೂಲ್ನಲ್ಲಿ ನಡೆದ ತಾಲೂಕಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಮೆದುಳು ಜ್ವರ ಲಸಿಕಾಕರಣ ಅಭಿಯಾನ ತಾಲೂಕಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಮೆದುಳು ದೇಶದಲ್ಲಿ 68 ಪ್ರಕರಣಗಳು ಕಾಣಿಸಿಕೊಂಡಿದ್ದು. ರಬಕವಿ-ಬನಹಟ್ಟಿ ನಗರದಲ್ಲಿ ಒಂದು ಪ್ರಕರಣ ಪತ್ತೆಯಾಗಿರುತ್ತದೆ. ಮೆದುಳು ಜ್ವರ ಕಾಣಿಸಿಕೊಂಡರೆ. ಖಾಸಗಿ ಆಸ್ಪತ್ರೆಯಲ್ಲಿ ಒಂದು ಚುಚ್ಚು ಮದ್ದಿನ ಬೆಲೆಯು ಎರಡು ಸಾವಿದ ಐದುನೂರು ರೂ,ಗಳ ಕಿಮ್ಮತ್ತಿನ ಚುಚ್ಚು ಮದ್ದು ಆಗಿದೆ. ಸರಕಾರ ಮಾತ್ರ ಪ್ರತಿಯೊಬ್ಬರಿಗೂ ಉಚಿತವಾಗಿ ಚುಚ್ಚು ಮದ್ದನ್ನು ನೀಡುತ್ತಿದೆ ಅದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಯಾರು ಭಯ ಪಡಿವ ಅವಶ್ಯಕತೆ ಇಲ್ಲ. ತಾಲೂಕಾ ವೈದ್ಯಾಧಿಕಾರಿಗಳು ಎರಡು ವಾರದಲ್ಲಿ ಎಲ್ಲ ಶಾಲಾ-ಕಾಲೇಜಿನ ಮಕ್ಕಳಿಗೆ ಕಡ್ಡಾಯವಾಗಿ ಮೆದುಳು ಜ್ಚರದ ಚುಚ್ಚು ಮದ್ದನ್ನು ಹಾಕಬೇಕೆಂದು ಸೂಚನೆಯನ್ನು ನೀಡಿದರು.

ಡಾ, ಎಚ್,ಡಿ, ದಡ್ಡಿ, ಬಿಇಓ ಎ,ಕೆ,ಬಸನ್ನವರ, ತಾಲೂಕಾ ವೈದ್ಯಾಧಿಕಾರಿ ಗೈಬುಸಾಬ ಗಲಗಲಿ ಮಾತನಾಡಿದರು, ಡಾ, ವೈಂಕಟರಾಜು, ನಂದು ಕನಕೇರಿ, ರಫಿಕ ಬಾರಿಗಡ್ಡಿ, ಮಾಂತೇಶ ನರಸನಗೌಡರ, ವಿಜಯಕುಮಾರ ವಂದಾಲ, ಎಸಿಡಿಸಿಒ ಆನಂದ, ನಗರಸಭೆ ಉಪಾಧ್ಯಕ್ಷನಿ ಪಕಾಲಿ, ಡಾ, ಪಿ,ಎಸ್, ಪರಮಗೌಡ, ಎಮ್,ಕೆ,ಕಡ್ಲಿಮಟ್ಟಿ, ಡಾ.ವಿದ್ಯಾಶ್ರೀ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಇದ್ದರು.


ಸುದ್ದಿ ಓದಿ