ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ’ಡೆವಿಲ್’ಫ್ಯಾನ್ಸ್ ಶೋಗೆ ಹೆಚ್ಚಿದ ಬೇಡಿಕೆ
Demand for 'Devil' fans show, which sets record in advance bookings, increases
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ’ಡೆವಿಲ್’ ಸಿನಿಮಾ ಟಿಕೆಟ್ ಬುಕ್ಕಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಬುಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಫ್ಯಾನ್ಸ್ ಶೋಗಳು ಹೌಸ್ಫುಲ್ ಆಗಿವೆ. ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್ನಿಂದ ದೊಡ್ಡ ಮೊತ್ತದ ಕಲೆಕ್ಷನ್ ದಾಖಲಾಗಿದೆ.
ಡಿಸೆಂಬರ್ 11ಕ್ಕೆ ರೀಲೀಸ್ ಆಗಲಿರುವ ಈ ಚಿತ್ರದ ಟಿಕೆಟ್ ಬುಕಿಂಗ್ ದಾಖಲೆ ಸೃಷ್ಟಿಸುತ್ತಿದೆ. ಅಭಿಮಾನಿಗಳು ಹೊಸ ಅವತಾರದಲ್ಲಿರುವ ದರ್ಶನ್ ಅವರನ್ನು ನೋಡಲು ಕಾತರರಾಗಿದ್ದಾರೆ. ಒಂದು ಗಂಟೆಗೆ 11 ಸಾವಿರ ಟಿಕೆಟ್ಗಳು ಬುಕ್ ಆಗಿರುವುದು ದಾಖಲೆ ಆಗಿದೆ. ಬಿಡುಗಡೆಗೆ 3 ದಿನಗಳು ಬಾಕಿ ಇದ್ದು, ಈಗಗಾಗಲೇ ಬುಕಿಂಗ್ನಿಂದಲೇ 2.52 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ.
ದಿ ಡೆವಿಲ್ ಸಿನಿಮಾಗೆ ಗುರುವಾರ ಬೆಳಗ್ಗೆ 6.30ರಿಂದಲೇ ಫ್ಯಾನ್ಸ್ ಶೋಗಳು ಆರಂಭವಾಗುತ್ತಿದ್ದು, ಅದರಿಂದಲೇ ಸುಮಾರು 2.52 ಕೋಟಿ ರೂ. ಹಣ ಸಂಗ್ರಹವಾಗಿದೆಯಂತೆ. ಈಗಾಗಲೇ ಮೊದಲ ದಿನಕ್ಕೆ 50 ಸಾವಿರ ಟಿಕೆಟ್ ಸೋಲ್ಡ್ ಓಟ್ ಆಗಿದ್ದು, ಶೋಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಇದಿನ್ನೂ ಸಿಂಗಲ್ ಸ್ಕ್ರೀನ್ ಅಷ್ಟೇ. ಮಲ್ಟಿಪ್ಲಕ್ಸ್ ಬುಕಿಂಗ್ ಇನ್ನಷ್ಟೇ ಓಪನ್ ಆಗಬೇಕಿದೆ.
ಬರೀ ಸಿಂಗಲ್ ಸ್ಕ್ರೀನ್ನ ಫ್ಯಾನ್ಸ್ ಶೋನಿಂದಲೇ 2.50 ಕೋಟಿ ರೂ. ಹರಿದುಬಂದರೆ, ಅವತ್ತಿನ ದಿನಕ್ಕೆ ಎಷ್ಟು ಗಳಿಕೆ ಆಗಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಸಿಂಗಲ್ ಸ್ಕ್ರೀನ್ ಗಳಲ್ಲಿ ಗುರುವಾರ ಬೆಳಗ್ಗೆ 6.30ರ 50ಕ್ಕೂ ಅಧಿಕ ಫ್ಯಾನ್ಸ್ ಶೋಗಳು ಸೋಲ್ಡ್ ಓಟ್ ಆಗಿವೆ.ಇನ್ನು, ಫ್ಯಾನ್ಸ್ ಶೋಗೆ ಸುಮಾರು 500-600 ರೂ.ವರೆಗೆ ಟಿಕೆಟ್ ದರ ಇದೆ.
ಮಲ್ಟಿಪ್ಲೆಕ್ಸ್ ಓಪನ್ ಆದಮೇಲೆ ಅಲ್ಲಿ ಯಾವ ರೀತಿ ಟಿಕೆಟ್ ದರ ಇರಲಿದೆ ಎಂಬುದನ್ನು ಗಮನಿಸಬೇಕಿದೆ. ಒಟ್ಟಾರೆ, ಮೊದಲ ನಾಲ್ಕು ದಿನಗಳು ದಿ ಡೆವಿಲ್ ಸಿನಿಮಾಗೆ ಬಹಳ ಮುಖ್ಯವಾಗಿದ್ದು, ಮೊದಲ ವಾರಾಂತ್ಯಕ್ಕೆ ಎಷ್ಟು ಗಳಿಕೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಪ್ರಕಾಶ್ ವೀರ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಜೆ ಜಯಮ್ಮ ಮತ್ತು ಸರಿಗಮಪ ಸಂಸ್ಥೆ ಹಣ ಹಾಕಿವೆ.
ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದ್ದು, ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಕಾಂತರಾಜ್ ಸಂಭಾಷಣೆ ಇರುವ ಡೆವಿಲ್ ಸಿನಿಮಾಕ್ಕೆ ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 