ಡೆಲಿವರಿ ಬಾಯ್ಸ್ ಗಳನ್ನು ದರೋಡೆ ಮಾಡಿದ ದುಷ್ಕರ್ಮಿಗಳು
ಬೆಂಗಳೂರು, ಜ 9, ನಗರದಲ್ಲಿ ದುಷ್ಕರ್ಮಿಗಳು ಡೆಲಿವರಿ ಬಾಯ್ಸ್ಗಳನ್ನು ಕೇಂದ್ರಿಕರಿಸಿಕೊಂಡು ದರೋಡೆ ಮಾಡಿರುವ ಪ್ರಕರಣಗಳು ವರದಿ ಆಗಿವೆ.ಅಧಿಕ ಮೊತ್ತದ ಆಹಾರ ಆರ್ಡರ್ ಮಾಡಿ, ಅದನ್ನು ಡೆಲಿವರಿ ಮಾಡಲು ಬಂದಿದ್ದ ಸಿಬ್ಬಂದಿಯಿಂದ ಹಣ, ಮೊಬೈಲ್ ಹಾಗೂ ಪರ್ಸ್ ದೋಚಿ ಪರಾರಿಯಾಗಿದ್ದಾರೆ. ಇನ್ನೊಂದೆಡೆ ದುಷ್ಕರ್ಮಿಗಳು ಸಿಟಿ ಕ್ರೈಂ ಬ್ರಾಂಚ್ ಲೊಕೇಷನ್ ನೀಡಿ ನಾನ್ ವೆಜ್ ಫುಡ್ ಆರ್ಡರ್ ಮಾಡಿದ್ದಾರೆ. ಬಳಿಕ ಆರ್ಡರ್ ಡೆಲಿವರಿ ಮಾಡಲು ಬಂದ ಡೆಲಿವರಿ ಬಾಯ್ ಸಚಿನ್ ಅನ್ನು ಸುಬ್ರಹ್ಮಣ್ಯಪುರದ ನಿರ್ಜನ ಪ್ರದೇಶಕ್ಕೆ ಕರೆಸಿದ್ದಾರೆ. ಅಲ್ಲಿ ಮಚ್ಚು ರಾಡ್ನಿಂದ ಹಲ್ಲೆ ನಡೆಸಿ ಸಚಿನ್ ಅವ ರ ಮೊಬೈಲ್, ಪರ್ಸ್ ಹಾಗೂ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಾಟನ್ಪೇಟೆಯಲ್ಲಿ ಮಧು ಎಂಬಾತನ ಮೇಲೆ ಹಾಗೂ ಸುಬ್ರಹ್ಮಣ್ಯ ಪುರದಲ್ಲಿ ಸಚಿನ್ ಎಂಬಾತನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ.ಸದ್ಯ ಎರಡು ಪ್ರಕರಣಗಳ ಆರೋಪಿಗಳಿಗಾಗಿ ಕಾಟನ್ ಪೇಟೆ ಮತ್ತು ಸುಬ್ರಹ್ಮಣ್ಯಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 