ರಾಕ್ ಗಾರ್ಡನ್ ಸನಿಹ ದಂಡೆಯಲ್ಲಿ ಜಿಂಕೆಯ ಮೃತದೇಹ ಪತ್ತೆ
Deer carcass found on a bank near Rock Garden
ಕಾರವಾರ 16: ಇಲ್ಲಿನ ರಾಕ್ ಗಾರ್ಡನ್ ಸನಿಹ ದಂಡೆಯಲ್ಲಿ ಜಿಂಕೆಯ ಮೃತದೇಹ ಶುಕ್ರವಾರ ಸಂಜೆ ಪತ್ತೆಯಾಗಿದೆ. ಕಡಲತೀರಕ್ಕೆ ವಾಯು ವಿಹಾರಕ್ಕೆ ಬಂದ ನಾಗರಿಕರು ಜಿಂಕೆಯ ಮೃತದೇಹ ಕಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಬೈತಖೋಲ್ ಸನಿಹದ ಗುಡ್ಡದಂಚಿನ ಕಾಡಿನಿಂದ ಬಂದ ಜಿಂಕೆ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ.ಜಿಂಕೆಯ ಮೃತದೇಹದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ, ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಜಿಂಕೆಯ ಮೃತದೇಹವನ್ನ ಮರೋಣೋತ್ತರ ಪರೀಕ್ಷೆಗೆ ಕಳುಹಿಸಿದರು .ಭೂದೇವಿ ಗುಡ್ಡ ಅಥವಾ ಬೆಟ್ಟದ ಅಂಚಿಗೆ ಇರುವ ಲೇಡೀಸ್ ಬೀಚ್ ಬದಿಯಿಂದ ಇತರೆ ಪ್ರಾಣಿಯ ದಾಳಿ ತಪ್ಪಿಸಿ ಕೊಳ್ಳಲು ಹೋಗಿ , ಜಿಂಕೆ ಸಮುದ್ರದಲ್ಲಿ ಬಿದ್ದು ಮೃತಪಟ್ಟಿರ ಬಹುದು ಎಂದು ಅರಣ್ಯ ಇಲಾಖೆಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಜಿಂಕೆಸಮುದಲ್ಲಿನ ಅಲೆಗಳ ಹೊಡೆತಕ್ಕೆ ಉಸಿರುಗಟ್ಟಿ ಜಿಂಕೆ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ.
ಜಿಂಕೆಗೆ ಸುಮಾರ 6 ರಿಂದ 7 ವರ್ಷ ಆಗಿರಬಹುದು . ಕಳೆದ ಎರಡು ದಿನಗಳ ಹಿಂದೆಯೇ ಸಮುದ್ರಕ್ಕೆ ಬಿದ್ದು, ಜಿಂಕೆ ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ....
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 