ಕುಕನೂರ್

ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮ

ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮ

 ಕುಕನೂರು05:  ತಾಲೂಕಿನ ಮಂಗಳೂರು ಗ್ರಾಮದಲ್ಲಿ ಫೆ. 04ರಂದು ಸಮುದಾಯ ಆರೋಗ್ಯ ಕೇಂದ್ರ  ಮಂಗಳೂರಿನ  ಎನ್ಸಿ ಡಿ ಕ್ಲಿನಿಕ್  ವತಿಯಿಂದ  ಸರಕಾರಿ  ಕೈಗಾರಿಕಾ ತರಬೇತಿ  ಸಂಸ್ಥೆ ಮಂಗಳೂರು ನಲ್ಲಿ ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮ  ಹಮ್ಮಿಕೊಳ್ಳಲಾಯಿತು .    

   ಡಾ ಅಭಿಷೇಕ ವೈದ್ಯಾಧಿಕಾರಿಗಳು ಬಾಯಿ  ಕುರಿತು ವಿವರಿಸುತ್ತಾ  ಬಾಯಿ ಕ್ಯಾನ್ಸರ್ನ  ತಂಬಾಕು, ಮಧ್ಯಪಾನ, ಸೇವೆನೆಯಿಂದ  ಕ್ಯಾನ್ಸರ್ ರೋಗ ಬರುತ್ತದೆ.  ಬಾಯಿ ಒಳಗಡೆ  ಬಿಳಿ, ಕೆಂಪು ಕಲೆ  ಆಗುವದು,  ಬಾಯಿಯಲ್ಲಿ ಹುಣ್ಣು ಆಗುವದು ಊಟ ಮಾಡಲು ಆಗದಿರುವದು ಬಾಯಿ ತೆರೆಯಲು ಆಗದಿರುವಂತಹ ಲಕ್ಷಣಗಳು ಕಂಡು ಬಂದಲ್ಲಿ ದಂತ ವೈದ್ಯರನ್ನು ಕಂಡು ತಪಾಸಣೆಗೆ ಒಳಗಾದರೆ ಮೊದಲ ಹಂತದಲ್ಲಿ ಕ್ಯಾನ್ಸರ್ ಪತ್ತೆಹಚ್ಚಿ ಚಿಕಿತ್ಸೆ ಕೊಡಬಹುದಾಗಿದೆ ಎಂದರು.    

   ವಿವಿಧ ರೀತಿಯ ಕ್ಯಾನ್ಸರ್ ಕುರಿತು ತಿಳಿಸುತ್ತಾ ಮಾತನಾಡಿದ ಆಪ್ತಸಮಾಲೋಚಕ ಅಮರೇಶರವರು ಯುವಪೀಳಿಗೆ ತಂಬಾಕು ಸೇವನೆಯನ್ನು ಸಿನಿಮಾ ಇನ್ನಿತರ ಮಾಧ್ಯಮದಗಳ ಪ್ರಭಾವಕ್ಕೆ ಕೂತೂಹಲಕ್ಕೆ ಒಳಗಾಗಿ, ಕಲಿಯುತ್ತಾರೆ ನಂತರ  ಅದನ್ನು ತ್ಯಜಿಸಲು ತುಂಬಾ ತೊಂದರೆ ಅನುಭವಿಸುತ್ತಾರೆ ಅಂತಹವರು ಜಿಲ್ಲಾ ಆಸ್ಪತ್ರೆಯಲ್ಲಿರುವ  ತಂಬಾಕು ಮುಕ್ತ ಕೇಂದ್ರ ಕ್ಕೆ ಭೇಟಿ ನೀಡಿ ಸಮಾಲೋಚನೆ & ಚಿಕಿತ್ಸೆ ಪಡೆದು ಅದರಿಂದ ಹೊರಬರುವ ಮೂಲಕ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಿಂದ ದೂರ ಇರಬೇಕು ಎಂದರು. ಸಮತೋಲನ ಆಹಾರ,  ವ್ಯಾಯಾಮ & ಯೋಗ ಕುರಿತು ತಿಳಿಸಿದರು.     

  ಮಾರುತಿ ಓಅಆ ಶೂಶ್ರುಷಕ ಅಧಿಕಾರಿ ಮಾತನಾಡಿ  ತಂಬಾಕಿನಲ್ಲಿ  4,000 ಕ್ಕಿಂತ ಹೆಚ್ಚು ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕ ಇರುತ್ತವೆ.  ಇಂತಹ ತಂಬಾಕು  ಸೇವಿಸುವ ಯುವಕರು ಅತಿ ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತಿದ್ದಾರೆ ಎಂದು ಹೇಳಿದರು.    

   ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಉಪನ್ಯಾಸಕರು ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ ನೀಡಲಾದ ಮಾಹಿತಿಯನ್ನು  ಇತರರಿಗೂ ತಿಳಿಸುವ ಜೊತೆಗೆ ನೀವು ಕೂಡ ತಂಬಾಕು ಮತ್ತು ಮದ್ಯಪಾನದಿಂದ ದೂರ ಇರುವ ಮೂಲಕ ನಿಮ್ಮ ಮತ್ತು ಸಮಾಜವದ ಸ್ವಾಸ್ಥ್ಯ ವನ್ನು ಕಾಯುವ  ಜವಾಬ್ದಾರಿ ಯುವಕರದ್ದಾಗಿದೆ ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಗೀತಾ, ರಮೇಶ, ಸಾಹೇಬಣ್ಣ, ಸುಮಾ, ಸಬೀನಾ, ಪುಷ್ಪಾಂಜಲಿ, ಉಪಸ್ಥಿತರಿದ್ದರು ಲಕ್ಷ್ಮಣ ನಿರೂಪಿಸಿ, ವಂದಿಸಿದರು. ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿ ನಂತರ ಗ್ರಾಮದಲ್ಲಿ ಜಾಥಾ ಮಾಡಲಾಯಿತು 

ಸುದ್ದಿ ಓದಿ