ದಾಸಸಾಹಿತ್ಯ ಸೌರಭದ ಪಂಚಮ ವಾರ್ಷಿಕೋತ್ಸವ
ಲೋಕದರ್ಶನ ವರದಿ,
ಜಮಖಂಡಿ 12: ಸೌರಭದಾಸ ಸಾಹಿತ್ಯ ವಿದ್ಯಾಲಯವು ಸಾವಿರಾರು ವಿದ್ಯಾರ್ಥಿಗಳನ್ನು ಕೇವಲ ಐದು ವರ್ಷದಲ್ಲಿ ಹೊಂದಿದ್ದು, ಇದು ಹೆಮ್ಮರವಾಗಿ ಬೆಳೆಯುತ್ತಿದೆ.ವೃದ್ದರಿಗೆ ಧಾರ್ಮಿಕ ತೆಯನ್ನು ತುಂಬುವಲ್ಲಿ ಸಹಕಾರಿಯಾಗಿದೆಂದು ಸೌರಭದಾಸ ಸಾಹಿತ್ಯ ಸಂಯೋಜಕ ಪಂಡಿತ ಪ್ರಮೋದಾಚಾರ್ಯ ಪೂಜಾರ ಹೇಳಿದರು.
ಸ್ಥಳೀಯ ಸಿದ್ದರಾಮೇಶ್ವರ ಕಾಲನಿಯ ಶ್ರೀಉತ್ತರಾದಿಮಠದಲ್ಲಿ ವಿಶ್ವಮಧ್ವ ಮಹಾ ಪರಿಷತದಡಿಯಲ್ಲಿ ಆಯೋಜಿಸಿದ್ದ ವಿಶ್ವಹರಿದಾಸ ಸಮ್ಮೇಳನ, ಪಂಚಯತಿಗಳ ಆರಾಧನಾ ಮಹೋತ್ಸವ ಮತ್ತು ದಾಸಸಾಹಿತ್ಯ ಸೌರಭದ ಪಂಚಮ ವಾರ್ಷಿಕೋತ್ಸವ ಉಪನ್ಯಾಸ ನೀಡಿದರು.
ವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬರುವವರಿಗೆ ದಾರಿದೀಪವಾಗಿ ಧರ್ಮದ ಮಾರ್ಗದತ್ತ ಮುನ್ನಡೆಸಲು ಸಹಾಯಕವಾಗುತ್ತದೆ.ಕಲಿಕೆಗೆ ಎಂದಿಗೂ ಕೊನೆಯಿಲ್ಲ. ಕಡೆಯವರೆಗೂ ಕಲಿಯುತ್ತಲೇ ಇರಬೇಕು ಎಂದರು.
ಈ ಐದು ವರ್ಷದಲ್ಲಿ ದಾಸ ಸಾಹಿತ್ಯದ ಪ್ರಮಾಣಪತ್ರ ಪಡೆದವರು ಇನ್ನೂ ಹೆಚ್ಚಿಗೆ ಬಾಲಕ ಮತ್ತು ವೃದ್ದರನ್ನು ಸೇರಿಸುವಲ್ಲಿ ಪ್ರಯತ್ನಿಸಲಾಗಿದೆ.ಅದರಿಂದ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳು ಇನ್ನೂ ಹೆಚ್ಚಿಗೆ ಚಿರಪರಿಚಿತವಾಗುತ್ತವೆ. ದಾಸರ ಕೀರ್ತನೆಗಳು ಹೆಚ್ಚು ಪ್ರಚಲಿತವಾಗಿತ್ತವೆ. ಭಗವಂತನಲ್ಲಿ ಹೆಚ್ಚಿಗೆ ಭಕ್ತಿ ಮೂಡುತ್ತದೆ. ಇಲ್ಲಿರುವ ಪ್ರತಿಯೊಬ್ಬರೂ ಮನೆ,ಮನೆಗೆ ದಾಸರ ಕೀರ್ತನೆಗಳ ಸಾಹಿತ್ಯದ ಹೊನಲು ಹರಿಸಿ,ಆದರ್ಶ ಕುಟುಂಬಸ್ಥರಾಗಲು ಸಾಧ್ಯ. ಇದು ಕೇವಲ ಮಹಿಳೆಯರಿಗೆ, ಪುರುಷರಿಗೆ ಮತ್ತು ಬಾಲಕ, ಬಾಲಕಿಯರಿಗೆ ಬಾಲದಾಸ ಸಾಹಿತ್ಯದ ಪರಿಚಯವನ್ನೂ ಸಹ ಮಾಡಿಕೊಡಲಾಗುವದು ಎಂದು ಹೇಳಿದರು.
ಸ್ಥಳೀಯ ದಾಸ ಸಾಹಿತ್ಯ ಸಂಚಾಲಕಿ ಶ್ರೀದೇವಿ ಕುಲಕರ್ಣಿ , ರಮಾ ವೈದ್ಯ, ಆರ್.ಆರ್. ಕುಲಕರ್ಣಿ , ಉಪಾಧ್ಯೆ, ಆರ್.ಜಿ.ಉಮರ್ಜಿ , ಆರ್.ಬಿ.ಕುಲಕರ್ಣಿ , ಎಸ್.ಎನ್.ಬೀಡಕರ ಅನೇಕರಿದ್ದರು.