ಮುಧೋಳ

ಹೈನುಗಾರಿಕೆ ಅಭಿವೃದ್ಧಿಗೆ ರೈತರ ಶ್ರಮವೇ ಫಲ : ಡಾ.ಎಸ್ ದೀಕ್ಷಿತ್.

ಹೈನುಗಾರಿಕೆ ಅಭಿವೃದ್ಧಿಗೆ ರೈತರ ಶ್ರಮವೇ ಫಲ : ಡಾ.ಎಸ್ ದೀಕ್ಷಿತ್.

ಮುಧೋಳ:  ತಾಲೂಕಾ ರನ್ನ ಬೆಳಗಲಿಯ ಶ್ರೀ ಬಸರಿಗಿಡದ ಲಕ್ಷ್ಮೀ ದೇವಸ್ಥಾನದ ಮಂಟಪದಲ್ಲಿ ಸಿದ್ದಾಪುರ ತೋಟ ಹಾಲು ಉತ್ಪಾದಕರ ಸಹಕಾರಿ ಸಂಘ ನಿ., ರನ್ನ ಬೆಳಗಲಿಯ 2022- 23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಕಳೆದ ಗುರುವಾರದಂದು ಜರುಗಿತು.

ಬಾಗಲಕೋಟೆ ಮತ್ತು ವಿಜಯಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್ ಡಿ ದೀಕ್ಷಿತ್ ರವರು ಈ ದಿನ ನಮ್ಮ ಹಾಲು ಒಕ್ಕೂಟ ಇಷ್ಟೊಂದು ಏಳಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸಿದೆ, ಎಂದರೆ ಅದಕ್ಕೆ ಮೂಲ ಕಾರಣ ರೈತ ಬಾಂಧವರು ಮತ್ತು ಅವರ ಶ್ರಮದ ಫಲ ಎಂದು ಹೇಳಿದರು, ಉತ್ತಮರಾಸುಗಳನ್ನು ಹೊಂದಲು ಉತ್ತಮ ಆರೋಗ್ಯಕರವಾದ ಒಳ್ಳೆಯ ಪೌಷ್ಟಿಕವಾದ ಆಹಾರವನ್ನು ನೀಡಬೇಕು,.

ನಮ್ಮ ಒಕ್ಕೂಟ ವೈದ್ಯರಲ್ಲಿ  ಸಾಕಷ್ಟು ಉತ್ತಮವಾದ ಔಷದೋಪಚಾರಗಳಿರುತ್ತವೆ. ಅವುಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ವಿಚಾರವನ್ನು ತಿಳಿಸುವುದರ ಜೊತೆಗೆ,ತಮ್ಮ 35 ವರ್ಷದ ಪಶು ವೈದ್ಯಕೀಯ ಸೇವೆಯನ್ನು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟದ ನಿರ್ದೇಶಕರಾದ ಸಂಜಯ್ ತಳೆವಾಡ ರವರು ಎಲ್ಲಾ ಹಾಲು ಉತ್ಪಾದಕ ರೈತ ಬಾಂಧವರಿಗೆ ಹಾಲು ಸಂಗ್ರಹನೆಗೆ ಸ್ಟೀಲ್  ಕ್ಯಾನಗಳನ್ನು ವಿತರಿಸಿದರು ಮತ್ತು ಸಂಘದಲ್ಲಿ ಪ್ರತಿ ವರ್ಷ ಏರ್ಪಡಿಸುವ ಪುರಸ್ಕಾರವಾದ ಎಮ್ಮೆ ಹಾಲನ್ನು  ಅತಿ ಹೆಚ್ಚಿನ ಪ್ರಮಾಣದಲ್ಲಿ ಡೇರಿಗೆ ನೀಡಿ ಪ್ರಥಮ ಸ್ಥಾನ ಪಡೆದ ಮಾಲಿಂಗಪ್ಪ ಬಸಪ್ಪ ಹಿಪ್ಪರಗಿ, ದ್ವಿತೀಯ ಸ್ಥಾನದಲ್ಲಿ ಶಾಂತವ ಕರೆಪ್ಪ ಕುಂಬಾಳಿ, ತೃತೀಯ ಸ್ಥಾನದಲ್ಲಿ ಸುರೇಶ್ ಜಯವಂತ್ ಸಿದ್ದಾಪುರ ಹಾಗೂ ಆಕಳ ಹಾಲಿನ ಪ್ರಮಾಣದಲ್ಲಿ ಪ್ರಥಮ ಸಂಗೀತ ಪಾಂಡು ಆರೇನಾಡ. ದ್ವಿತೀಯ ಭೀಮಪ್ಪ ರಾಮಪ್ಪ ಸಿದ್ದಾಪುರ. ತೃತೀಯ ಶಿವಪ್ಪ ಮಲ್ಲಪ್ಪ ಹಿಪ್ಪರಗಿ ಈ ಎಲ್ಲಾ ವಿಜೇತರಿಗೆ ಅಭಿನಂದಣಾ ಪತ್ರ ನೀಡುವ ಜೊತೆಗೆ 500 ಗ್ರಾಂ ತುಪ್ಪವನ್ನು ನೀಡಿ ಸನ್ಮಾನಿಸಿ ಗೌರವಿಸಿದರು ಮತ್ತು  ಹಾಲು ಒಕ್ಕೂಟ ದಿಂದ ಪ್ರಾರಂಭಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ತಿಳಿಸಿದರು. ಹಾಲು ಒಕ್ಕೂಟದ ಅಧಿಕಾರಿಗಳಾದ ಆರ್ ಎಸ್ ಚೌಹಾನ, ವಿ ಆರ್ ನಟಕಟ್ಟಿ, ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ, ಸಂಘದ ಮುಖ್ಯ ಕಾರ್ಯನಿರ್ವಾಹಕರಾದ  ಪರಶುರಾಮ ಹೊಸೂರ ಕಾರ್ಯಕ್ರಮದ ಕುರಿತು ಮಾತನಾಡಿದರು.ವೇದಿಕೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ  ಮುತ್ತಪ್ಪ ಹಿಪ್ಪರಗಿ ವಹಿಸಿದರು, ಬಸವರಾಜ್ ಅರೇನಾಡ, ದಯಾನಂದ ಸಿದ್ದಾಪುರ, ಹಣಮಂತ ಗುಂಜಿಗಾವಿ, ಶ್ರೀಶೈಲ ಸಿದ್ದಾಪುರ, ಸಂತೋಷ ಹಿಪ್ಪರಗಿ, ಜಯವಂತ ಸಿದ್ದಾಪುರ. ಶ್ರೀಕಾಂತ ಕುಂಬಾಳಿ, ನಾರಾಯಣ ಹೊಸೂರ, ಚಂದ್ರಲೇಖ ಸಿದ್ದಾಪುರ, ಸಕ್ಕೂಬಾಯಿ  ಪೆದ್ದನ್ನವರ, ನಂದೀಶ ಮಲಾವಡಿ, ಲಕ್ಷ್ಮೀಬಾಯಿ ನ್ಯಾಮಗೌಡ  ಮತ್ತು ಚೇತನ್ ಸಿದ್ದಾಪುರ ಹಾಗೂ ರೈತಬಾಂಧವರು ಉಪಸ್ಥಿತರಿದ್ದರು.

ಸುದ್ದಿ ಓದಿ