ಹಲಿಮನವರ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ ರೈತರಿಂದ ಸೆರೆ
Crocodile spotted in Halima's well, caught by farmers
ಸವದತ್ತಿ 23: ಸಮೀಪದ ಸಿಂಗಾರಕೊಪ್ಪ ರಸ್ತೆ ಮಾರ್ಗ ಹಲಿಮನವರ ಬಾವಿಯಲ್ಲಿ ಬುಧವಾರ ಸಂಜೆ ವೇಳೆಯಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ರೈತ ಮುಖಂಡರು ಹಾಗೂ ಗ್ರಾಮಸ್ಥರು ಸೇರಿ ಅದನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
ಮಲಪ್ರಭಾ ನದಿಯ ದಡಕ್ಕೆ ಹೊಂದಿಕೊಂಡಿರುವ ಕ್ಯಾರಸಪ್ಪನಹಳ್ಳದ ಹತ್ತಿರವಿರುವ ಹಲಿಮನವರ ಬಾವಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಮೊಸಳೆ ಕಾಣಿಸಿಕೊಂಡಿದೆ.ಬುಧವಾರ ಸಂಜೆ ವೇಳೆ ರೈತರು ಹೊಲಕ್ಕೆ ನೀರು ಹರಿಸಲು ಹೋದಾಗ ಬಾವಿಯಲ್ಲಿ ಮೊಸಳೆ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ರೈತ ಮುಖಂಡರು ಹಾಗೂ ಸಾರ್ವಜನಿಕರು ಒಗ್ಗೂಡಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಮಾತನಾಡಿದ ರೈತ ಮುಖಂಡ ಅಲೀಸಾಬ ನೂಲಗಿ, ನದಿ ದಡದ ಪ್ರದೇಶಗಳಲ್ಲಿ ಮೊಸಳೆಗಳ ಕಾಟ ಹೆಚ್ಚಾಗುತ್ತಿರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ರೈತರು ಪ್ರತಿದಿನ ಬೆಳ್ಳಗೆ 5ಗಂಟೆಗೆ ಕತ್ತಲೆಯಲ್ಲಿಯೇ ಹೊಲಕ್ಕೆ ನೀರು ಹರಿಸಲು ಹೋಗಬೇಕಾಗುತ್ತದೆ. ಜೀವದ ಹಂಗು ತೊರೆದು ಕೆಲಸ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರ ರೈತರ ಸುರಕ್ಷತೆಗಾಗಿ ಬೆಳಿಗ್ಗೆ 7ಗಂಟೆಯಿಂದಲೇ ತ್ರೀ ಫೇಸ್ ವಿದ್ಯುತ್ ಸಂಪರ್ಕ ನೀಡಬೇಕು, ಎಂದು ಹೇಳಿದರು.
ಬಳಿಕ ಮೊಸಳೆ ಸೆರೆಹಿಡಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಮೊಸಳೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ನಂತರ ಮೊಸಳೆಯನ್ನು ನದಿಯ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು ರೈತರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಸುಲ್ತಾನ್ ಗಡಾದ, ರಾಜೇಸಾಬ ಹಲೀಮನವರ, ದಾದಾಪೀರ ಮಂಟೂರ, ದಿಲಾವರ ಸನದಿ, ಇಮಾಮಸಾಬ ಹಲೀಮನವರ, ಪಕ್ಕರುಸಾಬ ನೂಲಗಿ, ಕಾಶೀಮ ಗಿಡದನ್ನವರ, ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 