ನಿತ್ಯವೂ ಕೋವಿಡ್ ರೋಗಿಗಳಿಗೆ ಮೂರು ಹೊತ್ತು ಊಟ ಉಪಹಾರ
ಸೋಂಕಿತರ ನೆರವಿಗೆ ಧಾವಿಸಿದ ಜನಹಿತ ಟ್ರಸ್ಟ್; ಟ್ರಸ್ಟ್ನ ಕೈ ಹಿಡಿಯುತ್ತಿರುವ ದೇಶ ವಿದೇಶಿ ದಾನಿಗಳು
ಮುಧೋಳ 20: ಕೋವಿಡ್ ಸೊಂಕಿತರು ಇದ್ದರೆ ಅದೇ ಕುಟುಂಬದ ಸದಸ್ಯರು ಊಟ ಉಪಹಾರವನ್ನು ಆಸ್ಪತ್ರೆ ಬಾಗಿಲಲ್ಲಿ ಇಟ್ಟು ಹೋಗುತ್ತಿರುವ ಹಾಗೂ ಮನೆಯಲ್ಲಿ ಸೊಂಕಿತರಿದ್ದರೆ ಅವರ ರೂಮ್ ಮುಂದೆ ಊಟ ಉಪಹಾರ ಇಡುತ್ತಿರುವ ಇಂದಿನ ದಿನಗಳಲ್ಲಿ ಮುಧೋಳ ಜನ ಹಿತ ಟ್ರಸ್ ಸೊಂಕಿತರ ಸ್ನೇಹಿಯಾಗಿ ಅವರು ಚಿಕಿತ್ಸೆ ಪಡೆಯುತ್ತಿರುವ ಸ್ಥಳಕ್ಕೆ ಹೋಗಿ ಊಟ ಉಪಹಾರ ನೀಡುವುದರ ಜೊತೆಗೆ ಶೀಘ್ರ ಗುಣಮುಖರಾಗಿ ನಮ್ಮ ಜತೆಗೆ ಬನ್ನಿ ಎನ್ನುವ ಸಿಹಿ ಮಾತು ರೋಗಿಯ ಅರ್ಧ ರೋಗ ಕಡಿಮೆ ಮಾಡುತ್ತಿದೆ ಇಂತಹ ರೋಗಿಗಳ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯಮಾಡುತ್ತಿದ್ದಾರೆ. ಮುಧೋಳದ ಜನಹಿತ ಟ್ರಸ್ಟ್ ಸದಸ್ಯರು ಅದು ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ಮಾಡುತ್ತಿರುವ ಸೇವೆ ಸಾರ್ವತ್ರಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.’
ಕಳೆದ 20 ದಿನಗಳ ಹಿಂದ 50 ಜನರಿಂದ ಪ್ರಾರಂಭವಾಗಿ ಈಗ ನಿತ್ಯ 500 ಸೊಂಕಿತರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ರುಚಿಯಾದ ಹಾಗೂ ಸುಚಿಯಾದ ಊಟ ಪ್ರೂಟ್ಸ್ ಸಲಾಡ್ ಉಪಹಾರ ನೀಡುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷ ರಾಜು (ನಾರಾಯಣ) ಯಡಹಳ್ಳಿ ವಿಜಯವಾಣಿಗೆ ಹೇಳುತ್ತಾರೆ.
ನಗರದ ಸರ್ಕಾರಿ ಆಸ್ಪತ್ರೆ, ಉದಪುಡಿ ಆಸ್ಪತ್ರೆ, ಡಾ.ಉದಯ ನಾಯಿಕ ಅವರ ಸಾಯಿ ಆಧಾರ ಆಸ್ಪತ್ರೆ, ತಲಾಠಿ ಮತ್ತು ನಗರದ ಕೋವಿಡ್ ಆರೈಕಾ ಕೇಂದ್ರ ಜಮಖಂಡಿ ಸರ್ಕಾರಿ ಆಸ್ಪತ್ರೆ ಹಾಗೂ ಆರೈಕಾ ಕೇಂದ್ರ ಆಸ್ಪತ್ರೆಯ ಸೊಂಕಿತರಿಗೆ ಹಾಗೂ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿರುವ ಕುಂಟುಬದ ಸದಸ್ಯರಿಗೆ ಊಟ ಉಪಹಾರ ನೀಡಲಾಗುತ್ತಿದೆ. ಇದಲ್ಲದೆ ಮನೆಯಲ್ಲಿ ಒಬ್ಬರೆ ಇದ್ದು ಅಥವಾ ಮನೆಯ ಸದಸ್ಯರು ಇದ್ದರೂ ಸಹ ಹತ್ತಿರಕ್ಕೆ ಬಾರದ ಸೊಂಕಿತರಿಕೆ ಮನೆ ಮನೆಗೆ ಹೋಗಿ ಊಟ ಉಪಹಾರ ಹಾಗೂ ನೀರಿನ ಬಾಟಲ್ ನೀಡುತ್ತಿದ್ದಾರೆ. ಅವಶ್ಯಕತೆ ಇದ್ದವರು ಸಂಪರ್ಕಿಸಲು ಸಾಮಾಜಿಕ ಜಾಲ ತಾಣದಲ್ಲಿ ಮೋಬಾಯಿಲ್ ನಂಬರ್ ನೀಡಿದ್ದಾರೆ.
ದೇಶ ವಿದೇಶದಿಂದ ಸಹಾಯ;ಆರಂಭದಲ್ಲಿ ಸ್ನೇಹಿತರು ಟ್ರಸ್ಟ್ ಗೆ ಹಣ ಹಾಕಿ ಸೇವೆ ಆರಂಭಿಸಿದೇವು. ಈಗ ದಾನಿಗಳು ಹಣ ನೀಡಲು ಮುಂದೆ ಬರುತ್ತಿದ್ದಾರೆ. ಹಣವನ್ನು ಟ್ರಸ್ಟ್ ಗೆ ಪಾವತಿಸಬೇಕು. ಹಾಗೂ ಟ್ರಸ್ಟ್ ಮೂಲಕ ಹಣ ಪಾವತಿಸುವುದರ ಮೂಲಕ ಪಾರದರ್ಶಕವಾಗಿ ವ್ಯವಹರಿಸುತ್ತಿದ್ದೇವೆ. ಈಗ ನಮ್ಮ ಮುಧೋಳದ ಜನರು ವಿದೇಶದಲ್ಲಿದ್ದು ಅಚಿತವರು ಸಹ ನಮಗೆ ಸಹಾಯ ಮಾಡುತ್ತಿದ್ದಾರೆ ಟ್ರಸ್ಟ್ ಸದಸ್ಯರನ್ನೊಳಗೊಂಡ 20 ಜನ ಸ್ನೇಹಿತರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲು ಹಾಗೂ ಆಹಾರ ನೀಡಲು ಪ್ರತ್ಯೇಕ ತಂಡ ಮಾಡಲಾಗಿದೆ.
ಅರ್ಧ ಲೀಟರ್ ಶುದ್ಧ ನೀರಿನ ಬಾಟಲ್, ಉಪ್ಪಟ್ಟು, ಅವಲಕ್ಕಿ ಸುಸಲಾ, ಚುರಮುರಿ ಸುಸಲಾ, ಶ್ಯಾವಗಿ ಉಪ್ಪಿಟ್ಟು ಪಲಾವ್ ಉಪಹಾರವಾಗಿ ನೀಡುತ್ತೇವೆ.ಎಂದು ಶಿವಾನಚಿದ ಗುರವ ಹಾಗೂ ವಿಠ್ಠಲ ಪರೀಟ ಹೇಳುತ್ತಾರೆ
ಮಧ್ಯಾಹ್ನ ಊಟಕ್ಕೆ ಎರಡು ಚಪಾತಿ, ವಿವಿಧ ಬಗೆಯ ಎರಡು ತರಹದ ಪಲ್ಯೆ, ಪಲಾವು ಅಧವಾ ಮಸಲಾ, ಜೀರಾ ರೈಸ್, ಸಾಂಬರ, ಸಲಾಡ್, ಅರ್ಧ ಲೀಟರ್ ಶುದ್ಧ ನೀರಿನ ಬಾಟಲ್ ನೀಡಲಾಗುತ್ತಿದೆ.ರಾತ್ರಿ ಊಟಕ್ಕೆ ಎರಡು ಚಪಾತಿ, ವಿವಿಧ ಬಗೆಯ ಒಂದು ತರಹದ ಪಲ್ಯೆ, ಅನ್ನ ಸಾಂಬರ, ಉಪ್ಪಿನ ಕಾಯಿ ಸಲಾಡ್, ಅರ್ಧ ಲೀಟರ್ ಶುದ್ಧ ನೀರಿನ ಬಾಟಲ್ ನೀಡಲಾಗುತ್ತಿದೆ ಯಡಹಳ್ಳಿ ವಿವರಿಸುತ್ತಿದ್ದಾರೆ.
ಟ್ರಸ್ಟಿ ಹಾಗೂ ಸ್ನೇಹಿತರಾದ ವಿಠಲ ಪರೀಟ, ಶಿವಾನಂದ ಗುರವ, ಬಸವರಾಜ ಗಣಿ, ಸಂಜೀವ ನಿಗಡೆ, ರಾಹುಲ ಕೋಲ್ಹಾರ, ಸಂತೋಷ ಬಾಡಗಿ, ಬಸವರಾಜ ಬಾರಕೇರ, ಧೀರಜ್ ಓಸ್ವಾಲ್, ಸುಧೀರ ಕಳಂಜಿ, ಚನಗೊಂಡ ಕಿತ್ತೂರ, ರಾಜು ಬಂಡಿವಡ್ಡರ, ಮಂಜುನಾಥ ಬೆಣ್ಣಿ ಮುಂತಾದ ಹಲವಾರು ಸಹೃದಯ ಸ್ನೇಹಿತರು ಹಾಗೂ ಹೆಸರು ಬಹಿರಂಗ ಪಡಿಸದ ಹಲವಾರು ದಾನಿಗಳ ಸಹಕಾರದಿಂದ ಈ ಸೇವೆ ನಡೆಯುತ್ತಿದೆ ಎಂದು ರಾಜು ಯಡಹಳ್ಳಿ ಹೇಳುತ್ತಾರೆ.ಮುಧೋಳ ನಗರದ ಆಹಾರದ ಅವಶ್ಯಕತೆ ಇರುವ ಸೊಂಕಿತರು 9663204333, 9480215360, 9611053554 ಸಂಪರ್ಕಿಸಬಹುದು.
“ ನಾವು ಕೊರೊನಾ ಸೊಂಕಿತರಿಗೆ ಉಚಿತ ಆಹಾರ ನೀಡಲು ಪ್ರಾರಂಭಿಸಿದ್ದು ಕಂಡು ಸಾಕಷ್ಟು ಜನನಮ್ಮ ನೆರವಿಗೆ ಬಂದಿದ್ದು ಈಗಾಗಲೇ ನಾವು ಮುಧೋ ಕೋವಿಡ್ ಆರೈಕಾ ಕೇಂದ್ರ ದತ್ತು ಪಡೆದು ಅಲ್ಲ ಆಕ್ಷಿಜನ್ ಯಂತ್ರ ಉಚಿತವಾಗಿ ನೀಡಿದ್ದೇವೆ ನಮಗೆ 2ರೂ ದಿಂದ ಲಕ್ಷರೂವರೆಗೆ ಸಹಾಯ ಮಾಡಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಹೇಳುತ್ತಾ ಯಾವೂದೇ ಸಚಿದರ್ಭದಲ್ಲಿ ಕೋರೋನಾ ಸೊಂಕಿತ ರೋಗಿಗಳ ಆಹಾರಕ್ಕಾಗಿ ನಮ್ಮ ಮೋಬೈಲ್ ಸಂಖ್ಯೆ ಸಂಪರ್ಕಿಸಬಹುದು”
ಜನಹಿತ ಟ್ರಸ್ಟ್ ಸದಸ್ಯರು
“ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೊಂಖಿತರು ಹಾಗೂ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುವ ಸೊಂಖಿತರಿಗೆ ಊಟ ಉಪಹಾರ ನೀಡುತ್ತಿರುವ ಜನಹಿತ ಟ್ರಸ್ಟ್ ಕಾರ್ಯ ಶ್ಲಾಘನೀಚಿು”
ಗೋವಿಂದ ಕಾರಜೋಳ ಡಿಸಿಎಂ