ಅಂತರರಾಷ್ಟ್ರೀಯ

ಕೋವಿಡ್ ;ವಿಶ್ವದಲ್ಲಿ 27 ದಶಲಕ್ಷ ದಾಟಿದ ಸೋಂಕು ಪ್ರಕರಣಗಳು- ಎರಡನೇ ಸ್ಥಾನದಲ್ಲಿ ಭಾರತ

ಕೋವಿಡ್ ;ವಿಶ್ವದಲ್ಲಿ  27 ದಶಲಕ್ಷ ದಾಟಿದ  ಸೋಂಕು  ಪ್ರಕರಣಗಳು- ಎರಡನೇ ಸ್ಥಾನದಲ್ಲಿ ಭಾರತ

ವಾಷಿಂಗ್ಟನ್, ಸೆಪ್ಟೆಂಬರ್ 7:  ಜಾಗತಿಕ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ  27 ದಶ ಲಕ್ಷ ಗಡಿ  ದಾಟಿದೆ ಎಂದು  ಜಾನ್ ಹಾಪ್ಕಿನ್ಸ್  ವಿಶ್ವವಿದ್ಯಾಲಯ ತನ್ನ ಇತ್ತೀಚಿನ ಅಂಕಿ ಅಂಶಗಳಲ್ಲಿ ತಿಳಿಸಿದೆ.

ಜಗತ್ತಿನಾದ್ಯಂತ  ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ      8, 82 000ಕ್ಕೆ  ತಲುಪಿದೆ. ಹೆಚ್ಚು ಸೋಂಕು  ವರದಿಯಾದ  ದೇಶಗಳ  ಪೈಕಿ  ಅಮೇರಿಕಾ  ಈಗಲೂ ಮೊದಲ ಸ್ಥಾನದಲ್ಲಿದ್ದು ಈವರೆಗೆ  6.27 ದಶ ಲಕ್ಷ ಸೋಂಕು ಪ್ರಕರಣ  ವರದಿಯಾಗಿದ್ದು,  ಸಾವಿನ ಸಂಖ್ಯೆ 188,940ರ ಗಡಿ  ದಾಟಿದೆ.

ಭಾರತದಲ್ಲಿ  ಸೋಂಕು ಪ್ರಕರಣಗಳ ಸಂಖ್ಯೆ  4.2 ದಶಲಕ್ಷ ಗಡಿ ದಾಟಿದ್ದು,  ಸಾವಿನ ಸಂಖ್ಯೆ 71,642ಕ್ಕೆ ತಲುಪಿದ್ದು,  ಈ ಮೂಲಕ   ಬ್ರಿಜೆಲ್   ದೇಶವನ್ನು  ಹಿಂದೆ ಸರಿಸಿ  ಕೊರೊನಾ ಸಾಂಕ್ರಾಮಿಕದಿಂದ ತೀವ್ರವಾಗಿ ನಲುಗಿರುವ ಜಗತ್ತಿನ ಎರಡನೇ ಸ್ಥಾನ ಪಡೆದುಕೊಂಡಿದೆ.

ಭಾರತದಲ್ಲಿ  ನಿತ್ಯ  ಪರೀಕ್ಷೆಗಳ  ಸಂಖ್ಯೆ ಹೆಚ್ಚಳಗೊಂಡಿರುವುದು  ಸೋಂಕು ಪ್ರಕರಣಗಳ  ಸಂಖ್ಯೆ ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಲು ಕಾರಣ ಎನ್ನಲಾಗಿದೆ.

ಬ್ರಿಜೆಲ್ ನಲ್ಲಿ  ಭಾನುವಾರ  ಕಳೆದ 24 ಗಂಟೆಗಳಲ್ಲಿ 14 ಸಾವಿರದ 521 ಹೊಸ ಪ್ರಕರಣಗಳು, 447 ಸಾವುಗಳು  ಸಂಭವಿಸಿದ್ದ  ಒಟ್ಟಾರೆ  ಸಾವಿನ ಸಂಖ್ಯೆ  126,650ಕ್ಕೆ ಏರಿಕೆಯಾಗಿದೆ

ಹೊಸ ಪ್ರಕರಣಗಳೊಂದಿಗೆ  ಬ್ರಿಜೆಲ್ ನಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ  4,137,521 ಏರಿಕೆಯಾಗಿದ್ದು  ಕೊರೊನಾ ಸಾಂಕ್ರಾಮಿಕದಿಂದ ತೀವ್ರವಾಗಿ ನಲುಗಿರುವ ಜಗತ್ತಿನ ಮೂರನೇ ದೇಶವಾಗಿದೆ.

ಸುದ್ದಿ ಓದಿ