ದೇಶ ಜಾತ್ಯತೀತ ರಾಷ್ಟ್ರವಾಗಬೇಕಾಗಿದೆ: ಶಾಸಕ ನ್ಯಾಮಗೌಡ
ಲೋಕದರ್ಶನ ವರದಿ,
ಜಮಖಂಡಿ 05: ದೇಶ ಜಾತ್ಯತೀತ ರಾಷ್ಟ್ರವಾಗಬೇಕಾಗಿದೆ. ಇಂದಿನ ದಿನಮಾನದಲ್ಲಿ ಧರ್ಮ-ಧರ್ಮದಲ್ಲಿ ರಾಜಕೀಯ ವಿಷ ಬೀಜಗಳನ್ನು ಬಿತ್ತುವ ಕೆಲಸ ಮಾಡಿ. ಧರ್ಮವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದಲ್ಲಿ ನಡೆದ ರುದ್ರಸ್ವಾಮಿ ಪೇಠದಲ್ಲಿ ನಡೆದ ಸದ್ಗುರು ರುದ್ರಾವಧೂತರ 92 ನೇ ಪುಣ್ಯಾರಾಧನೆ 37 ನೇ ವೇದಾಂತ ಪರಿಷತ ಎರಡನೇ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ದೇಶ ಕಟ್ಟುವ ಜೊತೆಗೆ ದೇಶದ ಸಂಸ್ಕಾರ, ಸಂಸ್ಕ್ರತಿಯನ್ನು ಬೆಳೆಸಿಕೊಳ್ಳುವದು ಅವಶ್ಯಕತೆ ಇದೆ. ಬರುವ ದಿನಗಳಲ್ಲಿ ರುದ್ರಾವಧೂತರ ಮಠಕ್ಕೆ ಶಾಶ್ವತವಾಗಿ ಮಂಗಲ ಮಂಟಪವನ್ನು ನಿರ್ಮಿಸಲು 28 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಮಂಗಲ ಮಂಟಪವನ್ನು ನಿರ್ಮಿಸಲಾಗುತ್ತದೆ. ಈ ಹಿಂದೆ ಮಕ್ಕಳ ವಿದ್ಯಾಭ್ಯಾಸ ಮಾಡಲು ಹೊಸ ಕಟ್ಟಡಕ್ಕೆ 5 ಲಕ್ಷ ರೂಪಾಯಿ ಅನುದಾನವನ್ನು ನೀಡಬೇಕೆಂದು ಮನವಿ ನೀಡಿದರು. ಆದರೆ 10 ಲಕ್ಷ ರೂಪಾಯಿಗಳವರೆಗೆ ಅನುದಾನವನ್ನು ನೀಡಲಾಯಿತು, ಇದೊಂದು ಮಠ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಠವಾಗಿದೆ ಎಂದರು.
ಸದ್ಗುರು ರುದ್ರಾವಧೂತರ ಎರಡನೇ ದಿನದ ವೇದಾಂತ ಪರಿಷತದಲ್ಲಿ ಸಹಜಾನಂದ ಅವಧೂತರು. ಕೃಷ್ಣಾನಂದ ಅವಧೂತರು. ಹಾಗೂ ವಿವಿಧ ಮಠಾಧೀಶರು ಆರ್ಶೀವಚನ ನೀಡಿದರು.
ಮಾಜಿ ವಿಪ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿದರು. ಮೂರನೇಯ ದಿನದ ಕಾರ್ಯಕ್ರಮ ಜರುಗಿತು. ವಿವಿಧ ಮಹಾತ್ಮರಿಂದ ಪ್ರವಚನ ನೀಡಿದರು. ರುದ್ರಾವಧೂತರ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು ಮತ್ತು ಸಹಜಾನಂದ ಅವಧೂತರು ಆರ್ಶೀವಚನ ನೀಡಿದರು.
ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ ಮಾತನಾಡಿದರು, ಮಾಜಿ ಭೂಸೇನಾ ನಿಗಮ ಉಪಾಧ್ಯಕ್ಷ ಶ್ರೀಶೈಲ ದಳವಾಯಿ, ಜಗದೀಶ ಗುಡಗುಂಟಿ, ಆನಂದ ಇಂಗಳಗಾವಿ, ಮುತ್ತಣ್ಣ ಹಿಪ್ಪರಗಿ, ಸುಶೀಲಕುಮಾರ ಬೆಳಗಲಿ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಕಲ್ಲಪ್ಪ ಗಿರಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಮನಗೂಳಿ, ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಮಹೇಶ ಕೋಳಿ, ಈಶ್ವರ ವಾಳೇನ್ನವರ, ರಫಿಕ ಬಾರಿಗಡ್ಡಿ, ಎ,ಆರ್,ಶಿಂಧೆ, ನಗರಸಭೆ ಸದಸ್ಯ ಕುಶಾಲ ವಾಗಮೋರೆ, ಪ್ರಶಾಂತ ಶಂಕ್ರ್ಪಗೋಳ, ಪ್ರಕಾಶ ಕನಬೂರ, ಭೀಮಶಿ ನಡುವಿನಮನಿ, ರಾಜು ಪಾಯಗೊಂಡ, ಮೋಹನ ಇಂಗಳೆ, ಚನಬಸು ಕತಾಟೆ, ಡಾ,ಕೃಷ್ಣಾ ಬಣ್ಣದ, ಡಾ, ವಿನಾಯಕ ಕುಸಬಿ, ಸಂತೋಷ ಶೆಟ್ಟಿ, ಬಸು ಹರಕಂಗಿ, ಡಿ,ಬಿ,ಚಲವಾದಿ, ಶಂಕರ ಚಿನಗುಂಡಿ, ಪ್ರದೀಪ ಮೆಟ್ಟಗುಡ್ಡ, ಶಶಿಕಾಂತ ದೊಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದರು.
ಮೂರನೇ ದಿನದ ವೇದಾಂತ ಪರಿಷತದಲ್ಲಿ ಶ್ರೀಗಳಿಂದ ಪ್ರವಚನ ಹಾಗೂ ಪಲ್ಲಕಿ ಉತ್ಸವ ಜರುಗಿತು, ಪಲ್ಲಕಿ ಉತ್ಸವದಲ್ಲಿ ಸಾವಿರಾರೂ ಮಹಿಳೆಯರು ಬೆಂಡು,ಬೆತ್ತಾಸು,ಚುರುಮುರಿ, ಕಾರಿಕಗಳನ್ನು ಪಲ್ಲಕಿ ಮೇಲೆ ಹಾರಿಸುತ್ತಿದರು. ಭಕ್ತಾಧಿಗಳು ತೆಂಗುಕಾಯಿಗಳನ್ನು ಒಡೆದು. ಭಕ್ತಿಯಿಂದ ನಮಿಸುತ್ತಿದರು. ಅನ್ನಸಂತರೆ್ಣ ಜರುಗಿತು.