ಮುಧೋಳ

ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸಿ;ಸಿಪಿಐ ಪಾಟೀಲ್

ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸಿ;ಸಿಪಿಐ ಪಾಟೀಲ್

ಮುಧೋಳ: ಯಾರ  ಮನಸಿಗೂ ನೋವಾಗದಂತೆ ಪರೀಖ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೋಳಿ ಹಬ್ಬವನ್ನು ಆಚರಿಸಬೇಕು ರಸಾಯನಿಕ ಯುಕ್ತ ಬಣ್ಣವನ್ನು ಬಳಸದೆ  ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಸಿಪಿಐ ಎಚ್‌.ಆರ್‌.ಪಾಟೀಲ ಹೇಳಿದರು 

   ಭಾನುವಾರ ಸಂಜೆ ಬಾಗಲಕೋಟೆ ಜಿಲ್ಲಾ ಪೋಲಿಸ್ ಹಾಗೂ ಮುಧೋಳ ಪೋಲಿಸ್ ಠಾಣೆ ವತಿಯಿಂದ ಮುಧೋಳ ತಾ.ಪಂ ಸಭಾಭವನದಲ್ಲಿ ಹೋಳಿ ಹಬ್ಬದ ನಿಮಿತ್ಯ ನಡೆದ ಶಾಂತಿ ಸಭೆಯಲ್ಲಿ  

   ಹೋಳಿ ಹಬ್ಬವನ್ನು ಸಂಪ್ರದಾಯದ ಪ್ರಕಾರ ಆಚರಿಸಿರಿ ಬದಲಾವಣೆ ಬಯಸಿದರೆ ನಮ್ಮ ಗಮನಕ್ಕೆ ತರಬೇಕು ಕಾನೂನು ಸುವ್ಯವಸ್ಥೆ ಕಾಪಾಡಬೇಕು ರಾಸಾಯನಿಕ ಮಿಶ್ರಿತ ಬಣ್ಣ ಎರಚದೆ ಪರಿಸರ ಸ್ನೇಹಿ ಬಣ್ಣ ಆಚರಿಸಿರಿ  ಒತ್ತಾಯಪೂರ್ವಕವಾಗಿ ಅನ್ಯ  ಕೋಮಿನವರಿಗೆ  ಬಣ್ಣ ಎರಚದೆ ಪರಿಸರ ಮಾಲಿನ್ಯಕ್ಕೆ ಆದ್ಯತೆ ಕೊಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಯಾವೂದೇ ಕಾರಣಕ್ಕೂ ಬೈಕ್ ಸೈಲೆಂಸರ್ ತೆಗೆದು ಚಾಲನೆ ಮಾಡದೆ ಹಬ್ಬ ಆಚರಿಸಿ ಮೀರಿದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವದು ಪೋಲಿಸ್ ಇಲಾಖೆ ನೀಡುವ ಸಲಹೆ ಸೂಚನೆ ಎಲ್ಲರೂ ಪಾಲಿಸುವದರೊಂದಿಗೆ ಹೋಳಿ ಹಬ್ಬ ಆಚರಣೆ ಮಾಡುವದರೊಂದಿಗೆ ಪೊಲೀಸ್ ಇಲಾಖೆಗೆ ಸಹಕರಿಸ ಬೇಕು ಎಂದು ಹೇಳಿದರು 

      ಮುಧೋಳ ಪಿಎಸ್‌ಐ ಕೆ.ಬಿ ಮಾಂಗ ಮಾತನಾಡಿ ಯಾವುದೇ ಕಾರಕ್ಕೊ ಡಾಲ್ಬಿಗೆ ಅವಕಾಶ ಇರುವುದಿಲ್ಲ ಪರೀಕ್ಷೆ ಇರುವಂತ ವಿದ್ಯಾರ್ಥಿಗಳಿಗೆ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚದಂತೆ ಎಚ್ಚರ ವಹಸಿಬೇಕು ಎಂದು ಹೇಳಿದರು  

         ಉಪ ತಹಸ್ದೀಲಾರ ಎಂ.ವಿ.ಮಠದ,ತಾ.ಪಂ ಇಓ ಕಿರಣ ಘೋರೆ​‍್ಡ,ಪಿಎಸ್‌ಐ ಕೆ.ಬಿ.ಮಾಂಗ,ಹೆಸ್ಕಾಂ ಅಧಿಕಾರಿ ಪಿ.ಎಸ್‌.ಹುನ್ನೂರ,ಅಗ್ನಿ ಶ್ಯಾಮಕದಳದ ಬಿ.ಎಂ.ಬಂಡಿವಡ್ಡರ,ಹಿರಿಯರಾದ ಕಲ್ಲಪ್ಪಣ್ಣ ಸಬರದ,ಸಿದ್ದು ಚಿಕದಾನಿ,ಸಂತೋಷ ಪಾಲೋಜಿ,ಸುರೇಶ ಅಂಕಲಗಿ,ಸಿದ್ರಾಮ ಕುರಿ,ಲವಿತ್ ಮೇತ್ರಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ