ಕರಾವಳಿಯಲ್ಲಿ ಮುಂದುವರಿದ ರಭಸದ ಗಾಳಿ ಮಳೆ : ಘಟ್ಟದ ಮೇಲೆ ವರ್ಷಧಾರೆ
Continued gusty winds and rains along the coast
ಕಾರವಾರ 03 : ಉತ್ತರ ಕನ್ನಡ ಕರಾವಳಿಯಲ್ಲಿ ರಭಸದ ಗಾಳಿ ಮಳೆ ಗುರುವಾರವೂ ಮುಂದುವರಿದಿದೆ. ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲಿ ಗಳಲ್ಲಿ ಮುಗಿಲು ಕಳಚಿ ಬಿದ್ದ ರೀತಿಯಲ್ಲಿ ಮಳೆಯಾಗುತ್ತಿದೆ. ಗಂಗಾವಳಿ, ಅಘನಾಶಿನಿ ಮೈದುಂಬಿ ಹರಿಯುತ್ತಿವೆ .
ಭಾರೀ ಮಳೆ ಕಾರಣಕದ್ರಾ ಕೊಡಸಳ್ಳಿ ಮಧ್ಯೆ ಗುರುವಾರ ಬೆಳಿಗ್ಗೆ ಗುಡ್ಡ ಪಾರ್ಶ್ವ ಕುಸಿದಿದೆ. ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ .ಕದ್ರಾ ಮತ್ತು ಕೊಡಸಳ್ಳಿ ಮಧ್ಯೆ ರಸ್ತೆಗೆ ಮಣ್ಣು ಬಿದ್ದ ಪರಿಣಾಮ, ರಸ್ತೆ ಯಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ.ಅಣೆಕಟ್ಟು ನೀರು ನದಿಗೆ :ಕಾಳಿ ನದಿ ಹಿನ್ನೀರಿನಲ್ಲಿ ಭಾರೀ ಮಳೆಯಾದ ಕಾರಣ ಕದ್ರಾ ಅಣೆಕಟ್ಟಿನಿಂದ 33 ಸಾವಿರ ಕ್ಯೂಸೆಕ್ಸ ನೀರನ್ನು ನದಿಗೆ ಹೊರಬಿಡಲಾಗಿದೆ. ಅಣೆಕಟ್ಟು ಭರ್ತಿಯಾದರೆ ನದಿ ದಂಡೆಯ ಗ್ರಾಮಗಳ ಜನರಿಗೆ ನೆರೆ ಭೀತಿ ಕಾರಣ , ಅಣೆಕಟ್ಟು ತುಂಬುವ ಮುನ್ನ ನದಿಗೆ ನೀರು ಹರಿಸಲಾಗುತ್ತಿದೆ.ಸೇತುವೆ ಮೇಲೆ ಹರಿದ ಗಂಗಾವಳಿ ನದಿ ನೀರು: ಕುಂಟಗಣಿ ಸೇತುವೆ ಮೇಲೆ ಗಂಗಾವಳಿ ನದಿ ನೀರು ಹರಿದಿದೆ. ಭಾರೀ ಪ್ರಮಾಣದ ನೀರು ಗ್ರಾಮಗಳ ಪಕ್ಕ ಹರಿಯುತ್ತಿದೆ. ಆದರೆ ನೆರೆ ಉಂಟಾಗಿಲ್ಲ. ಬಿಟ್ಟು ಬಿಟ್ಟು ಬರುವ ಮಳೆ ಯಿಂದ ಪ್ರವಾಹ ಭೀತಿ ಅಷ್ಟಾಗಿ ಕಾಣುತ್ತಿಲ್ಲ. ಜಿಲ್ಲಾಡಳಿತ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದೆ.ಹಳಿಯಾಳ,ಮುಂಡಗೋಡ ಹೊರತು ಪಡಿಸಿ ಎಲ್ಲೆಡೆ ಭರ್ಜರಿ ಮಳೆಯಾಗಿದೆ . ಹಳಿಯಾಳ , ಮುಂಡಗೋಡದಲ್ಲಿ ಕೃಷಿಗೆ ಬೇಕಾಗುವಷ್ಟು ಹಿತ ಮಳೆ ಸುರಿದಿದೆ.ಕಾರಾವಾರ, ಶಿರಸಿ,ಸಿದ್ದಾಪುರ, ಕುಮಟಾದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದೆ. ಜನ ಜೀವನ ಎಂದಿನಂತೆ ಇತ್ತು . ಕಾರವಾರ, ಅಂಕೋಲಾದಲ್ಲಿ ಸತತ ಮಳೆ ಸುರಿಯುತ್ತಿದೆ. ಹೊನ್ನಾವರ ಭಟ್ಕಳದಲ್ಲಿ ಸಹನೀಯ ಮಳೆ ಇದ್ದರೆ, ಕುಮಟಾ ದಿಂದ ಕಾರವಾರದ ತನಕ ಹೆಚ್ಚು ಮಳೆ ಸುರಿದಿದೆ. ನದಿಗಳು ತುಂಬಿ ಹರಿಯುತ್ತಿವೆ. ನದಿ ದಂಡೆಯ ಗ್ರಾಮದಲ್ಲಿ ಹಠಾತ್ ಪ್ರವಾಹ ತಪ್ಪಿಸಲು ಕದ್ರಾ, ಸುಫಾ, ಕೊಡಸಳ್ಳಿ, ಗೇರುಸೊಪ್ಪ ಡ್ಯಾಂ ಭರ್ತಿಗೆ ಎರಡು ಮೀಟರ್ ಇರುವಾಗಲೇ ನದಿಗೆ ನೀರು ಬಿಟ್ಟು, ಜಲಾಶಯಗಳಿಂದಾಗುವ ಕೃತಕ ನೆರೆ ತಪ್ಪಿಸಲಾಗುತ್ತಿದೆ .ಹವಾಮಾನ ಇಲಾಖೆಯ ಸೂಚನೆಯಂತೆ ಇನ್ನೂ ಕೆಲ ದಿನ ಮಳೆ ಮುಂದುವರಿಯಲಿದೆ.ಮಳೆ ವಿವರ :ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 103.4 ಮಿಮೀ, ಭಟ್ಕಳದಲ್ಲಿ 67.8,ಹಳಿಯಾಳ 26.5,ಹೊನ್ನಾವರ 50.8, ಕಾರವಾರ 154.4, ಕುಮಟಾ 82.7, ಮುಂಡಗೋಡ 16.3, ಸಿದ್ದಾಪುರ 112.1, ಶಿರಸಿ 101.2, ಸೂಪಾ 88.8, ಯಲ್ಲಾಪುರ 42.5, ದಾಂಡೇಲಿಯಲ್ಲಿ 36.2 ಮಿಲಿ ಮೀಟರ್ ಮಳೆ ಸುರಿದಿದೆ. 4 ಮನೆಗಳು ಸಂಪೂರ್ಣ ಹಾನಿಯಾಗಿದೆ....
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 