ಜಮಖಂಡಿ

ಕುಂಬಾರಹಳ್ಳ ಶಾಲೆಯಲ್ಲಿ ಸಂವಿಧಾನ ದಿನಾಚರಣೆ

ಕುಂಬಾರಹಳ್ಳ ಶಾಲೆಯಲ್ಲಿ ಸಂವಿಧಾನ ದಿನಾಚರಣೆ
ಜಮಖಂಡಿ ತಾಲೂಕಿನ ಕುಂಬಾರಹಳ್ಳ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು

ಲೋಕದರ್ಶನ ವರದಿ,

ಜಮಖಂಡಿ 27:ಎಲ್ಲರೂ ಸಂವಿಧಾನದ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ದೇಶ ಕಟ್ಟುವ ಕಾರ್ಯವನ್ನು ಮಾಡಬೇಕು ಎಂದು ಶಿಕ್ಷಕಿ ಎಸ್.ಎಲ್.ಬೆನಕಟ್ಟಿ ಹೇಳಿದರು.

ತಾಲೂಕಿನ ಕುಂಬಾರಹಳ್ಳ ಪ್ರೌಢಶಾಲೆಯ ಚುನಾವಣಾ ಸಾಕ್ಷರ ಸಂಘದಡಿಯಲ್ಲಿ ನಡೆದ ಸಂವಿಧಾನ ದಿನೋತ್ಸವದ ಅತಿಥಿಗಳಾಗಿ ಮಾತನಾಡಿದ ಅವರು, ಭಾರತದ ಸಂವಿಧಾನವು ಲಿಖಿತಾ ಸಂವಿಧಾನವಾಗಿದ್ದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನವಾಗಿದೆ, ನಾವೆಲ್ಲರೂ ಸಂವಿಧಾನವನ್ನು ಅಧ್ಯಯನ ಮಾಡಿ ಅದರಂತೆ ನಡೆದುಕೊಳ್ಳಬೇಕೆಂದರು.       

ಮುಖ್ಯಗುರು ನಾರಾಯಣಶಾಸ್ತ್ರಿ ಪ್ರತಿಜ್ಞಾವಿಧಿ ಬೋಧಿಸಿದರು.ವಿದ್ಯಾರ್ಥಿ  ಸಾವಿತ್ರಿ ಪಕಾಲಿ, ಸಿದ್ಧಾರ್ಥ ಬಿದರಿ ಸಂವಿಧಾನವನ್ನು ಕುರಿತು ಮಾತನಾಡಿದರು.ಶಿಕ್ಷಕಿ ಎ.ಎಂ.ಮೋಮಿನ್, ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು.ಶಿಕ್ಷಕ ಸಂಗನಬಸವ ಉಟಗಿ ಸ್ವಾಗತಿಸಿ,ನಿರೂಸಿದರು. ಬಾಹುಬಲಿ ಮುತ್ತೂರ ವಂದಿಸಿದರು. 


ಸುದ್ದಿ ಓದಿ