ಕಾರ್ಮಿಕರ ದಿನಾಚರಣೆ ಚಾರಿತ್ರಿಕ ದಿನ
ಲೋಕದರ್ಶನ ವರದಿ
ಹಾವೇರಿ ೦೨: ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾಮರ್ಿಕರ ದಿನಾಚರಣೆಯು ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ದೀರ್ಘ ಚರಿತ್ರೆಯನ್ನೆ ತನ್ನೊಡಲಿನಲ್ಲಿ ಇಟ್ಟಿಕೊಂಡಿರುವ ದಿನ ಎಂದು ನಗರದ ಮುರುಘರಾಜೇಂದ್ರ ಮಠದ ಆವರಣದಲ್ಲಿ ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆದ ಕಾಮರ್ಿಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲರು ಹಾಗೂ ಕಾಮರ್ಿಕ ಮುಖಂಡರಾದ ನಾರಾಯಣ ಕಾಳೆ ಹೇಳಿದರು.
ಸಿಐಟಿಯು ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತುಹಾಕುವಲ್ಲಿ ಕಾಮರ್ಿಕ ವರ್ಗದ ಪಾತ್ರದ ಕುರಿತು ಕಾಮರ್ಿಕರ ಪ್ರಜ್ಞೆಯನ್ನು ಎತ್ತರಿಸಲು ಮತ್ತು ಎಲ್ಲಾ ಶೋಷಣೆಯನ್ನು ಕೊನೆಗಾಣಿಸುವ ಅಂತಿಮ ಸಂಘರ್ಷಕ್ಕಾಗಿ ಕಾಮರ್ಿಕ ವರ್ಗವನ್ನು ಸಜ್ಜುಗೊಳಿಸಲು ಪ್ರತಿಜ್ಞೆಗೈಯುತ್ತದೆ. ತಮ್ಮ ಜೀವನಾಧಾರಗಳು, ಜೀವನ ಮತ್ತು ದುಡಿಮೆಯ ಪರಿಸ್ಥಿತಿಗಳನ್ನು ರಕ್ಷಿಸಿಕೊಳ್ಳಲು ಕಾಮರ್ಿಕರು, ರೈತರು, ಕೃಷಿ ಕೂಲಿಕಾರರು, ಯುವಜನ, ವಿದ್ಯಾಥರ್ಿಗಳು, ಹೀಗೆ ಸಮಾಜದ ಎಲ್ಲಾ ವಿಭಾಗದ ಜನರ ಹೆಚ್ಚುತ್ತಿರುವ ಹೋರಾಟಗಳನ್ನು ಸಿಐಟಿಯು ಸ್ವಾಗತಿಸುತ್ತದೆ. ಸಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದನೆಗೆ ದಲಿತರು ಮತ್ತು ಆದಿವಾಸಿಗಳು ಸೇರಿದಂತೆ ವಿವಿಧ ವಿಭಾಗಗಳ ಹೆಚ್ಚುತ್ತಿರುವ ಹೋರಾಟಗಳನ್ನು ಕೂಡಾ ಸ್ವಾಗತಿಸುತ್ತದೆ. ಚುನಾವಣೆಯ ನಂತರ ಯಾವುದೇ ಸಕರ್ಾರ ಬಂದರೂ, ನವ ಉದಾರವಾದಿ ನೀತಿಗಳನ್ನು ಸೋಲಿಸುವ ಉದ್ದೇಶದಿಂದ ಈ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಲು ಕಾಮರ್ಿಕ ವರ್ಗಕ್ಕೆ ಮತ್ತು ದುಡಿಯುವ ವರ್ಗಕ್ಕೆ ಕರೆ ನೀಡುತ್ತದೆ; ಕಾಪರ್ೊರೇಟ್ ಪರದಿಂದ ಜನ ಪರದ ಕಡೆಗೆ ನೀತಿಗಳ ದಿಕ್ಕನ್ನು ಬದಲಾಯಿಸಲು ಐಕ್ಯ ಹೋರಾಟಗಳನ್ನು ತೀವ್ರಗೊಳಿಸಲು ಕರೆ ನೀಡಿದರು.
ಸಿಐಟಿಯು ಜಿಲ್ಲಾ ಸಂಚಾಲಕರಾದ ವಿನಾಯಕ ಕುರುಬರ ಮಾತನಾಡಿ ಯಾರು ಸಂಪತ್ತನ್ನು ಸೃಷ್ಟಿಸುತ್ತಾರೋ ಅವರಿಗೇ ಅದು ಸೇರಬೇಕು ಎಂಬ ಘೋಷಣೆಯೊಂದಿಗೆ ಈ ವರ್ಷದ ಮೇ ದಿನಾಚರಣೆಯನ್ನು ಆಚರಿಸಬೇಕೆಂಬ ಕಾಮರ್ಿಕ ಸಂಘಗಳ ವಿಶ್ವ ಒಕ್ಕೂಟ (ಘಈಖಿಗ) ಕರೆಯನ್ನು ಸಿಐಟಿಯುಪೂರ್ಣವಾಗಿ ಬೆಂಬಲಿಸುತ್ತದೆ; ಮತ್ತಷ್ಟು ವರ್ಗ ದೃಷ್ಟಿಕೋನದೊಂದಿಗೆ ಬಂಡವಾಳಶಾಹಿ ಶೋಷಣಾ ವ್ಯವಸ್ಥೆಯ ವಿರುದ್ಧ ಸಂಘರ್ಷವನ್ನು ಗಟ್ಟಿಗೊಳಿಸುವ ತನ್ನ ಪ್ರಯತ್ನಗಳ ಭಾಗವಾಗಿ ಘಈಖಿಗ ಯನ್ನು ಗಟ್ಟಿಗೊಳಿಸಲು ಸಿಐಟಿಯು ಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ವಿ.ಕೆ.ಬಾಳಿಕಾಯಿ, ಎಸ್ಎಫ್ಐ ಜಿಲ್ಲಾ ಸಹಕಾರ್ಯದಶೀ ಬಸವರಾಜ ಭೋವಿ, ಜ್ಯೋತಿ ದೊಡ್ಡಮನಿ, ಎಸ್ಪಿಜೆ ಮುಖ್ಯಸ್ಥರಾದ ಹಸೀನಾ ಹೆಡಿಯಾಲ್, ಹೆಸ್ಕಾಂ ನೌಕರರ ಮುಖಂಡರಾದ ಚಂದ್ರು ಬೆನಕನಹಳ್ಳಿ, ಗುಡದಯ್ಯ ಬರಡಿ, ಸಂತೋಷ ಕುಂಸಿ, ಶಂಕರ ಜಂಗಳೆ, ಟಿ.ಎನ್ ಪಾಟೀಲ, ಗ್ರಾಮ ಪಂಚಾಯತ ನೌಕರರ ಮುಖಂಡರಾದ ಅಜ್ಜಪ್ಪ ಬಾಕರ್ಿ, ದಯಾನಂದ ಚೌಟಿ ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 