ಸಿಂಧಗಿ

ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ: ಪ್ರಾಚಾರ್ಯ ಡಿ.ಎಂ. ಸರಶೆಟ್ಟಿ

ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ: ಪ್ರಾಚಾರ್ಯ ಡಿ.ಎಂ. ಸರಶೆಟ್ಟಿ

ಲೋಕದರ್ಶನ ವರದಿ 

ಸಿಂದಗಿ 1: ಸ್ವಚ್ಛತೆ ಎಂದರೆ ಸಂಸ್ಥೆ ಹಾಗೂ ಸಿಬ್ಬಂದಿಯ ಜವಾಬ್ದಾರಿ ಎಂಬ ಮನೋಭಾವದಿಂದ ಹೊರಬಂದು, ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬ ಅರಿವು ಮೂಡಿಸಿಕೊಂಡಾಗ ಮಾತ್ರ ಸ್ವಚ್ಛತಾ ಅಭಿಯಾನ ಸಾರ್ಥಕವಾಗುತ್ತದೆ ಎಂದು ಪ್ರಾಚಾರ್ಯ ಡಿ.ಎಂ. ಸರಶೆಟ್ಟಿ ಹೇಳಿದರು.  

ನಗರದ ಜಿ.ಪಿ. ಫೋರವಾಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಎನ್ಸಿಸಿ, ಎನ್‌ಎಸ್‌ಎಸ್ ಹಾಗೂ ಇಕೋ ಕ್ಲಬ್ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ. ರವಿ ಲಮಾಣಿ ಮಾತನಾಡಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಸ್ವಚ್ಛತೆಯ ಜವಾಬ್ದಾರಿಯನ್ನು ಇತರರ ಮೇಲೆ ಹೊರಿಸದೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವೆಂದು ಅರಿತುಕೊಂಡಾಗ ಸ್ವಚ್ಛತಾ ಅಭಿಯಾನ ಯಶಸ್ವಿಯಾಗುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಇಕೋ ಕ್ಲಬ್ ಸಂಚಾಲಕ ಡಾ. ಪ್ರಕಾಶ ರಾಥೋಡ್, ಡಾ. ಬಿ.ಎಸ್‌. ಹಿರೇಮಠ, ಡಾ. ಎಸ್‌.ಐ. ಭಂಡಾರಿ, ಎನ್‌ಎಸ್‌ಎಸ್ ಸಂಯೋಜಕ ಡಾ. ಎಸ್‌.ಸಿ. ಕಾಂಬಳೆ, ವಿಕ್ರಂ ಪಾಂಡೆ, ಎನ್ಸಿಸಿ ಕೆಡೆಟ್ಗಳು, ಎನ್‌ಎಸ್‌ಎಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

30ಎಸ್‌ಎನ್‌ಡಿ1; ನಗರದ ಜಿ.ಪಿ ಫೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ ಸಾಲಿಮಠ ವಿಜ್ಞಾನ ಮಹಾ ವಿದ್ಯಾಲಯ ಸಿಂದಗಿಯ ಎನ್‌.ಸಿ.ಸಿ, ಎನ್‌.ಎಸ್‌.ಎಸ್ ಹಾಗೂ ಇಕೋಕ್ಲಬ್ ಇವರ ಸಹಯೋಗದೊಂದಿಗೆ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಯಿತು. 


ಸುದ್ದಿ ಓದಿ