ಅಂತರರಾಷ್ಟ್ರೀಯ

ಶ್ರೀಲಂಕಾ ಪ್ರಧಾನಿ ನಿವಾಸದಲ್ಲಿ ಘರ್ಷಣೆ, 10 ಮಂದಿಗೆ ಗಾಯ

ಶ್ರೀಲಂಕಾ ಪ್ರಧಾನಿ ನಿವಾಸದಲ್ಲಿ ಘರ್ಷಣೆ, 10 ಮಂದಿಗೆ ಗಾಯ

ಕೊಲಂಬೊ: ಜುಲೈ 12 : ದ್ವೀಪರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈ ಮಧ್ಯೆ, ಲಂಕಾದ ಪ್ರಧಾನಿ ನಿವಾಸ ಟೆಂಪಲ್ ಟ್ರೀಸ್‌ನಲ್ಲಿ ಪ್ರತಿಭಟನಾಕಾರರ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ 10 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ಪ್ರಧಾನಿ ನಿವಾಸ ಟೆಂಪಲ್ ಟ್ರೀಸ್‌ನಲ್ಲಿ ಪ್ರತಿಭಟನಾಕಾರರ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಮಹಿಳೆ ಸೇರಿದಂತೆ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಬೆಂಬಲಿಗರು ಮತ್ತು ಪ್ರತಿಭಟನಾಕಾರರ ಗುಂಪಿನ ನಡುವೆ ಈ ಘರ್ಷಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಜುಲೈ 9 ರಿಂದ ಪ್ರಧಾನಿ ನಿವಾಸ ಟೆಂಪಲ್ ಟ್ರೀಸ್ ಮತ್ತು ರಾಷ್ಟ್ರಪತಿ ಭವನವನ್ನು ಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದಾರೆ. ಗೋತಬಯ ರಾಜಪಕ್ಸೆ ಮತ್ತು ಶ್ರೀ ರನಿಲ್ ವಿಕ್ರಮಸಿಂಘೆ ರಾಜೀನಾಮೆ ನೀಡಿದ ನಂತರವೇ ಇಬ್ಬರು ನಾಯಕರ ನಿವಾಸಗಳನ್ನು ತೆರವು ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರ ಸ್ಪಷ್ಟನೆಯಾಗಿದೆ. ಅಧ್ಯಕ್ಷರು ಬುಧವಾರ ಕೆಳಗಿಳಿಯುವ ನಿರೀಕ್ಷೆಯಿದ್ದರೂ, ಪ್ರಧಾನಿ ಶನಿವಾರ ರಾಜೀನಾಮೆ ಘೋಷಿಸಿದ್ದಾರೆ. ರಾಜಪಕ್ಸೆ ಅವರ ಅದಕ್ಷತೆ ಮತ್ತು ಭ್ರಷ್ಟಾಚಾರದಿಂದ ಕೋಪಗೊಂಡಿರುವ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಶ್ರೀಲಂಕಾದ ಜನರು, ಒಂದು ತಿಂಗಳ ಹೋರಾಟದ ಬಳಿಕ ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ನಿವಾಸವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಸುದ್ದಿ ಓದಿ