ಸರ್ಕಾರಿ ಗೌರವಗಳೊಂದಿಗೆ ನಾಳೆ ಚಿಮೂ ಅಂತ್ಯಕ್ರಿಯೆ : ಸಿಎಂ
ಬೆಂಗಳೂರು ಜನವರಿ, 11,ಹಿರಿಯ ಸಾಹಿತಿ, ಸಂಶೋಧಕ ಡಾ ಎಂ. ಚಿದಾನಂದಮೂರ್ತಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.ವಿದೇಶದಿಂದ ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸುವ ಹಿನ್ನೆಲೆಯ ಕಾರಣ ,ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ನಾಳೆ ನಡೆಸಲು ಅವರ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಎಂದು ಮೂಲಗಳು ಹೇಳಿವೆ. ಈ ನಡುವೆ ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಜೊತೆಗೆ ಚಿಮೂ ಅವರ ಕೊನೆಯ ಆಸೆಗಳಿಗೆ ಧಕ್ಕೆಯಾಗಬಾರದೆಂದು ಪಾರ್ಥಿವ ಶರೀರಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡುವುದಿಲ್ಲ. ಅದಕ್ಕೆ ನೀವು ಕೂಡ ಸಹಕರಿಸಿ ಎಂದು ಚಿಮೂ ಮಗ ವಿನಯ್ಕುಮಾರ್ ಕುಟುಂಬದ ಸದಸ್ಯರಿಗೆ ಹಾಗೂ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ.ಇತಿಹಾಸ ತಜ್ಞರಾಗಿದ್ದ ಆಗಿದ್ದ ಚಿಮೂಗೆ ಹಂಪಿಯ ಜೊತೆ ವಿಶಿಷ್ಟ ನಂಟು ಒಡನಾಟವಿತ್ತು . ತನ್ನ ಕೊನೆಯ ಪಯಣ ಹಂಪಿಯಲ್ಲೇ ಆಗಬೇಕು ಎಂದು ಬಯಕೆ ತೋಡಿಕೊಂಡಿದ್ದರು .ಮೇಲಾಗಿ ಹಂಪಿ ಉತ್ಸವ ನಡೆಯುತ್ತಿರುವ ಸಮಯದಲ್ಲೇ ನಿಧನರಾಗಿರುವುದು ಕಾಕಾತಾಳಿಯವೂ ಆಗಿದೆ .
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 