ಜಿಎಸ್ ಟಿ ಮಂಡಲಿ ಸಭೆಯಲ್ಲಿ ಕೇಂದ್ರ, ರಾಜ್ಯಗಳ ಸಂಘರ್ಷ?
ನವದೆಹಲಿ, ಡಿ 16 ರಾಜ್ಯಗಳಿಗೆ
ನೀಡಬೇಕಿರುವ ಬಾಕಿ ಪರಿಹಾರ ಮೊತ್ತ ಪಾವತಿ ವಿಷಯವು
ಇದೆ 18 ರಂದು ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ
ಮಂಡಲಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ
ಕಾವೇರಿದ ವಾತಾವರಣ, ಮಾತಿನ ಚಕಿಮಕಿ ನಡೆಯಲಿದೆ
ಎನ್ನಲಾಗಿದೆ. ಆದರೆ ಈ ವಿಷಯ ಕೌನ್ಸಿಲ್ ಸಭೆಯ ಪ್ರಮುಖ ಕಾರ್ಯಸೂಚಿಯ ಭಾಗವಾಗದಿದ್ದರೂ ಸಹ ಕಾವೇರಿದ ಮಾತಿನ ಚಕಮಕಿಗೆ
ಕಾರಣವಾಗುವ ಸಾಧ್ಯತೆ ಬಹಳವಾಗಿದೆ ಎನ್ನಲಾಗಿದೆ. ಬಿಜೆಪಿಯೇತರ ಆಡಳಿತ ರಾಜ್ಯಗಳ ಹಣಕಾಸು ಸಚಿವರು ಸಭೆಯ ಕಾರ್ಯತಂತ್ರ ಕುರಿತು ಸೋಮವಾರ ಚರ್ಚಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.ಪರಿಹಾರದ ವಿಷಯವನ್ನು ಬುಧವಾರ ತೆಗೆದುಕೊಳ್ಳಲು
ಕೌನ್ಸಿಲ್ ವಿಫಲವಾದರೆ ಕೆಲವರು ಮಂಡಳಿ ಸಭೆ ಬಹಿಷ್ಕರಿಸಿ ಸಭೆಯಿಂದ ಹೊರಹೋಗುವ ಸಾದ್ಯತೆಯೂ ಇದೆ, ರಾಜ್ಯಗಳಿಗೆ
ಕೇಂದ್ರ ಬಾಕಿ ಉಳಿಸಿಕೊಂಡಿರುವುದೇ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಹೆಚ್ಚಿನ ರಾಜ್ಯಗಳು
ಸಭೆಯಿಂದ ಹೊರ ನಡೆದರೆ ಸಭೆಯ ಉದ್ದೇಶವೇ ಸಫಲವಾಗದು ಎಂದು ಹೇಳಲಾಗಿದ್ದು ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆಗೂ ಇದು ಕಾರಣವಾಗಲಿದೆ ಎನ್ನಲಾಗಿದೆ ಸಭೆಯಲ್ಲಿ , ಜಿಎಸ್ಟಿ
ಬಗ್ಗೆ ಯಾವುದೇ ನಿರ್ಧಾರ ಪ್ರಕಟವಾಗದೆ ಇರಲೂಬಹುದು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 