ಅಂತರರಾಷ್ಟ್ರೀಯ

ಗ್ರೀಸ್‌ನಲ್ಲಿ ಕಾರ್ಗೋ ವಿಮಾನ ಪತನ: 8 ಮಂದಿ ಸಾವಿನ ಶಂಕೆ

ಗ್ರೀಸ್‌ನಲ್ಲಿ ಕಾರ್ಗೋ ವಿಮಾನ ಪತನ: 8 ಮಂದಿ ಸಾವಿನ ಶಂಕೆ

ಅಥೆನ್ಸ್: ಜುಲೈ 17 :ಉತ್ತರ ಗ್ರೀಕ್ ನಗರದ ಕವಾಲಾ ಬಳಿ ಸರಕು ಸಾಗಣೆ ವಿಮಾನವೊಂದು ಪತನಗೊಂಡಿದೆ. ಬಿಬಿಸಿ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ.ಉಕ್ರೇನಿಯನ್ ಕಂಪನಿಯೊಂದು ನಿರ್ವಹಿಸುತ್ತಿದ್ದ ಆಂಟೊನೊವ್-12 ಶನಿವಾರ ಸೆರ್ಬಿಯಾದಿಂದ ಜೋರ್ಡಾನ್‌ಗೆ ಹಾರುತ್ತಿದ್ದಾಗ ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.ವಿಮಾನದಲ್ಲಿ ಎಷ್ಟು ಮಂದಿ ಇದ್ದರು? ಅವರಲ್ಲಿ ಯಾರಾದ್ರೂ ಬದುಕುಳಿದಿದ್ದಾರೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ವರದಿಗಳ ಪ್ರಕಾರ ಎಂಟು ಜನರು ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಗ್ರೀಸ್‌ನ ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಇಆರ್‌ಟಿ ತನ್ನ ವರದಿಯಲ್ಲಿ ವಿಮಾನವು 12 ಟನ್ ಸರಕನ್ನು ಹೊತ್ತೊಯ್ದಿದ್ದು, ಇದು ನಿಗದಿಗಿಂತ ಅಪಾಯಕಾರಿ ಎಂದು ವಿವರಿಸಲಾಗಿದೆ. ಇಂಜಿನ್ ವೈಫಲ್ಯವನ್ನು ಕಂಡ ಪೈಲಟ್ ಕವಾಲಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವಂತೆ ಮನವಿ ಮಾಡಿದರು. ಆದ್ರೆ ವಿಮಾನ ರನ್‌ವೇ ತಲುಪಲು ವಿಫಲವಾಗಿದೆ.

ವಿಮಾನ ಅಪಘಾತದ ಬಗ್ಗೆ ದೃಶ್ಯಾವಳಿಗಳು ಹೊರಬಂದಿದ್ದು, ವಿಮಾನದಲ್ಲಿ ಅಗ್ನಿ ಕಾಣಿಸಿಕೊಂಡಿದೆ. ಬಳಿಕ ಭೂಮಿ ತಲುಪಿಸುವಷ್ಟರಲ್ಲೇ ಸ್ಫೋಟಗೊಂಡಿದೆ. ಅಧಿಕಾರಿಗಳ ಪ್ರಕಾರ, ಅಪಘಾತದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಆದರೆ ನಿರಂತರ ಸ್ಫೋಟದಿಂದಾಗಿ ವಿಮಾನದ ಸಾಮಿಪ್ಯಕ್ಕೂ ಅಗ್ನಿಶಾಮಕ ವಾಹನಗಳು ತಲುಪಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಓದಿ