ಕಾರು- ಬೈಕ್ ನಡುವೆ ಡಿಕ್ಕಿ: ಸವಾರ ಗಂಭೀರ ಗಾಯ

ಕಾರು- ಬೈಕ್ ನಡುವೆ ಡಿಕ್ಕಿ: ಸವಾರ  ಗಂಭೀರ ಗಾಯ Car-bike collision: Rider critically injured.

ಲೋಕದರ್ಶನ ವರದಿ. 

ಜಮಖಂಡಿ ೨೦: ನಗರದ ಹೊರವಲಯದ ಮುಧೋಳ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಹೊಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು. ಬೈಕ್ ಸವಾರನ  ಗಂಭೀರವಾಗಿ ಗಾಯಗೊಂಡರುವ ಘಟನೆ ಸಂಭವಿಸಿದೆ. 

ನಗರದ ರ‍್ಟಿಓ ಕಚೇರಿ ಸಮೀಪ ರಾತ್ರಿ ಸುಮಾರು ೧೦ ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು. ಬೈಕ್ ಸವಾರ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಮಲ್ಲು ಕಾಂಬಳೆ ಎಂದು ಮಾಹಿತಿ ಲಭ್ಯವಾಗಿದೆ. ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ  ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.