ಕೋವಿಡ್ 19 : ವಿಶ್ವಾದ್ಯಂತ 27.7 ದಶಲಕ್ಷ ಸೋಂಕು ಪ್ರಕರಣ
ವಾಷಿಂಗ್ಟನ್, ಸೆ 10: ಜಗತ್ತಿನಾದ್ಯಂತ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 27.7 ಮಿಲಿಯನ್‌ಗೆ ತಲುಪಿದ್ದರೆ, ಸಾವಿನ ಸಂಖ್ಯೆ 901,000 ಕ್ಕೆ ಏರಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಒಟ್ಟು ಪ್ರಕರಣಗಳ ಸಂಖ್ಯೆ ಗುರುವಾರ 27,719,952 ಮತ್ತು ಸಾವುನೋವುಗಳು 901,050 ಕ್ಕೆ ಏರಿದೆ ಎಂದು ಯೂನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತನ್ನ ಇತ್ತೀಚಿನ ನವೀಕರಣದಲ್ಲಿ ಬಹಿರಂಗಪಡಿಸಿದೆ.
ಸಿಎಸ್‌ಎಸ್‌ಇ ಪ್ರಕಾರ, ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ಕ್ರಮವಾಗಿ 6,359,313 ಮತ್ತು 190,796 ರಷ್ಟಿದೆ. ಭಾರತ ಪ್ರಸ್ತುತ 4,370,128 ಪ್ರಕರಣದೊಂದಿಗೆಎರಡನೇ ಸ್ಥಾನದಲ್ಲಿದ್ದು, ಸಾವಿನ ಸಂಖ್ಯೆ 73,890 ರಷ್ಟಿದೆ.
ಪ್ರಕರಣಗಳ ವಿಷಯದಲ್ಲಿ, ಬ್ರೆಜಿಲ್ ಮೂರನೇ ಸ್ಥಾನದಲ್ಲಿದ್ದು, 4,162,073 ಸೋಂಕಿತರಿದ್ದಾರೆ. ನಂತರದ ಸ್ಥಾನದಲ್ಲಿ ರಷ್ಯಾ 1,037,526, ಪೆರು 696,190, ಕೊಲಂಬಿಯಾ 679,513, ಮೆಕ್ಸಿಕೊ 647,321, ದಕ್ಷಿಣ ಆಫ್ರಿಕಾ 642,431 ಮತ್ತು ಸ್ಪೇನ್ 543,379 ಪ್ರಕರಣಗಳಿವೆ ಎಂದು ಸಿಎಸ್ಎಸ್ಇ ಅಂಕಿಅಂಶಗಳು ತೋರಿಸಿದೆ.